ETV Bharat / entertainment

ಅರ್ಧ ಕೋಟಿ ವೆಚ್ಚದಲ್ಲಿ ತಯಾರಾದ ಯಟ್ಟ ಯಟ್ಟ ಸಾಂಗ್.. ಮೇಕಿಂಗ್ ವಿಡಿಯೋ ರಿಲೀಸ್​

author img

By

Published : Nov 15, 2022, 8:03 PM IST

ತ್ರಿಬಲ್ ರೈಡಿಂಗ್ ಸಿನಿಮಾದ ಯಟ್ಟ ಯಟ್ಟ ಹಾಡಿನ ಮೇಕಿಂಗ್ ವಿಡಿಯೋ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

yatta yatta song making video released
ಯಟ್ಟ ಯಟ್ಟ ಸಾಂಗ್ ಮೇಕಿಂಗ್ ವಿಡಿಯೋ

ಕನ್ನಡ ಸಿನಿಮಾಗಳು ವಿಶ್ವದಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ. ಕನ್ನಡ ಚಿತ್ರಗಳು ಕ್ವಾಲಿಟಿ ಹಾಗೂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಯಾವ ಮಟ್ಟಿಗೆ ಅಂದ್ರೆ ಕೇವಲ ಹಾಡುಗಳಿಗೆ ಕೋಟಿ ಖರ್ಚು ಮಾಡಲಾಗುತ್ತಿದೆ. ಈಗಾಗ್ಲೇ 50 ರಿಂದ 1 ಕೋಟಿ ವೆಚ್ಚದಲ್ಲಿ ಕೆಲ ಅದ್ಧೂರಿ ಸಾಂಗ್​ಗಳು ರೆಡಿಯಾಗಿ ಸಕ್ಸಸ್ ಕಂಡಿವೆ. ಈ ಸಾಲಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರದ ಹಾಡುಗಳು ಹೊಸ ಸೇರ್ಪಡೆ.

ಟೈಟಲ್ ಹಾಗೂ ಅದ್ಧೂರಿ ವೆಚ್ಚದ ಹಾಡುಗಳ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕ್ರೇಜ್ ಹುಟ್ಟಿಸಿರೋ ಚಿತ್ರ ತ್ರಿಬಲ್ ರೈಡಿಂಗ್. ಈ ಸಿನಿಮಾದ ಯಟ್ಟ ಯಟ್ಟ ಹಾಡು ಈಗಾಗ್ಲೇ ಬಿಡುಗಡೆ ಆಗಿ ಯೂ ಟ್ಯೂಬ್​ನಲ್ಲಿ 7 ಮಿಲಿಯನ್​ಗೂ ಹೆಚ್ಚು ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ. ಹಾಡಿನಲ್ಲಿ ಗಣೇಶ್ ಮೂವರು ಸುಂದರಿಯರು ಜೊತೆ ರೊಮ್ಯಾನ್ಸ್ ಮಾಡುವುದರ ಜೊತೆ ಅದ್ಧೂರಿ ಸ್ಟೆಪ್​ ಹಾಕಿದ್ದಾರೆ.

ಈ ಹಿನ್ನೆಲೆ ಚಿತ್ರರಂಗದಲ್ಲಿ ಸಖತ್​ ಟಾಕ್ ಆಗುತ್ತಿರುವ ತ್ರಿಬಲ್ ರೈಡಿಂಗ್ ಚಿತ್ರದ ಯಟ್ಟ ಯಟ್ಟ ಹಾಡಿನ ಮೇಕಿಂಗ್ ವಿಡಿಯೋ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

ಯಟ್ಟ ಯಟ್ಟ ಸಾಂಗ್ ಮೇಕಿಂಗ್ ವಿಡಿಯೋ ರಿಲೀಸ್​

ಅಂದಹಾಗೆ, ಈ ಯಟ್ಟ ಯಟ್ಟ ಹಾಡಿಗಾಗಿ ಬರೋಬ್ಬರಿ ಅರ್ಧ ಕೋಟಿ ಖರ್ಚು ಮಾಡಲಾಗಿದೆ. ಹೌದು, 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಪಕ ರಾಮ್ ಗೋಪಾಲ್ ಮೂರು ಅದ್ಧೂರಿ ಸೆಟ್​ ಹಾಕಿ, 50ಕ್ಕೂ ಹೆಚ್ಚು ಸಹ ಕಲಾವಿದರನ್ನು ಬಳಸಿಕೊಂಡು ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.

ಸಾಂಗ್ ಕ್ವಾಲಿಟಿ ರಿಚ್ ಆಗಿ ಬರಬೇಕು ಎಂಬ ಕಾರಣಕ್ಕೆ ನಿರ್ಮಾಪಕ ರಾಮ್ ಗೋಪಾಲ್ ಹಾಡಿನ ಖರ್ಚುನ ಬಗ್ಗೆ ಯೋಚನೆ ಮಾಡದೇ, ಬೆಂಗಳೂರಿನ ಅಕ್ಷಯ್ ಸ್ಟುಡಿಯೋದಲ್ಲಿ ಮೂರು ವಿಭಿನ್ನ ಸೆಟ್ಟುಗಳನ್ನು ಹಾಕಿ ಈ ಯಟ್ಟ ಯಟ್ಟ ಹಾಡಿನ ದೃಶ್ಯ ಸೆರೆ ಹಿಡಿಯಲಾಗಿದೆ.

ಸಾಕಷ್ಟು ಹಿಟ್ ಹಾಡುಗಳ ಕೋರಿಯೋಗ್ರಾಫರ್ ಮುರಳಿ ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಬಗ್ಗೆ ನಟಿಯರಾದ ರಚನಾ ಇಂದರ್, ಮೇಘಾ ಶೆಟ್ಟಿ ಮತ್ತು ಆದಿತಿ ಪ್ರಭುದೇವ ಮೇಕಿಂಗ್ ವಿಡಿಯೋದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇನ್ನು ಗಣೇಶ್ ಕೂಡ ನಾಲ್ಕೈದು ದಿನ ಪ್ರಾಕ್ಟೀಸ್ ಮಾಡಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇನ್ನೂ ತ್ರಿಬಲ್ ರೈಡಿಂಗ್ ಕೇವಲ ಕಾಮಿಡಿ ಸಿನಿಮಾ ಅಲ್ಲ. ಈ ಪ್ರಯಾಣದಲ್ಲಿ ಹಾಸ್ಯದ ಜೊತೆ ಅಷ್ಟೇ ತಿರುವುಗಳಿವೆ. ಚಿತ್ರದ ಕೊನೆಯ 20 ನಿಮಿಷ ನಿಮ್ಮೆಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತೆ ಎನ್ನುವ ಭರವಸೆಯನ್ನು ಚಿತ್ರತಂಡ ಈ ಮೊದಲೇ ನೀಡಿದೆ. ತ್ರಿಬಲ್ ರೈಡಿಂಗ್ ಮೂಲಕ ಗಣೇಶ್ ಮತ್ತೊಂದು ಹಿಟ್ ಸಿನಿಮಾ ಕೊಡುವ ಲಕ್ಷಣಗಳು ಕಾಣುತ್ತಿವೆ.

ಇದನ್ನೂ ಓದಿ: ಯಟ್ಟ..ಯಟ್ಟ..ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಾಂಗ್​ ರಿಲೀಸ್

ಇನ್ನೂ ರಚನಾ ಇಂದರ್, ಮೇಘಾ ಶೆಟ್ಟಿ ಮತ್ತು ಆದಿತಿ ಪ್ರಭುದೇವ ಅವರಿಗೆ ತ್ರಿಬಲ್ ರೈಡಿಂಗ್ ತುಂಬಾನೇ ವಿಶೇಷವಾದ ಸಿನಿಮಾ. ಗಣೇಶ್​ ಜೊತೆ ನಟಿಸಿರುವ ಮೊದಲ ಸಿನಿಮಾವಿದು. ಮಹೇಶ್ ಗೌಡ ಈ ಚಿತ್ರದ ಸೂತ್ರಧಾರ. ಅನೇಕ ವರ್ಷಗಳಿಂದ ಗಣಿಗೆ ಚೆಂದದ ಸಿನಿಮಾ ಮಾಡಬೇಕೆಂಬ ಕನಸು ಕಂಡಿದ್ದ ಮಹೇಶ್ ಗೌಡ ಕೊನೆಗೂ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಸಿನಿಮಾ ಬಗ್ಗೆ ಫ್ಯಾಶನ್ ಹೊಂದಿರುವ ನಿರ್ಮಾಪಕ ರಾಮ್ ಗೋಪಾಲ್ ಈ ಚಿತ್ರವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೂಡಿ ಬಂದಿವೆ. ಸದ್ಯಕ್ಕೆ ಹಲವಾರು ವಿಶೇಷತೆಗಳಿಗೆ ಸದ್ದು ಮಾಡುತ್ತಿರೋ ತ್ರಿಬಲ್ ರೈಡಿಂಗ್ ಚಿತ್ರ ನವೆಂಬರ್ 25ಕ್ಕೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ನ. 25ಕ್ಕೆ ಬಿಡುಗಡೆಯಾಗಲಿದೆ 'ತ್ರಿಬಲ್ ರೈಡಿಂಗ್'.. ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಅಂತಿದ್ದಾರೆ ಗೋಲ್ಡನ್​ ಸ್ಟಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.