ETV Bharat / entertainment

'ಯುವ' ಸಿನಿಮಾ ಚಿತ್ರೀಕರಣ ಪ್ರಾರಂಭ: ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ

author img

By

Published : Apr 9, 2023, 5:18 PM IST

ಜೂನಿಯರ್​ ಪವರ್​ಸ್ಟಾರ್ 'ಯುವ' ಸಿನಿಮಾದ ಶೂಟಿಂಗ್​ ಇಂದಿನಿಂದ ಶುರುವಾಗಿದೆ.

Yuva
'ಯುವ'

ನಟ ಯುವ ರಾಜ್​ಕುಮಾರ್​ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಯುವ' ಎಂಬ ಶೀರ್ಷಿಕೆ ಇಟ್ಟುಕೊಂಡಿರುವ ಸಿನಿಮಾದಲ್ಲಿ ರಾಘವೇಂದ್ರ​ ರಾಜ್​ಕುಮಾರ್​ ಕಿರಿಯ ಪುತ್ರ 'ಯುವ' ರಾಜ್​ಕುಮಾರ್​ ಅಭಿನಯಿಸುತ್ತಿದ್ದಾರೆ. ಅಪ್ಪು ಮಾಡಬೇಕಾಗಿದ್ದ ಚಿತ್ರದಲ್ಲಿ ಯುವ ನಟಿಸ್ತಿದ್ದಾರೆ ಅಂತಾ ಗೊತ್ತಾದ ಘಳಿಗೆಯಿಂದ ದೊಡ್ಮನೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

ಈ ಸಿನಿಮಾದ ಅಪ್​ಡೇಟ್​ಗಾಗಿ ಎದುರು ನೋಡುತ್ತಿದ್ದ ಫ್ಯಾನ್ಸ್​ಗೆ ಹೊಂಬಾಳೆ ಫಿಲ್ಮ್ಸ್​​ ಸಂತಸದ ಸುದ್ದಿ ನೀಡಿದೆ. ಚಿತ್ರದ ಫಸ್ಟ್​ ಡೇ, ಫಸ್ಟ್​ ಶೆಡ್ಯೂಲ್​ ಶೂಟಿಂಗ್​ ಇಂದಿನಿಂದ (ಏಪ್ರಿಲ್​ 9) ಪ್ರಾರಂಭಗೊಂಡಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಚಿತ್ರಗಳು ಹಾಗು ಮನೋರಂಜನೆ ತುಂಬಿದ ಕಥೆಗಳಿಂದ ಒಂದರ ಹಿಂದೆ ಮತ್ತೊಂದು ದಾಖಲೆ ನಿರ್ಮಿಸಿರುವ ನಿರ್ದೇಶಕ ಸಂತೋಷ್ ಆನಂದ್‌ ರಾಮ್ ಯುವ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಹಾಗೂ ಸಂತೋಷ್ ಆನಂದ್‌ ರಾಮ್​ ಕಾಂಬಿನೇಶನ್​ನಲ್ಲಿ ಗೆಲುವಿನ ಓಟಕ್ಕೆ ಈ ಚಿತ್ರ ನಾಲ್ಕನೇ ಸೇರ್ಪಡೆ. ಕನ್ನಡ ನಾಡಿಗೆ ಹಾಗೂ ರಾಷ್ಟ್ರಕ್ಕೆ ಸತತ ಸದಭಿರುಚಿಯ ಹಾಗೂ ದಾಖಲೆ ನಿರ್ಮಿಸಿದ ಚಲನಚಿತ್ರಗಳನ್ನು ನೀಡುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್​ ನಿರ್ಮಾಪಕ ವಿಜಯ್ ಕಿರಗಂದೂರ್ ಅದ್ದೂರಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಸಂಗೀತ, ಶ್ರೀಶ ಕೂದುವಳ್ಳಿ ಛಾಯಾಗ್ರಹಣವಿದೆ. 2023ರ ಡಿಸೆಂಬರ್ 22 ರಂದು 'ಯುವ' ತೆರೆಗೆ ಅಪ್ಪಳಿಸಲಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ದೊಡ್ಮನೆಯ ಮತ್ತೋರ್ವ ಪ್ರತಿಭೆ ಎಂಟ್ರಿ: ಯುವ ರಾಜ್​ಕುಮಾರ್​ ಚೊಚ್ಚಲ ಚಿತ್ರದ ಟೈಟಲ್​ ಅನಾವರಣ

ಸಪ್ತಮಿ ಗೌಡ ಹೀರೋಯಿನ್: ಚಿತ್ರದ ಹೀರೋಯಿನ್​ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಆದರೆ ಮಾರ್ಚ್​ 6 ರಂದು ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಅಧಿಕೃತ ಮಾಹಿತಿ ನೀಡಿ ನಾಯಕಿ ಯಾರೆಂಬ ಗೊಂದಲಕ್ಕೆ ತೆರೆ ಎಳೆದಿತ್ತು. ಮೂಗುತಿ ಸುಂದರಿ ಸಪ್ತಮಿ ಗೌಡ ಅವರ ಫೋಟೋವನ್ನು ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್​, "ಯುವರಾಜನ ಅರಸಿಗೆ ಆದರದ ಸ್ವಾಗತ" ಎಂದು ಬರೆದುಕೊಂಡಿತ್ತು. ಜೊತೆಗೆ 'ಯುವ' ಸಿನಿಮಾಗೆ ಸಪ್ತಮಿ ಗೌಡ ಪರ್ಫೆಕ್ಟ್​ ನಾಯಕಿ ಎಂದು ಹೇಳಿತ್ತು. ಈ ಮೂಲಕ ಕಾಂತಾರ ಬ್ಯೂಟಿ ಸಪ್ತಮಿ ಗೌಡ ಯುವ ಸಿನಿಮಾಗೆ ನಾಯಕಿಯಾಗಿದ್ದಾರೆ.

ಚಿಕ್ಕಪ್ಪನ ಹಾದಿಯಲ್ಲಿ 'ಯುವ': ಯುವ ರಾಜ್​ಕುಮಾರ್ ಚಿಕ್ಕಪ್ಪನ ಹಾದಿಯಲ್ಲೇ ನಡೆಯಬೇಕು ಅಂತಾ ಪಣ ತೊಟ್ಟಿದ್ದಾರೆ. ಹೀಗಾಗಿ ಪವರ್ ಸ್ಟಾರ್ ಅಚ್ಚುಮೆಚ್ಚಿನ ಕಾರು ಹಾಗೂ ಬೈಕ್ ನಂಬರ್​ಗಳನ್ನು ತಮ್ಮ ಜೀವನದಲ್ಲಿ ಹಾಗೂ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಯುವ ರಾಜ್​ಕುಮಾರ್​ ತಮ್ಮ ಬೈಕ್ (ಸಿನಿಮಾ ಪೋಸ್ಟರ್) ಮೇಲೆ ಚಿಕ್ಕಪ್ಪನ ಕಾರ್​ ನಂಬರ್ ಅನ್ನು ಬಳಸಿಕೊಂಡಿದ್ದಾರೆ. ಚಿತ್ರತಂಡ ಬಿಡುಗಡೆಗೊಳಿಸಿದ ಮೊದಲ ಪೋಸ್ಟರ್​​ನಲ್ಲಿ ಯುವ ಕೂತಿದ್ದ ಬೈಕ್​ ನಂಬರ್​ ಮತ್ತು ಪುನೀತ್​ ಅವರ ಕಾರ್​ ನಂಬರ್ ಒಂದೇ​ ಆಗಿತ್ತು.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಜಯಾ ಬಚ್ಚನ್: ಅಮ್ಮನಿಗೆ ವಿಶೇಷವಾಗಿ ಶುಭಾಶಯ ಕೋರಿದ ಪುತ್ರ ಅಭಿಷೇಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.