ETV Bharat / entertainment

ಕರಣ್​ ಜೋಹರ್​ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸಲ್ಮಾನ್​ - ಸಮಂತಾ?! - Salman khan

Salman and Samantha Movie: ಕರಣ್​ ಜೋಹರ್​ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಮತ್ತು ಸಮಂತಾ ರುತ್​ ಪ್ರಭು ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Will Salman and Samantha share the screen in Karan Johar's next movie?
ಕರಣ್​ ಜೋಹರ್​ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸಲ್ಮಾನ್​ - ಸಮಂತಾ?
author img

By ETV Bharat Karnataka Team

Published : Sep 16, 2023, 2:27 PM IST

ಪ್ರಸ್ತುತ ಬಾಲಿವುಡ್​ ಭಾಯ್​ಜಾನ್​​ ಸಲ್ಮಾನ್​ ಖಾನ್​ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಇದೆ. ಹೆಚ್ಚೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ. ಬಾಲಿವುಡ್​ ಸೂಪರ್​ ಸ್ಟಾರ್​ನ ಕೊನೆ ಸಿನಿಮಾ ಕಿಸಿ ಕಾ ಭಾಯ್ ಕಿಸಿ ಕಿ ಜಾನ್​​. ಆದರೆ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಕೊಂಚ ಹಿನ್ನೆಡೆ ಕಂಡಿತು. ಸದ್ಯ ನಟನ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

ನಟ ಸಲ್ಮಾನ್​ ಖಾನ್​​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ಟೈಗರ್​ 3. ನಟಿ ಕತ್ರಿನಾ ಕೈಫ್​​ ನಾಯಕ ನಟಿ. ಈಗಾಗಲೇ ಬಂದಿರುವ ಚಿತ್ರದ ಎರಡು ಭಾಗಗಳು ಯಶಸ್ವಿ ಆಗಿವೆ. ಟೈಗರ್​ ಪಾರ್ಟ್ 3 ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾ ಗೆಲ್ಲುವ ವಿಶ್ವಾಸದಲ್ಲಿ ಚಿತ್ರ ತಂಡವಿದೆ. ಸಲ್ಮಾನ್​ ಖಾನ್​ ತಮ್ಮ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ದೀಪಾವಳಿ ಸಂದರ್ಭ ಸಿನಿಮಾ ಬಿಡುಗಡೆಯಾಗಲಿದೆ. ಟೈಗರ್​ 3 ಸಖತ್​ ಕ್ರೇಜ್​ ಸೃಷ್ಟಿಸಿದ್ದು, ಈ ಹೊತ್ತಿನಲ್ಲಿ ಸಲ್ಮಾನ್​ ಅವರ ಮುಂದಿನ ಮತ್ತೊಂದು ಸಿನಿಮಾ ಸಲುವಾಗಿ ಹಲವು ವಿಚಾರಗಳು ಹೊರಬಿದ್ದಿವೆ.

ಹೌದು ಬಾಲಿವುಡ್​ನ ಬ್ಯಾಚುಲರ್​ ಸಲ್ಲು, ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್​ ಜೋಹರ್​​ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಕರಣ್​ ಜೋಹರ್​​ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸಲ್ಮಾನ್​ ನಟಿಸಲಿದ್ದಾರೆ. ಸಲ್ಮಾನ್​ ಜೊತೆ ಸೌತ್​ ಸಿನಿಮಾ ರಂಗದ ಸುಂದರಿ ಸಮಂತಾ ರುತ್​ ಪ್ರಭು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸೋಷಿಯಲ್​ ಮೀಡಿಯಾಗಳಲ್ಲಿ ಈ ಸುದ್ದಿ ಸದ್ದು ಮಾಡುತ್ತಿದ್ದು, ಅಧಿಕೃತ ಘೋಷಣೆಗೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 400, ವಿಶ್ವದಲ್ಲಿ 700: ಸಾವಿರ ಕೋಟಿ ರೂ. ಕಲೆಕ್ಷನ್​ ಮಾಡುತ್ತಾ 'ಜವಾನ್'​​?!

ವರದಿಗಳ ಪ್ರಕಾರ, ಸಲ್ಮಾನ್​ ಖಾನ್​ ಅವರ ಮುಂದಿನ ಸಿನಿಮಾವನ್ನು ಡೈರೆಕ್ಟರ್​ ವಿಷ್ಣುವರ್ಧನ್​ ನಿರ್ದೇಶಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಸೂಪರ್​ ಹಿಟ್​ ಶೇರ್ಷಾ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದರು. ಬಾಲಿವುಡ್​ ತಾರಾ ದಂಪತಿ ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯ ಶೇರ್ಷಾ ಸಿನಿಮಾ ನಿರ್ದೇಶಿಸಿದ್ದರು. ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿತು. ಇದೀಗ ಸಲ್ಮಾನ್​​ ಖಾನ್​​ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಈ ಸಂಬಂಧ ಚರ್ಚೆಗಾಗಿ ನಟಿ ಸಮಂತಾ ರುತ್​ ಪ್ರಭು ಇತ್ತೀಚೆಗೆ ಮುಂಬೈಗೆ ಬಂದಿದ್ದರು. ಚಿತ್ರಕ್ಕಾಗಿ ಸಮಂತಾ ಅವರೊಂದಿಗೆ ಚರ್ಚೆ ನಡೆದಿದೆ ಎಂದು ವರದಿಗಳು ಹೇಳಿವೆ. ಮತ್ತೊಂದೆಡೆ ಪೊನ್ನಿಯಿನ್​ ಸೆಲ್ವನ್​ ನಟಿ ತ್ರಿಶಾ ಕೃಷ್ಣನ್​​ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಒಟ್ಟಾರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಕೊಡಬೇಕಿದೆ.

ಇದನ್ನೂ ಓದಿ: ದುಬೈನಲ್ಲಿ ಸೌತ್​ ಸಿನಿ ಕಲರವ: ಇಂತಿದೆ ಸೈಮಾ ವಿಜೇತರ ಪಟ್ಟಿ.. ಕನ್ನಡ, ತೆಲುಗು ಸಾಧಕರಿವರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.