ETV Bharat / entertainment

ಪ್ರಿಯಾಂಕಾ ಚೋಪ್ರಾ 'ಮಿಸ್​​ ವರ್ಲ್ಡ್'​​ ಕಿರೀಟ ಮುಡಿಗೇರಿಸಿಕೊಂಡಾಗ ಗಂಡ ನಿಕ್​ ವಯಸ್ಸು ಜಸ್ಟ್​ 7 ವರ್ಷ!

author img

By

Published : May 12, 2023, 6:18 PM IST

2000ನೇ ಇಸವಿಯಲ್ಲಿ 18 ವರ್ಷದ ಪ್ರಿಯಾಂಕಾ ಚೋಪ್ರಾ ಮಿಸ್​ ವರ್ಲ್ಡ್​​ ಪ್ರಶಸ್ತಿ ಮುಡಿಗೇರಿಸಿಕೊಂಡ ಕಾರ್ಯಕ್ರಮವನ್ನು ನಿಕ್​ ಕೂಡ ವೀಕ್ಷಣೆಯನ್ನು ಮಾಡಿದ್ದರಂತೆ.

When Priyanka Chopra came to know 7-year-old Nick Jonas watched her win Miss World: 'It was so weird'

ಹೈದರಾಬಾದ್​: ಗ್ಲೋಬಲ್​ ಐಕಾನಿಕ್​ ಪ್ರಿಯಾಂಕಾ ಚೋಪ್ರಾ 22 ವರ್ಷಗಳ ಹಿಂದೆ ಮಿಸ್​ ವರ್ಲ್ಡ್​ ಪ್ರಶಸ್ತಿಯ ಕಿರೀಟ ಮುಡಿಗೇರಿಸಿಕೊಂಡಿದ್ದು ಹೆಮ್ಮೆಯ ವಿಷಯ. ಈ ಪ್ರಶಸ್ತಿ ಭಾರತಕ್ಕೆ ಕೀರ್ತಿ ತಂದುಕೊಡುವ ಜೊತೆಗೆ ಅನೇಕ ಅಭಿಮಾನಿಗಳ ಮನಸ್ಸನ್ನು ಗೆದ್ದರು ನಟಿ ಪ್ರಿಯಾಂಕಾ. ಈ ಸೌಂದರ್ಯ ಸ್ಪರ್ಧೆ ಕಾರ್ಯಕ್ರಮವನ್ನು ಅಂದು ಜಗತ್ತಿನಾದ್ಯಂತ ಅನೇಕ ಅಭಿಮಾನಿಗಳು ವೀಕ್ಷಣೆ ಮಾಡಿದ್ದರು. ಅದರಲ್ಲಿ ಒಂದು ನಿಕ್​ ಜೋನಸ್​ ಕುಟುಂಬ.

ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಚೋಪ್ರಾ

2000ನೇ ಇಸವಿಯಲ್ಲಿ ಲಂಡನ್​ನಲ್ಲಿ ನಡೆದ ಮಿಸ್​ ವರ್ಲ್ಡ್​​ ಪ್ರಶಸ್ತಿ ಸಮಾರಂಭ ಸಮಾರಂಭವನ್ನು ಪ್ರಿಯಾಂಕಾ ಅವರ ಅತ್ತೆ ಡೆನಿಸ್​ ಕೂಡ ತಮ್ಮ ಮಗ ನಿಕ್​ ಜೋನಸ್​ ಜೊತೆ ಕುಳಿತು ವೀಕ್ಷಣೆ ಮಾಡಿದ್ದರಂತೆ. ಈ ವೇಳೆ ನಿಕ್​ ಜೋನಸ್​ ವಯಸ್ಸು ಕೇವಲ 7 ವರ್ಷ ಆಗಿತ್ತಂತೆ.

ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಂಕಾ, ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಗಂಡನ ವಯಸ್ಸಿನ ಅಂತರವನ್ನು ಬಹಿರಂಗ ಪಡಿಸಿದ ಅವರು ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ತಮ್ಮ ಈ ಕಾರ್ಯಕ್ರಮ ಹೇಗೆ ಅತ್ತೆ ಮನೆ ಮತ್ತು ಗಂಡನಲ್ಲಿ ಅಚ್ಚಳಿಯದ ನೆನಪಿನ ಮುದ್ರೆ ಒತ್ತಿದೆ ಎಂಬ ಸಂಭ್ರಮ ಹಂಚಿಕೊಂಡಿದ್ದಾರೆ.

ನನ್ನ ಅತ್ತೆ ಈ ಕಥೆಯನ್ನು ನನಗೆ ಹೇಳಿದರು. 18 ವರ್ಷವಿದ್ದಾಗ ನಾನು ಲಂಡನ್​ನಲ್ಲಿ ಮಿಸ್​ ವರ್ಲ್ಡ್​ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದೆ. ಈ ಘಟನೆಯನ್ನು ನನ್ನ ಅತ್ತೆ, ಮಾವ ಮತ್ತು ಗಂಡ ನೋಡಿದ್ದರು. ಅವರು ನನ್ನ ಭೇಟಿಯಾದಾಗಲೂ ನೀನು ಸ್ಪರ್ಧೆಯಲ್ಲಿ ವಿಜೇತಳಾಗಿದ್ದ ಕಾರ್ಯಕ್ರಮ ವೀಕ್ಷಣೆ ಮಾಡಿದ್ದೆವು ಎಂದಿದ್ದರು. ಈ ಸಂದರ್ಭದಲ್ಲಿ ಅವರು ಟೆಕ್ಸಾಸ್​ನಲ್ಲಿದ್ದರಂತೆ ಎಂದು ವಿವರಣೆ ನೀಡಿದರು.

ನನ್ನ ಅತ್ತೆಯ ಗಂಡ ಕೆವಿನ್​ ಸಆರ್​ ಅವರಿಂದ ಈ ಸೌಂದರ್ಯ ಸ್ಪರ್ಧೆ ನೋಡುವ ಹುಚ್ಚು ಕುಟುಂಬಕ್ಕೆ ಹಬ್ಬಿತು. ಇದೆ ಕಾರಣದಿಂದ ಅವರಿಗೆ ಈ ಕಾರ್ಯಕ್ರಮ ನೋಡುವ ಹುಮ್ಮಸ್ಸು ಇತ್ತು. 7 ವರ್ಷದ ನಿಕ್​ ಕೂಡ ಈ ಕಾರ್ಯಕ್ರಮವನ್ನು ತಾಯಿ ಜೊತೆ ನೋಡಿದ್ದರು. ಇದು ನಿಜಕ್ಕೂ ವಿಚಿತ್ರ. ನಿಮ್ಮ ಜೀವನದಲ್ಲಿ ಯಾವುದೇ ಅವಧಿಯಲ್ಲೂ ನಿಮ್ಮ ವ್ಯಕ್ತಿಗಳು ಎಂದಿಗೂ ಒಟ್ಟಿಗೆ ಇರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಇದನ್ನು ನಾನು ನಂಬುತ್ತೇನೆ ಎಂದರು.

ಭಾರೀ ವಯಸ್ಸಿನ ಅಂತರ ನಡುವೆಯೂ ಪ್ರಿಯಾಂಕಾ ಮತ್ತು ನಿಕ್​ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ವೇಳೆ ಅತಿ ಚಿಕ್ಕ ವಯಸ್ಸಿನ ನಿಕ್​ ಅವರನ್ನು ಪ್ರಿಯಾಂಕಾ ವರಿಸುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. 2018ರಲ್ಲಿ ಮದುವೆಯಾದ ಈ ಜೋಡಿ, ಕಳೆದ ಜನವರಿಯಲ್ಲಿ ತಮ್ಮ ಮೊದಲ ಮಗಳು ಮಾಲ್ತಿ ಮೇರಿಯನ್ನು ಸರೋಗೆಸಿ ಮೂಲಕ ಪಡೆದರು. ಮುದ್ದು ಮಗಳ ಜೊತೆಗೆ ಇಬ್ಬರು ಪೋಷಕರು ಕಾಲ ಕಳೆಯುತ್ತಿದ್ದು, ಇತ್ತ ತಮ್ಮ ಬಿಡುವಿಲ್ಲದ ವೃತ್ತಿ ಜೀವನದಲ್ಲೂ ಯಶಸ್ವಿಯಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ನಟಿ ಪ್ರಿಯಾಂಕಾ ನಟನೆಯ ಸಿಟಾಡೆಲ್​ ಚಿತ್ರ ಓಟಿಟಿಯಲ್ಲಿ ಭರ್ಜರಿ ಯಶಸ್ಸು ಪಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.