ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಸಿನಿಮಾ ಬಿಡುಗಡೆಯಾಗಿ 28 ದಿನಗಳಾಗಿವೆ. ಜೂನ್ 2ರಂದು ಬಿಡುಗಡೆಯಾದ ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆದ್ರೆ ಮೊದಲ ದಿನಗಳಲ್ಲಿ ಸಂಪಾದನೆ ಮಾಡಿದಷ್ಟು ಪ್ರಸ್ತುತ ದಿನಗಳಲ್ಲಿ ಮಾಡುತ್ತಿಲ್ಲ. ಸುಮಾರು ಒಂದು ತಿಂಗಳವರೆಗೆ ಸಿನಿಮಾ ಥಿಯೇಟರ್ನಲ್ಲಿ ಓಡಿರುವ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ 80 ಕೋಟಿ ರೂ. ಗಡಿ ದಾಟಿದ ನಂತರ ಚಿತ್ರದ ಬಾಕ್ಸ್ ಆಫೀಸ್ ಸಂಖ್ಯೆ ಕೊಂಚ ಇಳಿಕೆಯಾಗಿದೆ. 100 ಕೋಟಿ ರೂ ಕ್ಲಬ್ ಸೇರೋದು ಡೌಟ್ ಅಂತಾರೆ ಸಿನಿ ಪಂಡಿತರು.
ವರದಿಗಳ ಪ್ರಕಾರ, ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಚಲನಚಿತ್ರವು ಜೂನ್ 28 ರಂದು ಬಾಕ್ಸ್ ಆಫೀಸ್‌ನಲ್ಲಿ 90 ಲಕ್ಷ ರೂ. ಗಳಿಸಿತು. ಇದು 27ನೇ ದಿನದ ಕಲೆಕ್ಷನ್ ಸಂಖ್ಯೆ. ಸುಮಾರು 40 ಕೋಟಿ ರೂ ಬಜೆಟ್ನಲ್ಲಿ ನಿರ್ಮಾಣಗೊಂಡ ಚಿತ್ರ ಈವರೆಗೆ ದೇಶೀಯ ಮಾರುಕಟ್ಟೆಯಲ್ಲಿ 82 ಕೊಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ. ಅಂದರೆ ಹಾಕಿದ ಬಂಡವಾಳಕ್ಕಿಂತ ಎರಡು ಪಟ್ಟು ಹೆಚ್ಚು ಗಳಿಸುವಲ್ಲಿ ಸಿನಿಮಾ ಯಶ ಕಂಡಿದೆ.
ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ತಮ್ಮ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಬಯಸುವ ದಂಪತಿಗಳ ಕುರಿತಾಗಿದೆ. ಮಧ್ಯಮ ವರ್ಗದ ದಂಪತಿಯ ಕಥೆ ಹೇಳಲಾಗಿದೆ. ಕೂಡು ಕುಟುಂಬವಾದ ಹಿನ್ನೆಲೆಯಲ್ಲಿ ನವದಂಪತಿಗಳು ಖಾಸಗಿ ಮನೆ ಹೊಂದಲು ಇಚ್ಛಿಸುತ್ತಾರೆ. ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY) ಮೂಲಕ ಮನೆ ಹೊಂದಲು ವಿಚ್ಛೇದನದ ನಾಟಕ ಆಡುತ್ತಾರೆ. ಆದ್ರೆ ಯಾವುದೂ ವರ್ಕೌಟ್ ಆಗುವುದಿಲ್ಲ. ಇವರ ಡಿವೋರ್ಸ್ ನಾಟಕದ ನಡುವೆ ಲವ್ ಸ್ಟೋರಿ ಪ್ರೇಕ್ಷಕರ ಗಮನ ಸೆಳೆದಿದೆ. ಇಂದೋರ್ನಲ್ಲಿ ನಡೆಯುವ ಕಥೆ ಇದಾಗಿದ್ದು, ಚಿತ್ರದ ಶೂಟಿಂಗ್ ಕೂಡಾ ಅಲ್ಲೇ ನಡೆಸಲಾಗಿದೆ. ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ನಟಿ ಸಾರಾ ಅಲಿಖಾನ್ ಇಂದೋರ್ಗೆ ಭೇಟಿ ನೀಡಿದ್ದರು. ಅಲ್ಲಿನ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Animal: ರಗಡ್ ಲುಕ್ನಲ್ಲಿ ರಣ್ಬೀರ್ ಕಪೂರ್ - ಅನಿಮಲ್ ಸೆಟ್ನಿಂದ ನಟನ ಫೋಟೋ ವೈರಲ್
ಜರಾ ಹಟ್ಕೆ ಜರಾ ಬಚ್ಕೆ ಜೂನ್ 2ರಂದು ಥಿಯೇಟರ್‌ಗಳಲ್ಲಿ ತೆರೆಕಂಡಿತು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಸರಿಸುಮಾರು 5.25 ಕೋಟಿ ರೂ. ಗಳಿಸಿತು. ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆಯನ್ನು ನೀಡಿದರು. ಆದ್ರೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಾ ಮುಂದುವರಿಯಿತು. 27ನೇ ದಿನಕ್ಕೆ ಚಿತ್ರದ ದೇಶೀಯ ಬಾಕ್ಸ್ ಆಫೀಸ್ ಗಳಿಕೆಯು ಸುಮಾರು 90 ಲಕ್ಷ ರೂ.ಗೆ ಇಳಿಯಿತು.
ಇದನ್ನೂ ಓದಿ: Oscar Members: ರಾಮ್ ಚರಣ್, ಜೂ. ಎನ್ಟಿಆರ್ ಸೇರಿ ಹಲವು ಭಾರತೀಯರಿಗೆ ಸಿಕ್ತು ಆಸ್ಕರ್ ಸದಸ್ಯತ್ವ