ಬಲಾಢ್ಯ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಸ್ಪಿನ್ ಮೋಡಿಯಿಂದ ಕಟ್ಟಿ ಹಾಕುವ ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಮತ್ತು ಪತ್ನಿ ಧನಶ್ರೀ (ನಟಿ) ನಡುವೆ ಮನಸ್ತಾಪವಾಗಿದೆಯಾ ಎನ್ನುವ ಅನುಮಾನದ ಗುಸುಗುಸು ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬರುತ್ತಿದೆ.
ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುತ್ತಾರೆ. ಅವರ ನೃತ್ಯದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ. ಪತಿ ಯಜುವೇಂದ್ರ ಚಹಾಲ್ ಅವರೊಂದಿಗಿನ ವಿಡಿಯೋಗಳು ಸಹ ಅಭಿಮಾನಿಗಳಿಗೆ ಸಾಕಷ್ಟು ಮನೋರಂಜನೆ ನೀಡಿವೆ. ಆದ್ರೀಗ ಇವರಿಬ್ಬರ ಸಂಬಂಧ ಹಳಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಧನಶ್ರೀ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದು, ಪ್ರತಿದಿನ ಏನಾದರೂ ಒಂದನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. 5 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಧನಶ್ರೀ, ಇದೀಗ ತಮ್ಮ ಇನ್ಸ್ಟಾಗ್ರಾಮ್ ಬಯೋದಲ್ಲಿ ತಮ್ಮ ಹೆಸರಿನ ಹಿಂದಿದ್ದ ಪತಿ ಚಹಾಲ್ ಅವರ ಹೆಸರನ್ನು ತೆಗೆದುಹಾಕಿದ್ದಾರೆ ಎಂದು ವರದಿಯಾಗಿದೆ.
-
Instagram story of Yuzi chahal 👀 pic.twitter.com/HjQSBraLCH
— Mufaddal Vohra (@mufaddol_vohra) August 16, 2022 " class="align-text-top noRightClick twitterSection" data="
">Instagram story of Yuzi chahal 👀 pic.twitter.com/HjQSBraLCH
— Mufaddal Vohra (@mufaddol_vohra) August 16, 2022Instagram story of Yuzi chahal 👀 pic.twitter.com/HjQSBraLCH
— Mufaddal Vohra (@mufaddol_vohra) August 16, 2022
ಇದನ್ನೂ ಓದಿ: ನನ್ನ ವೃತ್ತಿಜೀವನ ಪ್ರಶ್ನಿಸಿದವರಿಗೆ ಗೆದ್ದ ಪದಕಗಳೇ ಉತ್ತರ.. ನಿಖತ್ ಜರೀನ್
ಧನಶ್ರೀ ನಂತರ ಸಾಮಾಜಿಕ ಮಾಧ್ಯಮದಲ್ಲಿ ಚಹಲ್ ಅವರ ಪೋಸ್ಟ್ ಕೂಡ ಸಂಚಲನವನ್ನು ಸೃಷ್ಟಿಸಿದೆ. ಚಹಾಲ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಾಕಿದ್ದರು. ಅದರಲ್ಲಿ ಅವರು ಹೊಸ ಜೀವನ ಪ್ರಾರಂಭವಾಗುತ್ತಿದೆ ಎಂದು ಬರೆದಿದ್ದಾರೆ.
ಇವರಿಬ್ಬರ ಈ ವರ್ತನೆಯಿಂದ, ದಂಪತಿ ನಡುವೆ ಏನೋ ಸಮಸ್ಯೆ ಇದೆ ಎಂಬ ಗುಸುಗುಸು ಹುಟ್ಟಿಕೊಂಡಿದೆ. ಅದಾಗ್ಯೂ ಸಾಮಾಜಿಕ ಮಾಧ್ಯಮದಲ್ಲಿ ಇವರಿಬ್ಬರ ಚಟುವಟಿಕೆಗಳಿಂದ ಏನನ್ನೂ ಸ್ಪಷ್ಟಪಡಿಸಲಾಗಿಲ್ಲ.