ETV Bharat / entertainment

ಯಶ್​-ರಾಧಿಕಾ ಪುತ್ರನ ಜನ್ಮದಿನ; ಅಮ್ಮನಿಗೆ ಮಲ್ಲಿಗೆ ಹೂವು ಮುಡಿಸಿದ ಯಥರ್ವ್ - ಈಟಿವಿ ಭಾರತ ಕನ್ನಡ

ಇಂದು ಯಶ್​ ಮತ್ತು ರಾಧಿಕಾ ಪಂಡಿತ್​ ಪುತ್ರನ ಜನ್ಮದಿನ. ಈ ಸಲುವಾಗಿ ರಾಧಿಕಾ ಅವರು ಮಗನ ಕ್ಯೂಟ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

Yash and Radhika Pandit son Yatharv birthday
ಯಶ್​-ರಾಧಿಕಾ ಪುತ್ರನ ಜನ್ಮದಿನ; ಅಮ್ಮನಿಗೆ ಮಲ್ಲಿಗೆ ಹೂವು ಮುಡಿಸಿದ ಯಥರ್ವ್
author img

By ETV Bharat Karnataka Team

Published : Oct 30, 2023, 4:09 PM IST

ಚಂದನವನದ ಎವರ್​ಗ್ರೀನ್​ ಬ್ಯೂಟಿಫುಲ್​ ನಟಿ ರಾಧಿಕಾ ಪಂಡಿತ್​. ಇವರು ಕೆಲವು ವರ್ಷಗಳಿಂದ ಸಿನಿ ರಂಗದಿಂದ ದೂರವೇ ಉಳಿದಿದ್ದಾರೆ. ಹಾಗಂತ ಅಭಿಮಾನಿಗಳಿಗೆ ರಾಧಿಕಾ ಮೇಲಿನ ಕ್ರೇಜ್​ ಕಡಿಮೆಯಾಗಿಲ್ಲ. ನಟ ಯಶ್​ ಅವರನ್ನು ಮದುವೆಯಾದಾಗಿನಿಂದ ಸಂಸಾರ, ಮಕ್ಕಳು ಅಂತ ಫುಲ್​ ಬ್ಯುಸಿಯಾಗಿದ್ದಾರೆ. ಆದರೆ ಸೋಷಿಯಲ್​ ಮೀಡಿಯಾದ ಮೂಲಕ ಫ್ಯಾನ್ಸ್​ ಜೊತೆ ಸಂಪರ್ಕದಲ್ಲಿರುವ ತಾರೆ ಹೊಸ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂದು ಮಗನ ಜನ್ಮದಿನದ ಸಲುವಾಗಿ ಕ್ಯೂಟ್​ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ.

ರಾಧಿಕಾ ಪಂಡಿತ್​ ಹಾಗೂ ಯಶ್​ ದಂಪತಿಯ ಪುತ್ರ ಯಥರ್ವ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 2019ರ ಅಕ್ಟೋಬರ್​ 30ರಂದು ಯಥರ್ವ್​ ಜನಿಸಿದ್ದು, ಬರ್ತ್​ಡೇ ಸಲುವಾಗಿ ರಾಧಿಕಾ ಪಂಡಿತ್​ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಮ್ಮನಿಗೆ ಮಗ ಮಲ್ಲಿಗೆ ಹೂವು ಮುಡಿಸುತ್ತಿರುವ ಮುದ್ದಾದ ದೃಶ್ಯ ಇದಾಗಿದೆ. ಇದಕ್ಕೊಂದು ಚೆಂದನೆಯ ಕ್ಯಾಪ್ಶನ್​ ನೀಡಿ ಪುತ್ರನಿಗೆ ಬರ್ತ್​ಡೇ ವಿಶ್​ ಮಾಡಿದ್ದಾರೆ.

"ನನ್ನ ಪ್ರೀಸಿಯಸ್​ ಬೇಬಿ ಬಾಯ್​. ನಾನು ಎಂದಿಗೂ ವಿಶೇಷ ಎನ್ನುವಂತೆ ಮಾಡಿದ್ದೀಯಾ. ನನ್ನನ್ನು ಅಮ್ಮನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ಹ್ಯಾಪಿ ಬರ್ತ್​ಡೇ ಯಥರ್ವ್​. ಲವ್​ ಯೂ ಆಲ್ವೇಸ್​" ಎಂದಿದ್ದಾರೆ. ಈ ಪೋಸ್ಟ್​ ಅನೇಕರ ಮೆಚ್ಚುಗೆ ಗಳಿಸಿದ್ದು, ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಕಮೆಂಟ್​ ಮೂಲಕ ನೆಟ್ಟಿಗರು ಯಶಿಕಾ ಪುತ್ರನಿಗೆ ಬರ್ತ್​ಡೇ ವಿಶ್​ ತಿಳಿಸಿದ್ದಾರೆ.

ಇದನ್ನೂ ಓದಿ: ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬಾಚರಿಸಿದ ಯಶ್​ ರಾಧಿಕಾ ದಂಪತಿ: Photos!

ಯಶ್​, ರಾಧಿಕಾರಂತೆ ಅವರ ಮಕ್ಕಳಿಗೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರ ಮುದ್ದಾದ ಫೋಟೋ, ವಿಡಿಯೋಗಳನ್ನು ನೋಡಲು ಜನರು ಕಾಯುತ್ತಿರುತ್ತಾರೆ. ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಯಶ್​ ಅವರು, ನನ್ನ ಮಕ್ಕಳಿಗೆ ಈಗಲೇ ಯಾವುದೇ ಸ್ಥಾನಮಾನ, ವಿಶೇಷ ಗೌರವ ಕೊಡಬೇಡಿ. ಅವರನ್ನು ಪ್ರೀತಿಸಿ ಮತ್ತು ಆಶೀರ್ವದಿಸಿ. ಆದರೆ, ಅವರು ಜೀವನದಲ್ಲಿ ಏನಾದರೂ ಸಾಧಿಸಿದ ಮೇಲೆಯೇ ಅವರಿಗೆ ಗೌರವ ಕೊಡಿ ಎಂದು ಹೇಳಿದ್ದರು. ಈ ಮಾತು ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಯಶ್​ ಮತ್ತು ರಾಧಿಕಾ 'ಮೊಗ್ಗಿನ ಮನಸು' ಸಿನಿಮಾ ಮೂಲಕ ಜೊತೆಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಈ ಜೋಡಿ ಅಭಿನಯಿಸಿದ ಎಲ್ಲಾ ಸಿನಿಮಾಗಳು ಸೂಪರ್​ ಹಿಟ್​ ಆಗಿದ್ದವು. ಅದಾಗಲೇ ಇವರಿಬ್ಬರು ಜಸ್ಟ್​ ಫ್ರೆಂಡ್ಸ್​ ಅಲ್ಲ ಎಂಬುದು ಪ್ರೇಕ್ಷಕರಿಗೆ ಅರಿವಾಗಿತ್ತು. 'ಮಿಸ್ಟರ್​ ಅಂಡ್​ ಮಿಸಸ್​ ರಾಮಾಚಾರಿ' ಚಿತ್ರ ಈ ಎಲ್ಲಾ ಗಾಸಿಪ್​ಗಳಿಗೆ ವಿದಾಯ ಹೇಳಿ ಕನ್ನಡಕ್ಕೆ ಹೊಸ ತಾರಾ ಜೋಡಿಯನ್ನು ನೀಡುವ ಭರವಸೆ ಕೊಟ್ಟಿತು. ಇದಾಗಿ ಕೆಲವೇ ದಿನಗಳಲ್ಲಿ ಗೋವಾದಲ್ಲಿ ವಿಜೃಂಭಣೆಯಿಂದ ನಿಶ್ಚಿತಾರ್ಥ ಮಾಡಿಕೊಂಡರು. ಡಿಸೆಂಬರ್​ 9, 2016ರಂದು ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆದರು. ತಾರಾ ದಂಪತಿಗೆ ಐರಾ ಮತ್ತು ಯಥರ್ವ್​ ಎಂಬ ಇಬ್ಬರು ಮುದ್ದು ಮಕ್ಕಳಿದ್ದು, ಸುಖ ಸಂಸಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಡಲ ತೀರದಲ್ಲಿ ಯಶ್‌​ ಕುಟುಂಬ: ಅಭಿಮಾನಿಗಳ ಕಣ್ಮನ ಸೆಳೆದ ರಾಧಿಕಾ ಪಂಡಿತ್ ಹೊಸ ಪೋಸ್ಟ್‌​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.