ETV Bharat / entertainment

ವಿಕ್ಕಿ ಕೌಶಲ್ - ಕತ್ರೀನಾ ಕೈಫ್ ವಿಚ್ಛೇದನ ಪಡೆಯಲಿದ್ದಾರಾ? ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಸ್ಟಾರ್ ನಟ - Katrina Kaif Divorce

ಇತ್ತೀಚೆಗಷ್ಟೇ ಹಸೆಮಣೆ ಏರಿದ ಬಾಲಿವುಡ್​ನ ಕ್ಯೂಟ್​​ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ವಿಚ್ಛೇದನ ಪಡೆಯಲಿದ್ದಾರಾ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದು ನಿಜ ಅಲ್ಲದಿದ್ದರೂ ಅಸಲಿ ಕಾರಣವೇ ಬೇರೆ ಇದೆ. ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅರೆಕ್ಷಣ ಉತ್ತರಿಸಲಾಗದೇ ತಬ್ಬಿಬ್ಬಾದ ವಿಕ್ಕಿ ಕೌಶಲ್ ಏನಂದ್ರು ಗೊತ್ತಾ?

Will Vicky Kaushal divorce Katrina Kaif? Find out what the actor has to say

author img

By

Published : May 16, 2023, 12:01 PM IST

Updated : May 16, 2023, 1:46 PM IST

ಮುಂಬೈ (ಮಹಾರಾಷ್ಟ್ರ): 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರದ ಪ್ರಚಾರದಲ್ಲಿದ್ದ ಬಾಲಿವುಡ್​ ನಟ ವಿಕ್ಕಿ ಕೌಶಲ್​ಗೆ​ ಪತ್ರಕರ್ತರೊಬ್ಬರು ವಿಚ್ಛೇದನ ಕುರಿತು ಪ್ರಶ್ನೆ ಕೇಳಿ ಸಂಕಷ್ಟಕ್ಕೆ ಸಿಲುಕಿಸಿದ ಪ್ರಸಂಗ ನಡೆದಿದೆ. ಈ ಚಿತ್ರವು ಮದುವೆ, ಡಿವೋರ್ಸ್​, ಮರು ಮದುವೆ ಹೇಳುವ ಕಥೆಯಾಧಾರಿತ ಚಿತ್ರವಾಗಿದೆ. ಇಂತಹದ್ದೇ ಘಟನೆ ನಿಮ್ಮ ಜೀವನದಲ್ಲಿ ಸಂಭವಿಸಿದರೆ ಏನು ಮಾಡುತ್ತೀರಿ ಎಂದು ಕೇಳುವ ಮೂಲಕ ಗೊಂದಲಕ್ಕೀಡು ಮಾಡಿದ್ದರು. ಇವರ ಪ್ರಶ್ನೆ ಕೇಳಿದ ವಿಕ್ಕಿ ಕೌಶಲ್,​ ಅರೆ ಕ್ಷಣ ತಬ್ಬಿಬ್ಬಾದ ಪ್ರಸಂಗ ನಡೆಯಿತು.

ಹೌದು, 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ವರದಿಗಾರೊಬ್ಬ ಮಾತಿನ ಮಧ್ಯದಲ್ಲಿ ಕತ್ರಿನಾ ಕೈಫ್ ಅವರಿ​ಗಿಂತ ಉತ್ತಮವಾಗಿರುವ ಬೇರೆ ಹುಡುಗಿ ಸಿಕ್ಕರೆ ಮರು ಮದುವೆ ಆಗುತ್ತೀರಾ? ಅವರಿಗೆ ಡಿವೋರ್ಸ್​ ನೀಡುತ್ತೀರಾ?’ ಎಂದು ಕೇಳಿ ಸಂಕಷ್ಟಕ್ಕೆ ಸಿಲುಕಿಸಿದ ಘಟನೆ ನಡೆಯಿತು. ಮಾತಿನ ಮಧ್ಯದಲ್ಲಿ ಪತ್ರಕರ್ತರಿಂದ ತೂರಿಬಂದ ಈ ಗೂಗ್ಲಿ ಪ್ರಶ್ನೆಗೆ ಉತ್ತರಿಸಲಾಗದೇ ಅರೆಕ್ಷಣ ತಡಬಡಿಸಿದ ವಿಕ್ಕಿ ಕೌಶಲ್​, ಮಾತು ಬಾರದೇ ಮೌನ ವಹಿಸಿದ್ದರು.

ಆದರೆ, ಪತ್ರಕರ್ತರ ಈ ಪ್ರಶ್ನೆಯನ್ನು ತಮಾಷೆಯಾಗಿ ತೆಗೆದುಕೊಂಡ ವಿಕ್ಕಿ ಕೌಶಲ್,​ ಸ್ವಲ್ಪ ಸಮಯದ ಬಳಿಕ ಸರ್, ನಾನು ಸಂಜೆ ಮನೆಗೆ ಹಿಂತಿರುಗಬೇಕು! ನೀವು ಇಂತಹ ಗೂಗ್ಲಿ ಮತ್ತು ಟ್ರಿಕಿ ಪ್ರಶ್ನೆಗಳನ್ನು ಕೇಳಿದರೆ ನಾನು ಏನೆಂದು ಉತ್ತರ ನೀಡಬೇಕು? ಇಂತಹ ವಿಷಯದಲ್ಲಿ ನಾನಿನ್ನು ತುಂಬಾ ಚಿಕ್ಕವನು. ಅಲ್ಲದೇ ನಾನಿನ್ನು ಬಾಲಿವುಡ್​ನಲ್ಲಿ ಬೆಳೆಯುತ್ತಿರುವ ಮಗು, ಬೆಳೆಯಲು ಬಿಡಿ. ನಿಮ್ಮ ಅಪಾಯಕಾರಿ ಪ್ರಶ್ನೆಗೆ ಹೇಗೆ ಉತ್ತರಿಸಬೇಕು? ಎಂದು ಹಾಸ್ಯ ಚಟಾಕೆ ಹಾರಿಸಿದರು.

ಮತ್ತೆ ಮುಂದುವರಿದು ಮಾತನಾಡಿದ ವಿಕ್ಕಿ ಕೌಶಲ್, ಈ ಜನ್ಮದಲ್ಲಿ ಅಷ್ಟೇ ಅಲ್ಲ, ಮುಂದಿನ ಜನ್ಮದಲ್ಲೂ ಕತ್ರಿನಾ ಕೈಫ್​ ಅವರನ್ನು ಬಿಡುವುದಿಲ್ಲ ಎಂದು ಹೇಳಿ ತಮ್ಮ ಮತ್ತು ಪತ್ನಿಯ ನಡುವಿನ ಪ್ರೀತಿಯನ್ನು ತೋರಿಸಿಕೊಂಡರು.

'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರದ ಬಗ್ಗೆ ಮಾತನಾಡಿದ ಅವರು, ಸಾಮಾನ್ಯ ಕುಟುಂಬದಲ್ಲಿ ನಡೆಯುವ ಘಟನೆಗಳನ್ನು ಹೇಳುವ ಚಿತ್ರ ಇದಾಗಿದೆ. ಮದುವೆ, ಡಿವೋರ್ಸ್​, ಮರು ಮದುವೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕಥೆ ಇಟ್ಟುಕೊಂಡು ತೆರೆಗೆ ಬರುತ್ತಿದೆ. ಇದು ರೀಲ್​ ಲೈಫ್​. ರೀಲ್ ಜೀವನದಲ್ಲಿ ಯಾವಾಗಲೂ ಗೊಂದಲ ಇರುತ್ತದೆ. ಆದರೆ, ನನ್ನ ರೀಯಲ್​ ಲೈಫ್​ ಅಧ್ಬುತವಾಗಿದೆ ಎಂದರು. ಜರಾ ಹಟ್ಕೆ ಜರಾ ಬಚ್ಕೆ ಸದ್ಯದಲ್ಲೆ ತೆರೆಗೆ ಬರಲಿದ್ದು ವಿಕ್ಕಿ ಜೊತೆಗೆ ಸಾರಾ ಅಲಿ ಖಾನ್​ ನಾಯಕಿ ನಟಿಯಾಗಿ ನಟಿಸಿದ್ದಾರೆ.

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ 2021ರ ಡಿಸೆಂಬರ್​ 9ರಂದು ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಪೋರ್ಟ್​ ಬವೇರಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದ್ಧೂರಿಯಾಗಿ ಹಮ್ಮಿಕೊಂಡಿದ್ದ ಮದುವೆ ಸಮಾರಂಭದಲ್ಲಿ ಬಾಲಿವುಡ್​ ನಟ-ನಟಿಯರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ: ಹೆಂಡತಿ ಬಗ್ಗೆ ಬಹಿರಂಗವಾಗಿ ದೂರಿದ ಕಿಂಗ್​ ಖಾನ್: ಖ್ಯಾತ ವಿನ್ಯಾಸಕಿಯಾದ್ರೂ ತನ್ನ ಕೋಣೆ ವಿನ್ಯಾಸ ಮಾಡಿಲ್ಲ ಎಂದ ಶಾರುಖ್​​

Last Updated : May 16, 2023, 1:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.