ETV Bharat / entertainment

10 ವರ್ಷದ ಬಳಿಕ ಸೂಪರ್​ ಹಿಟ್​ ಸಿನಿಮಾದ ಸೀಕ್ವೆಲ್​​: ಮತ್ತೆ ಪ್ರೀತಿಯಲ್ಲಿ ದೀಪಿಕಾ-ರಣ್​ಬೀರ್​​ - ರಣ್​​ಬೀರ್ ಕಪೂರ್

'ಯೇ ಜವಾನಿ ಹೈ ದಿವಾನಿ' ಸಿನಿಮಾದ ಸೀಕ್ವೆಲ್​ ಬಗ್ಗೆ ನಟ ರಣ್​​ಬೀರ್ ಕಪೂರ್ ಸುಳಿವು ಬಿಟ್ಟುಕೊಟ್ಟಿದ್ದಾರೆ.

Ye Jawaani Hai Deewani sequel
ಯೇ ಜವಾನಿ ಹೈ ದಿವಾನಿ ಸೀಕ್ವೆಲ್
author img

By

Published : May 7, 2023, 12:26 PM IST

ಬಾಲಿವುಡ್​ನಲ್ಲಿ ತಮ್ಮದೇ ಆದ ಸ್ಟಾರ್‌ಡಮ್​ ಹೊಂದಿರುವ ನಟರಾದ ದೀಪಿಕಾ ಪಡುಕೋಣೆ ಮತ್ತು ರಣ್​​ಬೀರ್ ಕಪೂರ್ ಅವರ 'ಯೇ ಜವಾನಿ ಹೈ ದಿವಾನಿ' (Yeh Jawaani Hai Deewani) ಮೇ 31ಕ್ಕೆ 10 ವರ್ಷ ಪೂರೈಸಲಿದೆ. ಬಹುಬೇಡಿಕೆಯ ತಾರೆಗಳ ಅಭಿಮಾನಿಗಳು ಸೂಪರ್​ ಹಿಟ್​ ಸಿನಿಮಾದ ಸೀಕ್ವೆಲ್​​ ಬಗ್ಗೆ ಉತ್ಸುಕರಾಗಿದ್ದಾರೆ. ಈ ಚಿತ್ರದಲ್ಲಿ ಜನಪ್ರಿಯ ತಾರೆಗಳು ತೆರೆ ಮೇಲೆ ನೈನಾ ಮತ್ತು ಬನ್ನಿ ಪಾತ್ರವನ್ನು ನಿರ್ವಹಿಸಿದ್ದರು.

'ಯೇ ಜವಾನಿ ಹೈ ದಿವಾನಿ' ಚಿತ್ರದಲ್ಲಿ ಬನ್ನಿ ಪಾತ್ರ ಮಾಡಿದ್ದ ರಣ್​​ಬೀರ್ ಕಪೂರ್, ಚಿತ್ರದ ಹತ್ತು ವರ್ಷಗಳ ನಂತರ ಸೀಕ್ವೆಲ್​​​ ಭಾಗದ ಬಗ್ಗೆ ಸುಳಿವು ನೀಡಿದ್ದಾರೆ. ಬರಹಗಾರ, ನಿರ್ದೇಶಕ ಅಯಾನ್ ಮುಖರ್ಜಿ ಸಿನಿಮಾದ ಸೀಕ್ವೆಲ್​ಗೆ ಯೋಗ್ಯ ಕಥೆಯನ್ನು ಹೊಂದಿದ್ದಾರೆಂದು ವರದಿಯಾಗಿದೆ.

ನೈನಾ (ದೀಪಿಕಾ ಪಡುಕೋಣೆ) ಮತ್ತು ಬನ್ನಿ (ರಣ್​ಬೀರ್​ ಕಪೂರ್​​) ತೆರೆಯ ಮೇಲೆ ಸೂಪರ್​ ಹಿಟ್, ಸ್ಮರಣೀಯ ಜೋಡಿಗಳ ಪೈಕಿ ಅಗ್ರರು. ಒಂದು ಕಾಲದಲ್ಲಿ ಈ ಜೋಡಿ ಪ್ರೇಮ ಪಕ್ಷಿಗಳಾಗಿ ಸುದ್ದಿಯಲ್ಲಿದ್ದರು. ಬೆಳ್ಳಿತೆರೆ ಮೇಲೆ ಇವರನ್ನು ಒಟ್ಟಾಗಿ ಕಾಣಲು ಅಭಿಮಾನಿಗಳು ಇಚ್ಛಿಸುತ್ತಾರೆ. ಯೇ ಜವಾನಿ ಹೈ ದಿವಾನಿ ಚಲನಚಿತ್ರ ಸಾಕಷ್ಟು ತಮಾಷೆ, ಕಣ್ಣೀರು ಮತ್ತು ಪ್ರೀತಿ ಸೇರಿದಂತೆ ಎಲ್ಲಾ ತರಹದ ಭಾವನೆಗಳನ್ನು ಒಳಗೊಂಡಿತ್ತು. ಆದ್ರೆ ಚಿತ್ರದಲ್ಲಿ ಇಬ್ಬರೂ ದೂರವಾಗುತ್ತಾರೆ. ಬಹುಸಮಯದ ನಂತರ ಅಂತಿಮವಾಗಿ ಈ ಜೋಡಿ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಮದುವೆಯಾಗಲು ನಿರ್ಧರಿಸುತ್ತಾರೆ. ಆದಾಗ್ಯೂ, ಮುಂದೆ ಏನಾಗುತ್ತದೆ ಎಂಬುದರ ಕುರಿತು ಅಭಿಮಾನಿಗಳು ಕಾತರರಾಗಿದ್ದಾರೆ. ಹಾಗಾಗಿ ಸೀಕ್ವೆಲ್​ ಭಾಗದಲ್ಲಿ ಸ್ನೇಹ, ಪ್ರೇಮ ಕಥೆ ಹೇಗಿರಲಿದೆ ಎಂಬ ಬಗ್ಗೆ ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ವರ್ಚುವಲ್​​ ಟಾಕ್​ನಲ್ಲಿ, ಬ್ರಹ್ಮಾಸ್ತ್ರ ಹೊರತುಪಡಿಸಿ ಯಾವ ಚಲನಚಿತ್ರದ ಮುಂದಿನ ಭಾಗವನ್ನು ಚಿತ್ರೀಕರಿಸಲು ಬಯಸುತ್ತೀರಿ ಎಂದು ಕೇಳಿದಾಗ, ರಣ್​ಬೀರ್ ಕಪೂರ್ 'ಯೇ ಜವಾನಿ ಹೈ ದಿವಾನಿ' ಚಲನಚಿತ್ರವು ಅದ್ಭುತವಾದ ಸೀಕ್ವೆಲ್​ ಸೃಷ್ಟಿ ಮಾಡುತ್ತದೆ ಎಂದು ಉತ್ತರಿಸಿದರು. ಅಯಾನ್ ಕೂಡ ಒಳ್ಳೆಯ ಕಥೆಯನ್ನು ಹೊಂದಿದ್ದರು, ನನಗೆ ನೆನಪಿದೆ, ಆದರೆ ಅವರು ಈ ಬ್ರಹ್ಮಾಸ್ತ್ರ ಪ್ರಯಾಣ ಬೆಳೆಸಿದರು ಎಂದು ರಾಕ್‌ಸ್ಟಾರ್ ನಟ ತಿಳಿಸಿದರು.

ಇದನ್ನೂ ಓದಿ: 'ದಿ ಕೇರಳ ಸ್ಟೋರಿ ತಮ್ಮ ಮೇಲಿನ ದಾಳಿಯೆಂದು ಭಾವಿಸಿದವರು ಭಯೋತ್ಪಾದಕರು'

"ಅವರು ಒಂದೆರಡು ವರ್ಷಗಳಲ್ಲಿ ಅದನ್ನು (ಸೀಕ್ವೆಲ್​​) ಮಾಡಬಹುದು" ಎಂದು ಸಹ ಹೇಳಿದರು. ಮೊದಲ ಚಿತ್ರದ ಘಟನೆಗಳ ಹತ್ತು ವರ್ಷಗಳ ನಂತರ ಕಥೆ ಮುಂದುವರೆಯಬಹುದು ಎಂದು ರಣ್​​ಬೀರ್ ಸುಳಿವು ನೀಡಿದರು. ಬನ್ನಿ, ನೈನಾ, ಅವಿ ಮತ್ತು ಅದಿತಿ (ಚಿತ್ರದ ಮುಖ್ಯ ಪಾತ್ರಗಳು) ಅವರ ಜೀವನದ ಮುಂದಿನ ಹತ್ತು ವರ್ಷಗಳಿಗೆ ತಕ್ಕಂತೆ ಕಥೆಯನ್ನು ಹೆಣೆಯಲಾಗುವುದು ಎಂದು ನಾನು ನಂಬುತ್ತೇನೆ. ಆ ಪಾತ್ರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಖುಷಿಯಾಗುತ್ತದೆ ಎಂದು ರಣ್​ಬೀರ್​ ಕಪೂರ್​ ತಿಳಿಸಿದರು.

ಇದನ್ನೂ ಓದಿ: 70 ದೇಶಗಳಲ್ಲಿ ತೆರೆ ಕಾಣಲಿದೆ 'ಆದಿಪುರುಷ್​' ಟ್ರೇಲರ್; ಪ್ರೇಕ್ಷಕರಲ್ಲಿ ಗರಿಗೆದರಿದ ನಿರೀಕ್ಷೆ​

ರಣ್​​ಬೀರ್ ಕಪೂರ್ ಮುಂದಿನ ಸಿನಿಮಾ ವಿಚಾರ ಗಮನಿಸುವುದಾದರೆ, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿಮಲ್ ಸಿನಿಮಾ ಆಗಸ್ಟ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.