ETV Bharat / entertainment

ಅಣ್ಣ 'ರಾಘು' ಸಿನಿಮಾಕ್ಕೆ ತಮ್ಮ ಶ್ರೀಮುರಳಿ ಸಾಥ್​ - ವಿಜಯ್ ರಾಘವೇಂದ್ರ

ನಟ ವಿಜಯ್ ರಾಘವೇಂದ್ರ ನಟಿಸುತ್ತಿರುವ 'ರಾಘು' ಸಿನಿಮಾದ ಮುಹೂರ್ತ ಗುರುವಾರ ನಗರದ ರಾಮಾಂಜನೇಯ ಗುಡ್ಡ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ಅಣ್ಣನ ಸಿನಿಮಾಕ್ಕೆ ಕ್ಲ್ಯಾಪ್ ಮಾಡುವ ಮೂಲಕ ತಮ್ಮ ಶ್ರೀಮುರಳಿ ಸಾಥ್ ನೀಡಿದರು.

ರಾಘು
ರಾಘು
author img

By

Published : May 6, 2022, 9:00 AM IST

ವಿಭಿನ್ನ ಪಾತ್ರಗಳಲ್ಲಿ ಅಮೋಘ ನಟನೆಯಿಂದ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸುತ್ತಿರುವ ನಟ ವಿಜಯ್ ರಾಘವೇಂದ್ರ ಅಭಿನಯದ 'ರಾಘು' ಸಿನಿಮಾದ ಮುಹೂರ್ತ ಗುರುವಾರ ನಗರದ ರಾಮಾಂಜನೇಯ ಗುಡ್ಡ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ಅಣ್ಣನ ಸಿನಿಮಾಕ್ಕೆ ಕ್ಲ್ಯಾಪ್ ಮಾಡುವ ಮೂಲಕ ತಮ್ಮ ಶ್ರೀಮುರಳಿ ಸಾಥ್ ನೀಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಬಳಿಕ ಮಾತನಾಡಿದ ವಿಜಯ್ ರಾಘವೇಂದ್ರ, ಎಲ್ಲರೂ ಪ್ರೀತಿಯಿಂದ ಬಂದಿದ್ದೀರಿ. ಖುಷಿಯಾಗುತ್ತಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಶುಭ ಹಾರೈಸುವುದಕ್ಕೆ ಶ್ರೀಮುರಳಿ ಬಂದಿದ್ದಾರೆ. ಇಡೀ ತಂಡದ ಮೇಲೆ ನಿಮ್ಮ ಸಹಕಾರ ಇರಲಿ ಎಂದರು.

Raghu
ವಿಜಯ್ ರಾಘವೇಂದ್ರ, ಶ್ರೀಮುರಳಿ

ಶ್ರೀಮುರಳಿ ಮಾತನಾಡಿ ಟೈಟಲ್ ತುಂಬಾ ಚೆನ್ನಾಗಿದೆ. ನಮ್ಮಣ್ಣನಿಗೆ ಒಳ್ಳೆದಾಗಲಿ. ಇದೊಂದು ಎನರ್ಜೆಟಿಕ್ ಟೀಂ. ಒಳ್ಳೆ ಸಿನಿಮಾ ಮಾಡಿದಾಗ ಅಭಿಮಾನಿ ದೇವರುಗಳು ಇಷ್ಟಪಡುತ್ತಾರೆ ಎಂದು ಹೇಳಿದರು.

ವಿಭಿನ್ನ ಪಾತ್ರದಲ್ಲಿ ವಿಜಯ್ ರಾಘವೇಂದ್ರ : 'ಆನ', 'ಬ್ಯಾಂಗ್' ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಆನಂದ್ ರಾಜ್ 'ರಾಘು' ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಅಂದಹಾಗೇ, 'ರಾಘು' ಥ್ರಿಲ್ಲರ್ ಎಕ್ಸ್​ಪಿರಿಮೆಂಟಲ್ ಸಿನಿಮಾವಾಗಿದೆ. ಕನ್ನಡದಲ್ಲಿ ಇದೊಂದು ಹೊಸಬಗೆಯ ಸಿನಿಮಾವಾಗಿದ್ದು, ವಿಜಯ್ ರಾಘವೇಂದ್ರ ಹಿಂದೆಂದೂ ಮಾಡದ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ರಾಘು ಚಿತ್ರತಂಡ
'ರಾಘು' ಚಿತ್ರತಂಡ

ಶೂಟಿಂಗ್ ಪ್ರಾರಂಭ: ಡಿ.ಕೆ.ಎಸ್ ಸ್ಟುಡಿಯೋಸ್ ಮತ್ತು ಕೋಟ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ರಣ್ವೀತ್‌ ಶಿವಕುಮಾರ್‌, ಅಭಿಷೇಕ್‌ ಕೋಟ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, 'ಬ್ಯಾಂಗ್', 'ಫ್ಯಾಮಿಲಿ ಪ್ಯಾಕ್' ಖ್ಯಾತಿಯ ಉದಯ್‌ ಲೀಲಾ ಕ್ಯಾಮೆರಾ ವರ್ಕ್, ಸೂರಜ್‌ ಜೋಯಿಸ್‌ ಸಂಗೀತ ಸಂಯೋಜನೆ, ಅಥರ್ವ್ ಆರ್ಯ ಸಂಭಾಷಣೆ ಬರೆಯುತ್ತಿದ್ದಾರೆ. ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ 'ರಾಘು'‌ ಬಳಗ ನಿನ್ನೆಯಿಂದ ಶೂಟಿಂಗ್ ಪ್ರಾರಂಭಿಸಿದೆ.

'ರಾಘು' ಚಿತ್ರತಂಡ
'ರಾಘು' ಚಿತ್ರತಂಡ

ಇದನ್ನೂ ಓದಿ: ಸಹೋದರಿ ಜಾಹ್ನವಿ ಕಪೂರ್​​ನಂತೆ ಗ್ಲಾಮರ್ ವಿಚಾರದಲ್ಲಿ ಯಾವಾಗಲೂ 'ಖುಷಿ' ಅಂತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.