ETV Bharat / entertainment

ಗೋವಾ ಮಾಫಿಯಾದ ಕಥೆಯಲ್ಲಿ ರಾಕಿಂಗ್​ ಸ್ಟಾರ್​.. ಯಶ್​ 19 ಬಗ್ಗೆ ಸಿಕ್ತು ಬಿಗ್​ ಅಪ್​ಡೇಟ್ - etv bharat kannada

Yash 19 movie update: ಗೀತು ಮೋಹನ್​ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ, 1900ರಲ್ಲಿ ನಡೆದ ಗೋವಾ ಮಾಫಿಯಾ ಕಥೆ ಆಧಾರಿತ ಸಿನಿಮಾಗೆ ರಾಕಿಂಗ್​ ಸ್ಟಾರ್​ ಯಶ್​ ನಾಯಕ ಎಂಬ ಮಾತುಗಳು ಕೇಳಿಬರುತ್ತಿವೆ.

Yash 19 movie update
ಗೋವಾ ಮಾಫಿಯಾದ ಕಥೆಯಲ್ಲಿ ರಾಕಿಂಗ್​ ಸ್ಟಾರ್​; ಯಶ್​ 19 ಬಗ್ಗೆ ಸಿಕ್ತು ಬಿಗ್​ ಅಪ್​ಡೇಟ್!​
author img

By ETV Bharat Karnataka Team

Published : Sep 26, 2023, 4:05 PM IST

ರಾಕಿಂಗ್​ ಸ್ಟಾರ್​ ಯಶ್​ ಅವರ ಮುಂದಿನ ಸಿನಿಮಾದ ಬಗ್ಗೆ ತಿಳಿದುಕೊಳ್ಳಲು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ. ಕೆಜಿಎಫ್​ 2 ಬಳಿಕ ನಟ ಯಾವುದೇ ಸಿನಿಮಾ ಅನೌನ್ಸ್​ ಮಾಡಿಲ್ಲ. ಒಂದು ವರ್ಷದಿಂದ ಯಶ್​ 19 ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಲೇ ಇವೆ. ಇತ್ತೀಚೆಗಷ್ಟೇ ಗಣೇಶ ಚತುರ್ಥಿಗೆ ಯಶ್​ ಅವರು ತಮ್ಮ ಮುಂದಿನ ಸಿನಿಮಾವನ್ನು ಅನೌನ್ಸ್​ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದು ಕೂಡ ಕೇವಲ ಊಹಾಪೋಹವಾಗಿ ಉಳಿದುಕೊಂಡಿದೆ.

ಹೌದು.., ಕೆಜಿಎಫ್​ 2 ಬಿಡುಗಡೆಯಾಗಿ ಬ್ಲಾಕ್​ಬಸ್ಟರ್​ ಹಿಟ್​ ಆದ ನಂತರದ ದಿನಗಳಿಂದ ರಾಕಿ ಆರಾಧಕರನ್ನು ಕಾಡುತ್ತಿರುವ ಏಕೈಕ ಪ್ರಶ್ನೆ ಅಂದ್ರೆ ಯಶ್​ 19 ಸಿನಿಮಾ ಯಾವುದು? ಯಾರ ಜೊತೆ? ಚಿತ್ರಕಥೆ ಏನು? ನಾಯಕಿ ಯಾರು?. ಈ ವಿಚಾರವಾಗಿ ದಿನಗಳ ಜೊತೆ ಸಾಕಷ್ಟು ಅಂತೆ ಕಂತೆಗಳೂ ಉರುಳಿ ಹೋಗಿವೆ. ರಾಧಿಕಾ ಪಂಡಿತ್​ ಹಂಚಿಕೊಳ್ಳುವ ಪ್ರತಿ ಪೋಸ್ಟ್​ ಕಮೆಂಟ್​ನಲ್ಲೂ ಯಶ್​ 19 ಬಗ್ಗೆ ಮಾಹಿತಿ ನೀಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇಷ್ಟಾದ್ರೂ ಯಶ್​ ಮಾತ್ರ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

ಆದರೆ, ಈ ಮಧ್ಯೆ ಯಶ್​ 19 ಬಗ್ಗೆ ಸೋಷಿಯಲ್​ ಮೀಡಿಯಾದಲ್ಲೊಂದು ವಿಚಾರ ಸದ್ದು ಮಾಡುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ ದಾಸ್​ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ​'ಲೈಯರ್ಸ್ ಡೈಸ್' ಚಿತ್ರಕ್ಕಾಗಿ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಗೀತು ಅವರ ಸ್ಕ್ರಿಪ್ಟ್​ಗೆ ಯಶ್​ ಒಲವು ತೋರಿದ್ದಾರೆ ಎನ್ನಲಾಗಿದೆ. ಈ ಚಿತ್ರ ಬಹುತೇಕ ಕನ್ಫರ್ಮ್​ ಆಗಿದೆ ಎಂಬುದು ಸದ್ಯದ ಮಾಹಿತಿ.​

ಇದನ್ನೂ ಓದಿ: 'ಜನ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ, ಅದ್ಭುತ ಚಿತ್ರ ನೀಡುವ ಜವಾಬ್ದಾರಿ ನನ್ನ ಮೇಲಿದೆ': ಯಶ್​​

ಯಶ್​ ಅವರು ತಮಗೆ ಸೂಪರ್​ ಸಕ್ಸಸ್​ ನೀಡಿರುವ ಕೆಜಿಎಫ್​ ರೀತಿಯ ಕಥೆಯನ್ನೇ ಮತ್ತೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದು ಗಮನಾರ್ಹ ವಿಚಾರ. 1900ರಲ್ಲಿ ನಡೆದ ಗೋವಾ ಮಾಫಿಯಾವನ್ನು ಕಥಾವಸ್ತುವನ್ನಾಗಿಟ್ಟುಕೊಂಡು ಈ ಸಿನಿಮಾ ತಯಾರಾಗಲಿದೆ ಎನ್ನಲಾಗಿದೆ. ಸದ್ಯ ಈ ವಿಚಾರ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಆದರೆ, ಯಶ್‍ ಮಾತ್ರ 19ನೇ ಸಿನಿಮಾದ‌ ನಿರ್ದೇಶಕರು ಯಾರು? ಯಾವ ನಿರ್ಮಾಣ ಸಂಸ್ಥೆ ‌ಎಂಬುದರ‌ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಕೆಲ ದಿನಗಳ ಹಿಂದೆ ಯಶ್ ತಮ್ಮ ಕುಟುಂಬಸ್ಥರೊಂದಿಗೆ ಮೈಸೂರಿನ ನಂಜುಂಡೇಶ್ವರ ಸ್ವಾಮಿ ‌ದೇವಸ್ಥಾನಕ್ಕೆ‌‌ ಭೇಟಿ ಕೊಟ್ಟಿದ್ದರು. ಆ ಸಂದರ್ಭ ಮಾತನಾಡಿದ್ದ ನಟ, ಜನ ನನಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಅವರು ಕೊಡುವ ದುಡ್ಡಿಗೆ ಮೋಸ ಆಗಬಾರದು. ಅದಕ್ಕೆ ಮೌಲ್ಯ ಇದೆ. ಅವರು ಫ್ರೀಯಾಗಿ ಬಂದು ಸಿನಿಮಾ ನೋಡುವುದಿಲ್ಲ. ಹಾಗಾಗಿ, ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಬಹಳ ದಿನಗಳಿಂದ ಕೆಲಸ ಮಾಡುತ್ತಲೇ ಇದ್ದೇವೆ. ನಾನಂತೂ ಒಂದು ದಿನ, ಒಂದು ಕ್ಷಣವನ್ನೂ ವೇಸ್ಟ್​ ಮಾಡುತ್ತಿಲ್ಲ. ಇಡೀ ದೇಶ, ಜಗತ್ತು ನೋಡುತ್ತಿದೆ. ಆದಷ್ಟು ಬೇಗ ಬರುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ಕಡಲ ತೀರದಲ್ಲಿ ಯಶ್‌​ ಕುಟುಂಬ: ಅಭಿಮಾನಿಗಳ ಕಣ್ಮನ ಸೆಳೆದ ರಾಧಿಕಾ ಪಂಡಿತ್ ಹೊಸ ಪೋಸ್ಟ್‌​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.