ETV Bharat / entertainment

ಕೋಟ್ಯಂತರ ಸಂಭಾವನೆಯ ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ ರಾಕಿಂಗ್ ಸ್ಟಾರ್ ಯಶ್ - KGF Hero Yash

ಸಮಾಜಕ್ಕೆ ಮಾರಕವಾಗುವಂತಹ ವಸ್ತುಗಳನ್ನು ಪ್ರಮೋಟ್ ಮಾಡಬಾರದು ಎಂದು ನಿರ್ಧರಿಸಿ ರಾಕಿಂಗ್ ಸ್ಟಾರ್ ಯಶ್​ ಕೋಟ್ಯಂತರ ಮೌಲ್ಯದ ಪಾನ್ ಮಸಾಲ ಜಾಹೀರಾತಿನ ಆಫರ್‌ ಅನ್ನೇ ತಿರಸ್ಕರಿಸಿದ್ದಾರೆ.

ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ ರಾಕಿಂಗ್ ಸ್ಟಾರ್ ಯಶ್

author img

By

Published : Apr 30, 2022, 4:54 PM IST

ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ, ವಿಶ್ವದಾದ್ಯಂತ ಯೂತ್ ಸ್ಟಾರ್ ಆಗಿ ಮಿಂಚುತ್ತಿರುವ ರಾಕಿಂಗ್ ಸ್ಟಾರ್ ಯಶ್ ಈಗ ಮತ್ತೊಂದು ಮಹತ್ವದ ನಿರ್ಧಾರದ ಮೂಲಕ ಮಾದರಿಯಾಗಿದ್ದಾರೆ. ಬಹುಕೋಟಿ ಮೌಲ್ಯದ ಪಾನ್ ಮಸಾಲ ಜಾಹೀರಾತನ್ನು ಅವರು ತಿರಸ್ಕರಿಸಿದ್ದಾರೆ. ಇದನ್ನು ಸ್ವತಃ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನಿರ್ವಹಿಸುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ಖಚಿತಪಡಿಸಿದೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾ ಸಕ್ಸಸ್ ಬೆನ್ನಲ್ಲೇ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ-ಕೋಟಿ ಬಾಚುವ ಮೂಲಕ ಯಶ್​ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗವನ್ನು ತಿರುಗಿನೋಡುವಂತೆ ಮಾಡಿದ್ದಾರೆ. ಈ ಮಧ್ಯೆ ರಾಕಿಬಾಯ್ ಸಮಾಜ ಹಾಗು ಕೋಟ್ಯಂತರ ಅಭಿಮಾನಿಗಳ ದೃಷ್ಟಿಯಿಂದ ಈ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ತಾವು ಯಶ್ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲಾ, ನಿಜ ಜೀವನದಲ್ಲಿ ರಿಯಲ್‌ ಹೀರೋ ಎಂಬುದನ್ನ ಸಾಬೀತುಪಡಿಸಿದ್ದಾರೆ.

ಪಾನ್ ಮಸಾಲ ಜಾಹೀರಾತು
ಪಾನ್ ಮಸಾಲ ಜಾಹೀರಾತು

ದೇಶದೆಲ್ಲೆಡೆ ಪ್ರಸಿದ್ಧಿ ಹೊಂದಿರುವ ಪಾನ್ ಮಸಾಲ ಮತ್ತು ಏಲಕ್ಕಿ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಅಭಿನಯಿಸಿ ಹಾಗು ಪ್ರಚಾರ ಮಾಡಲು ಎಂಡಾರ್ಸ್‌ಮೆಂಟ್ ಕಂಪನಿ ಯಶ್ ಅವರಿಗೆ ಆಫರ್​ ನೀಡಿತ್ತು. ಈ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ಸಂಭಾವನೆ ಕೊಡಲು ಸಹ ಪಾನ್ ಮಸಾಲ ಸಂಸ್ಥೆ ಮುಂದೆ ಬಂದಿತ್ತು ಎನ್ನಲಾಗ್ತಿದೆ.

ಆದರೆ ಈ ಜಾಹೀರಾತು ಹಾಗೂ ರಾಯಭಾರಿಯಾಗಲು ಯಶ್​ ನಿರಾಕರಿಸಿದ್ದಾರೆ ಎಂದು ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನಿರ್ವಹಿಸುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್‌ಟೈನ್‌ಮೆಂಟ್‌ನ ಟ್ಯಾಲೆಂಟ್ ಮತ್ತು ನ್ಯೂ ವೆಂಚರ್ಸ್ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ಯಾಕೆಂದರೆ, ಸಮಾಜಕ್ಕೆ ಮಾರಕವಾಗುವಂತಹ ವಸ್ತುಗಳನ್ನು ಪ್ರಮೋಟ್ ಮಾಡಬಾರದು ಎಂದು ನಿರ್ಧರಿಸಿ ಕೋಟ್ಯಂತರ ಮೌಲ್ಯದ ಆಫರ್‌ ಅನ್ನೇ ಯಶ್ ತಿರಸ್ಕರಿಸಿದ್ದಾರೆ.

ಸದ್ಯ ಯಶ್ ಸಿನಿಮಾಗಳು ಅಲ್ಲದೇ, ಅಡುಗೆ ಎಣ್ಣೆ, ಮನೆ ಕಟ್ಟುವ ಕಬ್ಬಿಣ, ಬಟ್ಟೆ ಹಾಗು ಸುಗಂಧ ದ್ರವ್ಯಗಳಂತಹ ಜಾಹೀರಾತುಗಳಲ್ಲಿ ಯಶ್ ಅಭಿನಯಿಸುವ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಈಗ ಪಾನ್ ಮಸಾಲ ಜಾಹಿರಾತನ್ನು ಯಶ್ ತಿರಸ್ಕರಿಸಿರುವುದು ಅಭಿಮಾನಿಗಳಿಗೂ ಖುಷಿ ತಂದಿದೆ.

ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ 2 ಸಿನಿಮಾದ ತೆರೆ ಹಿಂದಿನ ಶ್ರಮಜೀವಿಗಳು ಇವರೇ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.