ನಾಗ ಚೈತನ್ಯ ಅವರು ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್ ಸಲುವಾಗಿ ಚಂದೂ ಮೊಂಡೇಟಿ (Chandoo Mondeti) ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ನಾಗ ಚೈತನ್ಯ ಮತ್ತು ಚಂದೂ ಮೊಂಡೇಟಿ ಕಾಂಬೋದಲ್ಲಿ ಪ್ರೇಮಂ, ಸವ್ಯಸಾಚಿಯಂತಹ ಸಿನಿಮಾಗಳು ಮೂಡಿ ಬಂದಿದ್ದವು. ಈ ಎರಡೂ ಸಿನಿಮಾಗಳೂ ಸಹ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತ್ತು. ಇದೀಗ ಮೂರನೇ ಸಿನಿಮಾ ಮಾಡಲು ತಯಾರಿ ನಡೆದಿದೆ. ಚಿತ್ರದಲ್ಲಿ ನಟಿ ಕೀರ್ತಿ ಸುರೇಶ್ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
'ಮಹಾನಟಿ'ಯಲ್ಲಿ ಕಾಣಿಸಿಕೊಂಡಿದ್ದ ಕಲಾವಿದರು: ಇದು ಕೀರ್ತಿ ಸುರೇಶ್ ಮತ್ತು ನಾಗ ಚೈತನ್ಯ ಅವರ ಎರಡನೇ ಪ್ರಾಜೆಕ್ಟ್. ಬ್ಲಾಕ್ಬಸ್ಟರ್ ಸಿನಿಮಾ 'ಮಹಾನಟಿ'ಯಲ್ಲಿ ನಟಿಸಿದ ಈ ಜೋಡಿ ಮತ್ತೊಂದು ಹೊಸ ಸಿನಿಮಾದಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಈ ಬಯೋಪಿಕ್‌ನಲ್ಲಿ ನಾಗ ಚೈತನ್ಯ ತಮ್ಮ ದಿವಂಗತ ಅಜ್ಜ ಅಕ್ಕಿನೇನಿ ನಾಗೇಶ್ವರ್ ರಾವ್ ಪಾತ್ರವನ್ನು ನಿರ್ವಹಿಸಿದ್ದರು.
ಘೋಷಣೆಯಾಗಬೇಕಿರುವ ಮುಂದಿನ ಸಿನಿಮಾದಲ್ಲಿ ಕೀರ್ತಿ ಸುರೇಶ್ ಮತ್ತು ನಾಗ ಚೈತನ್ಯ ಅವರು ಪೂರ್ಣ ಪ್ರಮಾಣದಲ್ಲಿ ನಟಿಸಲಿದ್ದಾರೆ. ಆದಾಗ್ಯೂ, ಈ ಬಗ್ಗೆ ಅಧಿಕೃತ ದೃಢೀಕರಣವನ್ನು ನಿರೀಕ್ಷಿಸಲಾಗುತ್ತಿದೆ. ಬನ್ನಿ ವಾಸ್ ಮತ್ತು ಅವರ ತಂಡ ಈ ಯೋಜನೆಗೆ ಹಣಕಾಸು ಒದಗಿಸಲಿದ್ದಾರೆ ಎಂದು ವದಂತಿಗಳಿವೆ. ಬನ್ನಿ ವಾಸ್ ನಿರ್ಮಾಣದಲ್ಲಿ ಮೂಡಿ ಬರಲಿರುವ ಎರಡನೇ ಸಿನಿಮಾವಿದು.
ದೋಣಿ ಚಾಲಕನ ಪಾತ್ರದಲ್ಲಿ ನಾಗ ಚೈತನ್ಯ: ಕೀರ್ತಿ ಸುರೇಶ್ ಮತ್ತು ನಾಗ ಚೈತನ್ಯ ನಟಿಸಲಿರುವ ಈ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ. ಇದರಲ್ಲಿ ನಾಯಕನು ತನ್ನ ಹುಡುಗಿಗಾಗಿ ಸಾಕಷ್ಟು ರಿಸ್ಕ್ ತೆಗೆದುಕೊಳ್ಳುತ್ತಾನೆ. ಕೊನೆಯಲ್ಲಿ ಬಹಳಷ್ಟು ತಿರುವುಗಳೊಂದಿಗೆ ಸಿನಿಮಾ ಮುಕ್ತಾಯಗೊಳ್ಳುತ್ತದೆ. ವರದಿಗಳ ಪ್ರಕಾರ, ನಟ ನಾಗ ಚೈತನ್ಯ ದೋಣಿ ಚಾಲಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರ ತಂಡ ಈ ಸ್ಕ್ರಿಪ್ಟ್‌ಗಾಗಿ ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಯೋಜನೆಯನ್ನು ಘೋಷಿಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ: 'ಮ್ಯಾನೇಜರ್ ವಂಚಿಸಿಲ್ಲ, ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕವಾಗಿದ್ದೇವೆ': ರಶ್ಮಿಕಾ ಮಂದಣ್ಣ ಸ್ಪಷ್ಟನೆ!
ನಾಗ ಚೈತನ್ಯ ಸಿನಿಮಾ: ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಅವರು ಇತ್ತೀಚೆಗೆ ವೆಂಕಟ್ ಪ್ರಭು ಅವರ ಕಸ್ಟಡಿ ಸಿನಿಮಾದಲ್ಲಿ ಕಾಣಿಸಿಕೊಂಡರು. ಇದು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿತು. ಕೃತಿ ಶೆಟ್ಟಿ ಮತ್ತು ಅರವಿಂದ್ ಸ್ವಾಮಿ ಇಬ್ಬರೂ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚಲನಚಿತ್ರವು ಪ್ರಸ್ತುತ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಕಸ್ಟಡಿ ಬಳಿಕ ನಟ ನಾಗ ಚೈತನ್ಯ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿಲ್ಲ.
ಇದನ್ನೂ ಓದಿ: Urvashi Rautela Photo: ಸೌಂದರ್ಯದ ಖನಿ ಊರ್ವಶಿ ರೌಟೇಲಾ ಮುಡಿಗೇರಿತು ವಿಶೇಷ ಪ್ರಶಸ್ತಿ
ಕೀರ್ತಿ ಸುರೇಶ್ ಸಿನಿಮಾ: ಇನ್ನೂ ನಟಿ ಕೀರ್ತಿ ಸುರೇಶ್ ಅವರ ಮಾಮಣ್ಣನ್ (Maamannan) ಬಿಡುಗಡೆಗೆ ಸಜ್ಜಾಗಿದೆ. ಇದರಲ್ಲಿ ವಡಿವೇಲು ಮತ್ತು ಉದಯನಿಧಿ ಸ್ಟಾಲಿನ್ ಕೂಡ ನಟಿಸಿದ್ದಾರೆ.ಮಾರಿ ಸೆಲ್ವರಾಜ್ ನಿರ್ದೇಶಿಸಿರುಚ ಈ ಸಿನಿಮಾ ಜೂನ್ 29 ರಂದು ತೆರೆಕಾಣಲಿದೆ.