ಮುಂಬೈ (ಮಹಾರಾಷ್ಟ್ರ): ನಟಿ, ಗಾಯಕಿ ಶೆಹನಾಜ್ ಗಿಲ್ ಅವರು ಬ್ರಿಟ್ನಿ ಸ್ಪಿಯರ್ಸ್ ಅವರ ವರ್ಕ್ ಬಿಚ್ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸರಳ ಅಂಗಿ ಮತ್ತು ಪಲಾಝೋ ಪ್ಯಾಂಟ್ ಧರಿಸಿ ತೆರೆದ ಕೂದಲಿನೊಂದಿಗೆ ಡ್ಯಾನ್ಸ್ ಮಾಡಿರುವ ಶೆಹನಾಜ್ ಕುಣಿತಕ್ಕೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ವಿಡಿಯೋಗೆ ಅಡಿಬರಹವಾಗಿ "ವರ್ಕ್ ಬಿಚ್..." ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಬಿಗ್ ಬಾಸ್ ಸೀಸನ್ 13ನಲ್ಲಿ ಫೈನಲಿಸ್ಟ್ ಆಗಿದ್ದ ಶೆಹನಾಜ್ ತಮ್ಮ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದ್ದರು. ಶೆಹನಾಜ್ ನೃತ್ಯಕ್ಕೆ ಅಭಿಮಾನಿಗಳು ಅಭಿನಂದನೆಯ ಮಹಾಪೂರವನ್ನು ಹರಿಸಿದ್ದು, ಅಭಿಮಾನಿಯೊಬ್ಬರು, "ವಾವ್ ಶೆಹನಾಜ್ ಗಿಲ್" ಎಂದು ಬರೆದಿದ್ದಾರೆ.
ಸದ್ಯ ಶೆಹನಾಜ್ ಸಲ್ಮಾನ್ ಖಾನ್ ಅಭಿನಯದ "ಕಭಿ ಈದ್ ಕಭಿ ದಿವಾಲಿ" ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಈ ಸಿನಿಮಾದಲ್ಲಿ ಪಕ್ಕದ ಮನೆಯ ಹುಡುಗಿಯ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.