ETV Bharat / entertainment

Zara Hatke Zara Bachke ಯಶಸ್ವಿ ಪ್ರದರ್ಶನ : 2 ನೇ ವಾರಾಂತ್ಯಕ್ಕೆ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು ಗೊತ್ತಾ?

ಬಾಲಿವುಡ್​ನ ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ಎರಡನೇ ವಾರಾಂತ್ಯಕ್ಕೆ ಉತ್ತಮ ಕಲೆಕ್ಷನ್​ ಮಾಡಿದ್ದು, ಚಿತ್ರದ ಎರಡು ವಾರದ ಕಲೆಕ್ಷನ್​ ವಿವರ ಇಲ್ಲಿದೆ.

ಜರಾ ಹಟ್ಕೆ ಜರಾ ಬಚ್ಕೆ ಕಲೆಕ್ಷನ್​
ಜರಾ ಹಟ್ಕೆ ಜರಾ ಬಚ್ಕೆ ಕಲೆಕ್ಷನ್​
author img

By

Published : Jun 12, 2023, 2:18 PM IST

Updated : Jun 12, 2023, 3:05 PM IST

ಹೈದರಾಬಾದ್: ಇತ್ತೀಚೆಗೆ ತೆರೆಕಂಡ ವಿಕ್ಕಿ ಕೌಶಲ್​ ಮತ್ತು ಸಾರಾ ಅಲಿಖಾನ್​ ಅಭಿನಯದ 'ಜರಾ ಹಟ್ಕೆ ಜರಾ ಬಚ್ಕೆ' ಬಾಲಿವುಡ್​ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಖತ್​ ಸದ್ದು ಮಾಡುತ್ತಿದೆ. ಲಕ್ಷ್ಮಣ್ ಉಟೇಕರ್ ಅವರ ನಿರ್ದೇಶನದ ಈ ಚಿತ್ರ ಬಿಡುಗಡೆಯಾಗಿ 10 ದಿನಗಳು ಪೂರ್ಣಗೊಳಿಸಿದ್ದು, ಎರಡನೇ ವಾರಾಂತ್ಯಕ್ಕೆ 16.20 ಕೋಟಿ ರೂ ಗಳಿಕೆ ಮಾಡಿದೆ. ಈ ಮೂಲಕ ಬಾಕ್ಸ್​ ಆಫೀಸ್​ನಲ್ಲಿ​ ಎರಡು ವಾರಗಳಲ್ಲಿ 53.55 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಫ್ಯಾಮಿಲಿ ಎಂಟರ್​ಟ್ರೈನರ್​ ಚಿತ್ರವಾಗಿರುವ ಇದು ಬಿಡುಗಡೆ ದಿನದಂದು 5.49 ಕೋಟಿ ಬಾಚಿಕೊಂಡು ಉತ್ತಮ ಇನ್ನಿಂಗ್ಸ್​ ಆರಂಭಿಸಿತು​. ಮೊದಲ ವಾರಾಂತ್ಯದಲ್ಲಿ 37.35 ಕೋಟಿ ರೂ ಹರಿದು ಬಂದಿತ್ತು.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರವು 7.02 ಕೋಟಿ ರೂಪಾಯಿಗಳ ನೋಂದಾಯಿತ ವ್ಯಾಪಾರವನ್ನು ಹೊಂದಿದೆ, ಇದು 9ನೇ ದಿನದ ಕಲೆಕ್ಷನ್‌ಗಿಂತ ದೊಡ್ಡದಾಗಿದೆ. ಮೊದಲ ವಾರ 37.35 ಕೋಟಿ ರೂ. ಗಳಿಸಿದರೆ, 2ನೇ ವಾರ 16.20 ಕೋಟಿ ಗಳಿಸಿದೆ. ಚಲನಚಿತ್ರ ಬಿಡುಗಡೆಯಾದ 10 ದಿನಗಳ ನಂತರ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 53.55 ಕೋಟಿ ರೂ. ಕಲೆಕ್ಷನ್​​ ಮಾಡಿದೆ.

ಜರಾ ಹಟ್ಕೆ ಜರಾ ಬಚ್ಕೆ 10 ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್​

  • ಮೊದಲ ದಿನ Rs 5.49 cr
  • ಎರಡನೇ ದಿನ Rs 7.20 cr
  • ಮೂರನೇ ದಿನ Rs 9.90 cr
  • ಐದನೇ ದಿನ Rs 4.14 cr
  • ಆರನೇ ದಿ Rs 3.87 cr
  • ಏಳನೇ ದಿನ Rs 3.51 cr
  • ಎಂಟನೇ ದಿನ Rs 3.24 cr
  • ಒಂಭತ್ತನೇ ದಿನೆ Rs 5.76 cr
  • ಹತ್ತನೇ ದಿನ Rs 7.02 cr

ಜರಾ ಹಟ್ಕೆ ಜರಾ ಬಚ್ಕೆ ವಾರದ ಬಾಕ್ಸ್ ಆಫೀಸ್ ಕಲೆಕ್ಷನ್

  • ಮೊದಲ ವಾರ : ₹ 37.35 cr
  • ಎರಡನೇ ವಾರ: ₹ 16.20 cr

ಒಟ್ಟು : ₹ 53.55 cr

ದಿನೇಶ್ ವಿಜನ್ ನಿರ್ಮಾಣದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಹೊಂದಿದ್ದು, ಜೂನ್ 16 ಪ್ರಭಾಸ ಅಭಿನಯದ ಆದಿಪುರುಷ ಚಿತ್ರ ಬಿಡುಗಡೆಯಾಗುವವರೆಗೂ ಚಿತ್ರ ಕಲೆಕ್ಷನ್​ ಮಾಡಲಿದೆ ಎಂದು ಸಿನಿ ಪ್ರೇಕ್ಷಕರ ಮಾತಾಗಿದೆ.

'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾ ಕಥೆಯು ಇಂದೋರ್‌ನಲ್ಲಿ ಆರಂಭವಾಗುತ್ತದೆ. ಇದರಲ್ಲಿ ಇಬ್ಬರು ಕಾಲೇಜು ಪ್ರೇಮಿಗಳ ಕಪಿಲ್ ಹೆಸರಿನ ವಿಕ್ಕಿ ಕೌಶಲ್ ಮತ್ತು ಸೌಮ್ಯ ಹೆಸರಿ ಸಾರಾ ಅಲಿ ಖಾನ್ ಅವರ ಲವ್​ ಸ್ಟೋರಿ ಕಥೆಯ ಸಿನಿಮಾವಾಗಿದೆ. ಈ ಇಬ್ಬರು ಪ್ರೇಮಿಗಳು ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುತ್ತಾರೆ. ಹಾಸ್ಯದ ಜೊತೆ ಲವ್​ಸ್ಟೋರಿ ಚಿತ್ರದಲ್ಲಿದ್ದು, ಫ್ಯಾಮಿಲಿ ಎಂಟರ್​ಟ್ರೈನರ್​ ಚಿತ್ರವಾಗಿದೆ.

ಇದನ್ನೂ ಓದಿ: 'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾದಲ್ಲಿ ಮಧ್ಯಮ ವರ್ಗ ಕುಟುಂಬದ ಚಿತ್ರಣ: ವಾರದೊಳಗೆ 35 ಕೋಟಿ ರೂ. ಗಳಿಕೆ!

Last Updated : Jun 12, 2023, 3:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.