ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅವರ ಜರಾ ಹಟ್ಕೆ ಜರಾ ಬಚ್ಕೆ ( Zara Hatke Zara Bachke ) ಸಿನಿಮಾ ನಿನ್ನೆ ಚಿತ್ರಮಂದಿರಗಳಲ್ಲಿ (ಶುಕ್ರವಾರ, ಜೂನ್ 2) ತೆರೆಕಂಡಿದೆ. ಬಾಕ್ಸ್ ಆಫೀಸ್ನಲ್ಲಿ ಪಯಣ ಆರಂಭಿಸಿದೆ. ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನ 5.49 ಕೋಟಿ ರೂ. ಸಂಪಾದನೆ ಮಾಡಿದೆ.
-
#ZaraHatkeZaraBachke takes off on Day 1… Silences naysayers and pessimists, who had predicted [below] ₹ 2 cr start… Got a boost due to Buy-1-Get-1 free ticket offer + affordable ticket pricing, which has given its biz the required push… Fri ₹ 5.49 cr. #India biz.
— taran adarsh (@taran_adarsh) June 3, 2023 " class="align-text-top noRightClick twitterSection" data="
The… pic.twitter.com/tFhk996o6Y
">#ZaraHatkeZaraBachke takes off on Day 1… Silences naysayers and pessimists, who had predicted [below] ₹ 2 cr start… Got a boost due to Buy-1-Get-1 free ticket offer + affordable ticket pricing, which has given its biz the required push… Fri ₹ 5.49 cr. #India biz.
— taran adarsh (@taran_adarsh) June 3, 2023
The… pic.twitter.com/tFhk996o6Y#ZaraHatkeZaraBachke takes off on Day 1… Silences naysayers and pessimists, who had predicted [below] ₹ 2 cr start… Got a boost due to Buy-1-Get-1 free ticket offer + affordable ticket pricing, which has given its biz the required push… Fri ₹ 5.49 cr. #India biz.
— taran adarsh (@taran_adarsh) June 3, 2023
The… pic.twitter.com/tFhk996o6Y
ತರಣ್ ಆದರ್ಶ್ ಟ್ವೀಟ್: "ಜರಾ ಹಟ್ಕೆ ಜರಾ ಬಚ್ಕೆ ಪಯಣ ಪ್ರಾರಂಭಿಸಿದೆ. 2 ಕೋಟಿ ರೂ. ಗೂ ಕಡಿಮೆ ಸಂಪಾದಿಸಬಹುದೆಂದು ಊಹಿಸಿದ್ದ ನಿರಾಶಾವಾದಿಗಳನ್ನು ಮೌನಗೊಳಿಸಿದೆ. ಬೈ 1 ಗೆಟ್ 1 ಟಿಕೆಟ್ ಆಫರ್ + ಕೈಗೆಟುಕುವ ಟಿಕೆಟ್ ಬೆಲೆಯಿಂದಾಗಿ ಚಿತ್ರ ಉತ್ತೇಜನವನ್ನು ಪಡೆದುಕೊಂಡಿದೆ. ಮೊದಲ ದಿನ ಈ ಚಿತ್ರ 5.49 ಕೋಟಿ ರೂ. ಕಲೆಕ್ಷನ್ ಮಾಡಿದೆ'' ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
"ಶುಕ್ರವಾರ ತೆರೆಕಂಡಿರುವ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಕಲೆಕ್ಷನ್ ಸಂಖ್ಯೆ ವಾರಾಂತ್ಯ ಶನಿವಾರ ಮತ್ತು ಭಾನುವಾರದಂದು ವೇಗವನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ. ಟಿಕೆಟ್ ಆಫರ್ ಭಾನುವಾರ ರಾತ್ರಿಯವರೆಗೆ ಮುಂದುವರಿಯುತ್ತದೆ,. ಇದು ಚಿತ್ರದ ಆರಂಭಿಕ ವಾರಾಂತ್ಯದಲ್ಲಿ ಬಲವಾದ ಮೊತ್ತವನ್ನು ತೋರಿಸಲು ಸಹಾಯಕವಾಗಲಿದೆ'' ಎಂದು ಹೇಳಿದ್ದಾರೆ.
ಲಕ್ಷ್ಮಣ್ ಉಟೇಕರ್ ನಿರ್ದೇಶನದ 'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾವನ್ನು ಇಂದೋರ್‌ನಲ್ಲಿ ಶೂಟ್ ಮಾಡಲಾಗಿದೆ. ಚಿತ್ರದ ಕಥೆ ಮಧ್ಯಮ ವರ್ಗದ ದಂಪತಿ ಸುತ್ತ ಸುತ್ತುತ್ತದೆ.
"ಲಕ್ಷ್ಮಣ್ ಸರ್ ಅವರೊಂದಿಗೆ ಕೆಲಸ ಮಾಡುವುದು ಸಂತೋಷಕರ ಅನುಭವ. ನಾನು ಚಿತ್ರೀಕರಣದ ವೇಳೆ ವಿಶೇಷವಾಗಿ ಸಾರಾ ಅವರೊಂದಿಗೆ ಉತ್ತಮ ಸಮಯ ಕಳೆದೆ. ನಮ್ಮ ಸಿನಿಮಾವನ್ನು ಪ್ರೇಕ್ಷಕರು ಇಷ್ಟ ಪಡುತ್ತಾರೆ ಎಂದು ಭಾವಿಸುತ್ತೇವೆ" ಎಂದು ಇತ್ತೀಚೆಗೆ ವಿಕ್ಕಿ ಕೌಶಲ್ ತಿಳಿಸಿದ್ದರು. "ಇಂಥ ಪ್ರತಿಭಾವಂತ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ನನ್ನದಾಗಿದೆ, ಇದಕ್ಕೆ ನಾನು ಕೃತಜ್ಞನಾಗಿದ್ದೇನೆ. ಚಿತ್ರವು ಸಂಬಂಧಗಳು, ಮದುವೆ ಬಗ್ಗೆ ವಿಶಿಷ್ಟವಾದ ಕಥೆಯನ್ನು ಹೊಂದಿದೆ. ಪ್ರೇಕ್ಷಕರು ಸಿನಿಮಾ ಸ್ವೀಕರಿಸುವ ರೀತಿಯ ಬಗ್ಗೆ ತಿಳಿಯಲು ಉತ್ಸುಕಳಾಗಿದ್ದೇನೆ" ಎಂದು ಸಾರಾ ಅಲಿಖಾನ್ ಹೇಳಿದ್ದರು.
ಇದನ್ನೂ ಓದಿ: ಪೊಲೀಸ್ ಪಾತ್ರದಲ್ಲಿ ನಟ ರಿಷಿ: ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ ನೀನಾಸಂ ಸತೀಶ್
ಈ ಹಿಂದೆ ಲುಕಾ ಚುಪ್ಪಿ ಮತ್ತು ಮಿಮಿಯಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಕೂಡ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ಈ ಚಿತ್ರ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಇದು ದೇಶಾದ್ಯಂತದ ಪ್ರೇಕ್ಷಕರಿಗೆ ಹಿಡಿಸುವಂತಹ ಕಥೆಯಾಗಿದೆ. ಪರಿಪೂರ್ಣವಾದ ಕುಟುಂಬದ ಚಿತ್ರವಾಗಿದ್ದು, ಇದು ನಿಮಗೆ ಸಂಪೂರ್ಣ ಮನರಂಜನೆ ನೀಡುತ್ತದೆ" ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ZHZB: 'ಸರ್ಕಾರದಿಂದ ಸಿಗುವ ಮನೆ ಹೊಂದಲು ದಂಪತಿಯ ವಿಚ್ಛೇದನ ನಾಟಕ'
ನಿರ್ಮಾಪಕ ದಿನೇಶ್ ವಿಜನ್ ಮಾತನಾಡಿ, "ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಲಕ್ಷ್ಮಣ್ ಅವರ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆ ಇದೆ. ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಸರಿಯಾದ ಭಾವನೆಯೊಂದಿಗೆ, ಮನರಂಜನೆ ನೀಡಲಿದೆ. ಸಾಮಾನ್ಯ ಜನರ ಜೀವನದಂತೇ ಇದೆ ನಮ್ಮ ಈ ಸಿನಿಮಾ. ನಮ್ಮ ಚಿತ್ರಗಳಾದ ಲುಕಾ ಚುಪ್ಪಿ ಮತ್ತು ಮಿಮಿ, ಇದು ಕೂಡ ಎಲ್ಲಾ ವಯಸ್ಸಿನ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಿದೆ. ಈ ಸಿನಿಮಾಗಳು ಕುಟುಂಬಗಳು ಒಟ್ಟಾಗಿ ಸೇರಿ ಆನಂದಿಸಬಹುದಾದ ಪರಿಪೂರ್ಣ ಎಂಟರ್ಟೈನ್ಮೆಂಟ್ ಚಿತ್ರಗಳು'' ಎಂದಿದ್ದಾರೆ.