ETV Bharat / entertainment

'ಕೆಜಿಎಫ್​​ ಚಾಪ್ಟರ್​​-2' ಬಿಡುಗಡೆಗೆ ಕ್ಷಣಗಣನೆ: ಯಶ್‌ ಕ್ಷಮೆ ಕೇಳಿದ್ದೇಕೆ? ವಿಡಿಯೋ ನೋಡಿ - ಕೆಜಿಎಫ್​ ಚಾಪ್ಟರ್​ 2

ದೇಶ-ವಿದೇಶಗಳಲ್ಲೂ ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟು ಹಾಕಿರುವ ಕೆಜಿಎಫ್​ ಚಾಪ್ಟರ್​​-2 ಸಿನಿಮಾ ನಾಡಿದ್ದು (ಏಪ್ರಿಲ್‌ 14ರಂದು) ರಿಲೀಸ್ ಆಗಲಿದ್ದು, ಚಿತ್ರ ವೀಕ್ಷಣೆ ಮಾಡಲು ಸಿನಿ ಪ್ರೇಕ್ಷಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

Yash apologies
Yash apologies
author img

By

Published : Apr 12, 2022, 4:31 PM IST

ಹೈದರಾಬಾದ್​(ತೆಲಂಗಾಣ): ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್​​-2 ಸಿನಿಮಾ ಗುರುವಾರ ಪ್ರಪಂಚದಾದ್ಯಂತ ತೆರೆ ಕಾಣಲಿದೆ. ಇದರ ಮಧ್ಯೆ ನಿನ್ನೆ ಹೈದರಾಬಾದ್​ನಲ್ಲಿ ಆಯೋಜನೆಗೊಂಡಿದ್ದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್​ ಮಾಧ್ಯಮದವರ ಮುಂದೆ ಕ್ಷಮೆಯಾಚನೆ ಮಾಡಿದ ಸನ್ನಿವೇಶ ನಡೆಯಿತು. ಕೆಜಿಎಫ್​ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ​ ಹೈದರಾಬಾದ್​ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿ, ಪತ್ರಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ವೇಳೆ ಮಾತನಾಡಿದ ಯಶ್​​, 'ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ' ಎಂದರು. ಇಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದ ನಿಖರವಾದ ಸಮಯ ನನಗೆ ಗೊತ್ತಿರಲಿಲ್ಲ. ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಖಾಸಗಿ ಜೆಟ್​​​ನಲ್ಲಿ ಪ್ರಯಾಣಿಸುತ್ತಿರುವ ಕಾರಣ ಇಂದು ಹವಾಮಾನ ವೈಪರೀತ್ಯದಿಂದಾಗಿ ಆಗಮಿಸಲು ಸ್ವಲ್ಪ ತಡವಾಯಿತು ಎಂದು ಸ್ಪಷ್ಟನೆ ಕೊಟ್ಟರು.

ಯಶ್‌ ಕ್ಷಮೆ ಕೇಳಿದ್ದೇಕೆ? ವಿಡಿಯೋ ನೋಡಿ

ಇದನ್ನೂ ಓದಿ: 'ಲಿಟಲ್‌ ಚಾಂಪ್​'ಗೆ ಲಿವರ್​ ಸಮಸ್ಯೆ: ಚಿಕಿತ್ಸಾ ವೆಚ್ಚಕ್ಕೆ ರೇಶಮಿಯಾ ಕೊಟ್ಟ ವಾಚ್​ ಹರಾಜಿಗೆ!

ಕೆಜಿಎಫ್​ ಚಾಪ್ಟರ್​​-2 ಬಿಡುಗಡೆ ಕ್ಷಣಗಣನೆ ಶುರುವಾಗಿದ್ದು, ಸಿನಿಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಸಿನಿಮಾ ವೀಕ್ಷಿಸಲು ಈಗಾಗಲೇ ಅಪಾರ ಸಂಖ್ಯೆಯ ಜನರು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. 2018ರಲ್ಲಿ ಕೆಜಿಎಫ್​ ಮೊದಲ ಭಾಗ ರಿಲೀಸ್ ಆಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು. ಇದೀಗ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿಯೂ ಎರಡನೇ ಭಾಗ ರಿಲೀಸ್​ ಆಗಲಿದೆ. ಈಗಾಗಲೇ ಸಿನಿಮಾ ವೀಕ್ಷಣೆ ಮಾಡಲು 20 ಕೋಟಿ ರೂ. ಮೊತ್ತದ ಮುಂಗಡ ಟಿಕೆಟ್ ಬುಕ್ಕಿಂಗ್​ ಆಗಿದೆ ಎಂಬ ಮಾಹಿತಿ ಇದೆ. ಮೊದಲ ದಿನದ ಟಿಕೆಟ್ 1,450 ರಿಂದ 2 ಸಾವಿರ ರೂ.ವರೆಗೂ ಮಾರಾಟವಾಗಿದೆ. ಮೊದಲ ಪ್ರದರ್ಶನ ಮಧ್ಯರಾತ್ರಿ 1 ಗಂಟೆಗೆ ಆರಂಭಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.