ಖ್ಯಾತ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಸಲಾರ್'. 'ಕೆಜಿಎಫ್' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕಾಂಬೋದಲ್ಲಿ ತಯಾರಾಗುತ್ತಿರುವ ಚಿತ್ರ. ಇಂದು ಪೃಥ್ವಿರಾಜ್ ಜನ್ಮದಿನದ ನಿಮಿತ್ತ 'ಸಲಾರ್' ಚಿತ್ರತಂಡ ಅವರ ಫಸ್ಟ್ ಲುಕ್ ರಿವೀಲ್ ಮಾಡಿದೆ. ವಿಲನ್ ಲುಕ್ನಲ್ಲಿ ಮಾಲಿವುಡ್ ನಟ ಕಾಣಿಸಿಕೊಂಡಿದ್ದಾರೆ.
-
Wishing ‘𝐕𝐚𝐫𝐝𝐡𝐚𝐫𝐚𝐣𝐚 𝐌𝐚𝐧𝐧𝐚𝐚𝐫’ 𝗧𝗛𝗘 𝗞𝗜𝗡𝗚 @PrithviOfficial, a majestic birthday.#HBDVardharajaMannaar #HBDPrithvirajSukumaran#SalaarCeaseFire #Salaar @SalaarTheSaga #SalaarCeaseFireOnDec22 pic.twitter.com/KnH7prOXZR
— Salaar (@SalaarTheSaga) October 16, 2023 " class="align-text-top noRightClick twitterSection" data="
">Wishing ‘𝐕𝐚𝐫𝐝𝐡𝐚𝐫𝐚𝐣𝐚 𝐌𝐚𝐧𝐧𝐚𝐚𝐫’ 𝗧𝗛𝗘 𝗞𝗜𝗡𝗚 @PrithviOfficial, a majestic birthday.#HBDVardharajaMannaar #HBDPrithvirajSukumaran#SalaarCeaseFire #Salaar @SalaarTheSaga #SalaarCeaseFireOnDec22 pic.twitter.com/KnH7prOXZR
— Salaar (@SalaarTheSaga) October 16, 2023Wishing ‘𝐕𝐚𝐫𝐝𝐡𝐚𝐫𝐚𝐣𝐚 𝐌𝐚𝐧𝐧𝐚𝐚𝐫’ 𝗧𝗛𝗘 𝗞𝗜𝗡𝗚 @PrithviOfficial, a majestic birthday.#HBDVardharajaMannaar #HBDPrithvirajSukumaran#SalaarCeaseFire #Salaar @SalaarTheSaga #SalaarCeaseFireOnDec22 pic.twitter.com/KnH7prOXZR
— Salaar (@SalaarTheSaga) October 16, 2023
ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ವರ್ಧರಾಜ ಮನ್ನಾರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಎಕ್ಸ್ನಲ್ಲಿ ನಟನಿಗೆ ಜನ್ಮದಿನದ ಶುಭಾಶಯ ಕೋರಲು ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿರುವ ಸಲಾರ್ ಚಿತ್ರತಂಡ, "ವರ್ಧರಾಜ ಮನ್ನಾರ್, ದಿ ಕಿಂಗ್.. ಪೃಥ್ವಿರಾಜ್ ಸುಕುಮಾರನ್ಗೆ ಜನ್ಮದಿನದ ಶುಭಾಶಯಗಳು" ಎಂದು ಬರೆದುಕೊಂಡಿದೆ. ಫಸ್ಟ್ ಲುಕ್ ಪೋಸ್ಟರ್ನಲ್ಲಿ ಭಯಾನಕ ನೋಟದಲ್ಲಿ ಪೃಥ್ವಿ ಕಂಡಿದ್ದಾರೆ.
'ಸಲಾರ್' ಚಿತ್ರತಂಡದ ಈ ವಿಶೇಷ ಶುಭಾಶಯಕ್ಕೆ ಧನ್ಯವಾದ ತಿಳಿಸಲು ಪೋಸ್ಟರ್ ಹಂಚಿಕೊಂಡಿರುವ ಪೃಥ್ವಿರಾಜ್, "ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್ ನೀಲ್, ಪ್ರಭಾಸ್ ಹಾಗೂ ಇಡೀ ಸಲಾರ್ ಚಿತ್ರತಂಡಕ್ಕೆ ಧನ್ಯವಾದಗಳು. ಇಡೀ ಜಗತ್ತು ಈ ಮಹಾಕಾವ್ಯ ನೋಡಲು ಇನ್ನಷ್ಟು ಸಮಯ ಕಾಯಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Salaar VS Dunki: ಒಂದೇ ದಿನ ಶಾರುಖ್ - ಪ್ರಭಾಸ್ ಸಿನಿಮಾ ರಿಲೀಸ್; ಬಾಕ್ಸ್ ಆಫೀಸ್ ಪೈಪೋಟಿ ಪಕ್ಕಾ!
ಬಿಗ್ ಬಜೆಟ್ ಸಿನಿಮಾ.. 'ಸಲಾರ್' ಚಿತ್ರ ಬಿಗ್ ಬಜೆಟ್ ಮತ್ತು ಬಿಗ್ ಸ್ಟಾರ್ ಕಾಸ್ಟ್ ಮೂಲಕ ಗಮನ ಸೆಳೆಯುತ್ತಿದೆ. ಬಹುಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರ್ ನಿರ್ಮಿಸಿದ್ದಾರೆ. ದೊಡ್ಡ ತಾರಾಗಣ ಇರುವ ಚಿತ್ರದಲ್ಲಿ ಪ್ರಭಾಸ್ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.
-
Thank you Hombale Films, Prashanth Neel, Prabhas and the entire team of Salaar! Cannot wait for the world to see this epic! ❤️#SalaarCeaseFire #Salaar @SalaarTheSaga @hombalefilms #SalaarCeaseFireOnDec22 pic.twitter.com/GFrNG4sci4
— Prithviraj Sukumaran (@PrithviOfficial) October 16, 2023 " class="align-text-top noRightClick twitterSection" data="
">Thank you Hombale Films, Prashanth Neel, Prabhas and the entire team of Salaar! Cannot wait for the world to see this epic! ❤️#SalaarCeaseFire #Salaar @SalaarTheSaga @hombalefilms #SalaarCeaseFireOnDec22 pic.twitter.com/GFrNG4sci4
— Prithviraj Sukumaran (@PrithviOfficial) October 16, 2023Thank you Hombale Films, Prashanth Neel, Prabhas and the entire team of Salaar! Cannot wait for the world to see this epic! ❤️#SalaarCeaseFire #Salaar @SalaarTheSaga @hombalefilms #SalaarCeaseFireOnDec22 pic.twitter.com/GFrNG4sci4
— Prithviraj Sukumaran (@PrithviOfficial) October 16, 2023
ಕೆಜಿಎಫ್ ಚಿತ್ರಗಳಿಗೆ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ. ಚಿತ್ರವನ್ನು ಈ ವರ್ಷದ ಏಪ್ರಿಲ್ 14ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ 19ನಿಂದಾಗಿ ನಿರೀಕ್ಷೆಗಿಂತ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ವಿಳಂಬವಾಯಿತು. ಬಳಿಕ ಈ ವರ್ಷ ಸೆಪ್ಟೆಂಬರ್ 28ರಂದು ರಿಲೀಸ್ ಮಾಡಲು ಯೋಜಿಸಲಾಗಿತ್ತು. ಆದರೆ, ಕೆಲವು ಕಾರಣಾಂತರಗಳಿಂದ ಸಿನಿಮಾವು ಈ ವರ್ಷದ ಕೊನೆಯಲ್ಲಿ ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಡಂಕಿ Vs ಸಲಾರ್: ಭಾರತೀಯ ಚಿತ್ರರಂಗದ ಈ ವರ್ಷದ ಎರಡು ಬಹುನಿರೀಕ್ಷಿತ ಸಿನಿಮಾಗಳೆಂದರೆ 'ಸಲಾರ್' ಮತ್ತು 'ಡಂಕಿ'. ಪ್ರಶಾಂತ್ ನೀಲ್ ನಿರ್ದೇಶಿಸಿ, ಪ್ರಭಾಸ್ ನಟಿಸಿರುವ 'ಸಲಾರ್' ಮತ್ತು ರಾಜ್ಕುಮಾರ್ ಹಿರಾನಿ ನಿರ್ದೇಶನದ, ಶಾರುಖ್ ಖಾನ್ ನಟನೆಯ 'ಡಂಕಿ' ಡಿಸೆಂಬರ್ 22ರಂದು ಒಮ್ಮೆಲೇ ತೆರೆಗಪ್ಪಳಿಸಲಿದೆ. ಈ ಎರಡು ಸಿನಿಮಾಗಳ ಮಧ್ಯೆ ಭಾರಿ ಪೈಪೋಟಿ ಏರ್ಪಡುವುದಂತೂ ಪಕ್ಕಾ.
ಇದನ್ನೂ ಓದಿ: ನಟ ಪ್ರಭಾಸ್ ಇನ್ಸ್ಟಾಗ್ರಾಮ್ ಖಾತೆ ಮಾಯ, ಫ್ಯಾನ್ಸ್ಗೆ ಶಾಕ್-ಇದು 'ಸಲಾರ್' ಪ್ರಚಾರದ ಭಾಗವೇ?