ETV Bharat / entertainment

S/O ಮುತ್ತಣ್ಣ; ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಸಾಥ್ ಕೊಟ್ಟ ಡೈನಾಮಿಕ್ ಫ್ಯಾಮಿಲಿ

author img

By ETV Bharat Karnataka Team

Published : Jan 8, 2024, 7:10 PM IST

ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ ನೂತನ ಚಿತ್ರ ಸೆಟ್ಟೇರಿದೆ. ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ S/O ಮುತ್ತಣ್ಣ ಸಿನಿಮಾದ ಮುಹೂರ್ತ ನೆರವೇರಿದೆ.

ಪ್ರಣಂ ದೇವರಾಜ್
ಪ್ರಣಂ ದೇವರಾಜ್

ಕುಮಾರಿ 21ಎಫ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿರುವ ಪ್ರಣಂ ದೇವರಾಜ್ ಈಗ ವಿಭಿನ್ನ ಶೀರ್ಷಿಕೆಯ S/O ಮುತ್ತಣ್ಣ ನಾಗಲು ಸಜ್ಜಾಗಿದ್ದಾರೆ.

ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ S/O ಮುತ್ತಣ್ಣ ಸಿನಿಮಾದ ಮುಹೂರ್ತ ನೆರವೇರಿದೆ. ದೇವರಾಜ್ ದಂಪತಿ ಆಗಮಿಸಿ ಮಗನ ಚಿತ್ರಕ್ಕೆ ಶುಭಾಶಯ ತಿಳಿಸಿದ್ದಾರೆ. ಅಂದಹಾಗೇ S/O ಮುತ್ತಣ್ಣನಿಗೆ ಶ್ರೀಕಾಂತ್ ಹುಣ್ಸೂರ್ ಸಾರಥಿ. ಆರ್. ಚಂದ್ರು ಹಾಗೂ ಪ್ರೇಮ್​ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಶ್ರೀಕಾಂತ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ಪ್ರಣಂ ದೇವರಾಜ್  ಸನ್​ ಆಫ್​ ಮುತ್ತಣ್ಣ ಸಿನಿಮಾ  Pranam Devaraj  Young dynamic
ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ ನೂತನ ಚಿತ್ರ ಸೆಟ್ಟೇರಿದೆ

S/O ಮುತ್ತಣ್ಣ ಸಿನಿಮಾದಲ್ಲಿರುವ ತಾರಾ ಬಳಗ: ಪ್ರಣಂ ದೇವರಾಜ್ ನಾಯಕನಾಗಿ ನಟಿಸುತ್ತಿರುವ S/O ಮುತ್ತಣ್ಣ ಸಿನಿಮಾದಲ್ಲಿ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ತಾರಾ ಬಳಗದಲ್ಲಿದ್ದಾರೆ.

S/O ಮುತ್ತಣ್ಣ ಸಿನಿಮಾದ ಮುಹೂರ್ತ ನೆರವೇರಿತು

ಟೈಟಲ್ ಹೇಳುವಂತೆ ಇದೊಂದು ಅಪ್ಪ- ಮಗನ ಬಾಂಧವ್ಯದ ಕಥೆಯಾಗಿದ್ದು, ಪುರಾತನ ಫಿಲ್ಮಂಸ್ ಬ್ಯಾನರ್​ನಲ್ಲಿ ದಿವ್ಯಾ ನಿರ್ಮಾಣ ಮಾಡುತ್ತಿದ್ದಾರೆ. S/O ಮುತ್ತಣ್ಣ ಸಿನಿಮಾಗೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರ ತಂಡ ಶೂಟಿಂಗ್​ನಲ್ಲಿ ಬ್ಯುಸಿಯಾಗಿದೆ.

ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಸಾಥ್ ಕೊಟ್ಟ ಡೈನಾಮಿಕ್ ಫ್ಯಾಮಿಲಿ

ಇದನ್ನೂ ಓದಿ: ಓಂ 2 ಬರುತ್ತೆ ಅಂದ್ರೆ ನಾನು ಎಷ್ಟು ವರ್ಷ ಬೇಕಾದರೂ ಕಾಯುತ್ತಿನಿ: ಶಿವರಾಜ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.