ETV Bharat / entertainment

ಶಾಸಕ ಜಮೀರ್ ಸುಪುತ್ರ ಝೈದ್ ಖಾನ್​ರ ಬನಾರಸ್ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್

author img

By

Published : Aug 31, 2022, 1:53 PM IST

ಶಾಸಕ ಜಮೀರ್ ಸುಪುತ್ರ ಝೈದ್ ಖಾನ್​ರ ಬನಾರಸ್ ಸಿನಿಮಾ ನವೆಂಬರ್ 4ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

Zaid Khan starrer Banaras movie will release on November 4th
ನವೆಂಬರ್ 4ಕ್ಕೆ ಬನಾರಸ್ ಸಿನಿಮಾ ಬಿಡುಗಡೆ

ರಾಜಕಾರಣಿ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್​​ ಸುಪುತ್ರ ಝೈದ್ ಖಾನ್ ಅವರು ಬನಾರಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಸದ್ಯದಲ್ಲೇ ಎಂಟ್ರಿ ಕೊಡಲಿದ್ದಾರೆ. ಸದ್ಯ ಪೋಸ್ಟರ್, ಹಾಡುಗಳಿಂದ ಗಮನ ಸೆಳೆಯುತ್ತಿರೋ ಬನಾರಸ್ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಹೌದು, ಇದೇ ನವೆಂಬರ್ 4ರಂದು ಚಿತ್ರವು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

ಝೈದ್ ಖಾನ್ ನಾಯಕನಾಗಿ ಅಭಿನಯಿಸಿರುವ ಮೊದಲ ಸಿನಿಮಾ ಬನಾರಸ್ ಈಗಾಗಲೇ 'ಮಾಯಗಂಗೆ' ಎಂಬ ಮೋಹಕ ಹಾಡಿನ ಮೂಲಕ ಎಲ್ಲರನ್ನೂ ಆವರಿಸಿಕೊಂಡಿದೆ. ಸಾಮಾನ್ಯವಾಗಿ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದರೆ ಚಿತ್ರ ಸಹ ದೊಡ್ಡ ಗೆಲುವು ಸಾಧಿಸುತ್ತದೆ ಎಂಬ ನಂಬಿಕೆ ಚಿತ್ರ ರಂಗದಲ್ಲಿದೆ. ಬನಾರಸ್ ಸಿನಿಮಾ ವಿಚಾರದಲ್ಲಿ ಅದು ನಿಜವಾಗುವ ಲಕ್ಷಣಗಳು ದಟ್ಟವಾಗಿವೆ. ಜಯತೀರ್ಥ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಬನಾರಸ್ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ.

ಇತ್ತೀಚಿನ ದಿನಗಳಲ್ಲಿ ಕೆಲ ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಈ ಮೂಲಕ ಕನ್ನಡದ ಕೀರ್ತಿ ಪತಾಕೆ ರಾಷ್ಟ್ರ ಮಟ್ಟದಲ್ಲಿ ಹಾರುತ್ತಿದೆ. ಬನಾರಸ್ ಮೂಲಕ ಕನ್ನಡ ಚಿತ್ರ ರಂಗದ ಘನತೆಗೆ ಮತ್ತೊಂದು ಗರಿ ಮೂಡಲಿದೆ ಎನ್ನುವ ನಂಬಿಕೆ ಚಿತ್ರ ತಂಡದಲ್ಲಿದೆ.

ಚಿತ್ರವನ್ನು ತಿಲಕ್ ರಾಜ್ ಬಲ್ಲಾಳ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಇದರೊಳಗಿನ ಕಥೆ ಎಷ್ಟು ಕಾಡಲಿದೆಯೋ, ಚಿತ್ರ ತನ್ನ ಅದ್ಧೂರಿತನದಿಂದ ಸಹ ಗಮನ ಸೆಳೆಯಲಿದೆ. ಒಟ್ಟಾರೆಯಾಗಿ ಇದೊಂದು ವಿಭಿನ್ನ ಬಗೆಯ ಚಿತ್ರವೆಂಬ ಸ್ಪಷ್ಟ ಸಂದೇಶ ಈಗಾಗಲೇ ರವಾನೆಯಾಗಿದೆ. ಸದ್ಯದಲ್ಲೇ ಬನಾರಸ್ ಸಿನಿಮಾ ಪ್ರಚಾರ ಕಾರ್ಯ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ. ಬನಾರಸ್ ಬಗೆಗಿನ ಇನ್ನಷ್ಟು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಬಜಾರ್ ಹುಡುಗ ಧನ್ವೀರ್ ಹೊಸ ಸಿನಿಮಾ ಕೈವ ಫಸ್ಟ್ ಲುಕ್ ರಿವೀಲ್.. ಗೆಸ್​ ಲುಕ್​ ಮೇಲೆ ಹೆಚ್ಚಿದ ಕುತೂಹಲ

ದೊಡ್ಡ ತಾರಾಗಣ, ಪಳಗಿದ ತಾಂತ್ರಿಕ ವರ್ಗ ಮತ್ತು ಪ್ರತಿಭಾವಂತ ಕಲಾವಿದರಿಂದ ತುಂಬಿರುವ ಬನಾರಸ್ ಸಿನಿಮಾ ಆರಂಭದಿಂದ ಈವರೆಗೂ ಕುತೂಹಲ ಕಾಯ್ದಿಟ್ಟುಕೊಂಡು ಬಂದಿದೆ. ಅದರಲ್ಲೂ ವಿಶೇಷವಾಗಿ ಬನಾರಸ್ ಮೂಲಕ ಝೈದ್ ಖಾನ್ ಎಂಬ ಅಪ್ಪಟ ಕನ್ನಡಿಗನ, ಪ್ರತಿಭಾವಂತ ಹೀರೋನ ಆಗಮನವಾಗುತ್ತಿದೆ. ಝೈದ್ ಈ ಚಿತ್ರಕ್ಕಾಗಿ ಪಟ್ಟಿರುವ ಪರಿಶ್ರಮ, ತಯಾರಾಗಿರುವ ರೀತಿಯೇ ಅವರ ಬಗ್ಗೆ ಭರವಸೆ ಹೆಚ್ಚಿಸಿದೆ. ಮಾಯಗಂಗೆ ಹಾಡಿನ ಮೂಲಕ ಅದು ಮತ್ತಷ್ಟು ಗಟ್ಟಿಗೊಂಡಿದೆ. ಒಟ್ಟಾರೆ ಬಹುದೊಡ್ಡ ಹಿಟ್ ಚಿತ್ರವಾಗಿ ದಾಖಲಾಗುವ ಎಲ್ಲಾ ಸುಳಿವನ್ನು ನೀಡಿದ್ದು, ನವೆಂಬರ್ 4ರವರೆಗೆ ಅಭಿಮಾನಿಗಳು ಕಾಯಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.