ETV Bharat / entertainment

Watch: ಫ್ಯಾನ್ಸ್​ ಜೊತೆ ಏರ್​ಪೋರ್ಟ್​ನಲ್ಲಿ 'ಕಾವಾಲಾ' ಹಾಡಿಗೆ ಸ್ಟೆಪ್​ ಹಾಕಿದ ತಮನ್ನಾ ಭಾಟಿಯಾ - ಲಸ್ಟ್ ಸ್ಟೋರೀಸ್ 2

ಅಭಿಮಾನಿಗಳ ಒತ್ತಾಯದ ಮೇರೆಗೆ 'ಕಾವಾಲಾ' ಹಾಡಿಗೆ ನಟಿ ತಮನ್ನಾ ಭಾಟಿಯಾ ವಿಮಾನ ನಿಲ್ದಾಣದಲ್ಲೇ ಡ್ಯಾನ್ಸ್​ ಮಾಡಿದ್ದಾರೆ.

Tamannaah Bhatia
ತಮನ್ನಾ
author img

By

Published : Jul 11, 2023, 7:31 PM IST

Updated : Jul 11, 2023, 8:12 PM IST

ಕಾಲಿವುಡ್​ ಸೂಪರ್​ ಸ್ಟಾರ್​ ರಜನಿಕಾಂತ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಜೈಲರ್'​ ಸಿನಿಮಾದ 'ಕಾವಾಲಾ' ಹಾಡು ಪ್ರಸ್ತುತ ಟ್ರೆಂಡಿಂಗ್​ನಲ್ಲಿದೆ. ಈ ಹಾಡಿಗೆ ಸಿನಿಮಾದಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಸೊಂಟ ಬಳುಕಿಸಿದ್ದಾರೆ. ಸದ್ಯ ಈ ಹಾಡು ಕೇಳಿದ ಜನರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ತಮನ್ನಾಗೆ ಅಲ್ಲಿದ್ದವರು ಇದೇ ಹಾಡಿಗೆ ಕುಣಿಯುವಂತೆ ಒತ್ತಾಯಿಸಿದ್ದು, ನಟಿ ಅಲ್ಲೇ ಒಂದೆರೆಡು ಸ್ಟೆಪ್​ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ನಟಿ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಬ್ಲ್ಯಾಕ್​ ಸ್ಪೋರ್ಟ್ಸ್ ಟಾಪ್​ ಮತ್ತು ಟ್ರ್ಯಾಕ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು. ಅಲ್ಲಿದ್ದ ಛಾಯಾಗ್ರಾಹಕರ ಕೋರಿಕೆಯ ಮೇರೆಗೆ, 'ಲಸ್ಟ್ ಸ್ಟೋರೀಸ್ 2' ನಟಿ 'ಕಾವಾಲಾ' ಹಾಡಿಗೆ ನೃತ್ಯ ಮಾಡಲು ಒಪ್ಪಿಕೊಂಡರು. ತಮನ್ನಾ ಅವರು ತಮ್ಮ ಅಭಿಮಾನಿಗಳೊಂದಿಗೆ ಸೇರಿ ಡ್ಯಾನ್ಸ್​ ಮಾಡಿರುವ ವಿಡಿಯೋವನ್ನು ಪಾಪರಾಜಿಗಳು ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ತಮನ್ನಾ ಅವರ ಹೊಸ ನೃತ್ಯವು ಪ್ರೇಕ್ಷಕರನ್ನು ಸೆಳೆಯುತ್ತಿದೆ" ಎಂದು ವಿಡಿಯೋಗೆ ಕ್ಯಾಪ್ಶನ್​ ನೀಡಿದ್ದಾರೆ.

ತಮನ್ನಾ ಡ್ಯಾನ್ಸ್​ ವಿಡಿಯೋ ಅಪ್​ಲೋಡ್​ ಆಗುತ್ತಿದ್ದಂತೆ ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ನಟಿಯ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಕಾಮೆಂಟ್​ ವಿಭಾಗವನ್ನು ಆಯ್ದುಕೊಂಡರು. ಜೈಲರ್​ ಚಿತ್ರದ ಕಾವಾಲಾ ಹಾಡು ಜುಲೈ 6 ರಂದು ಬಿಡುಗಡೆಯಾಗಿತ್ತು. ಇದು ನಿರೀಕ್ಷೆಗಿಂತಲೂ ತ್ವರಿತವಾಗಿ ಹಿಟ್​ ಆಯಿತು. ಈ ಹಾಡಿನಲ್ಲಿ ತಮನ್ನಾ ಅವರು ರಜನಿಕಾಂತ್​ ಜೊತೆ ಕುಣಿದಿದ್ದಾರೆ. ಈ ಹಾಡನ್ನು ಶಿಲ್ಪಾ ರಾವ್ ಮತ್ತು ಅನಿರುದ್ಧ್ ರವಿಚಂದರ್ ಹಾಡಿದ್ದು, ಅರುಣ್ರಾಜ ಕಾಮರಾಜ್ ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ: Alia Bhatt: 'ತುಮ್​ ಕ್ಯಾ ಮಿಲೇ' ಹಾಡಿನ ಚಿತ್ರೀಕರಣದ ವಿಡಿಯೋ ಹಂಚಿಕೊಂಡ ಆಲಿಯಾ ಭಟ್​

'ಜೈಲರ್'​ ಆಗಸ್ಟ್ 10 ರಂದು ತೆರೆಗೆ: ನೆಲ್ಸನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಜೈಲರ್' ಸಿನಿಮಾದ ಚಿತ್ರೀಕರಣ ಮುಗಿದಿದೆ. ಚಿತ್ರ ಆಗಸ್ಟ್ 10 ರಂದು ಚಿತ್ರಮಂದಿರಗಳಿಗೆ ಬರಲಿದೆ. ಕಲಾನಿಧಿ ಮಾರನ್ ಈ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ತಮಿಳಿನ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ. ನಾಯಕಿಯಾಗಿ ಸೌತ್​ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟಿಸುತ್ತಿದ್ದಾರೆ.

ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವರಾಜ್​​ಕುಮಾರ್​, ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ ಲಾಲ್​, ಜಾಕಿ ಶ್ರಾಫ್​, ರಮ್ಯಾ ಕೃಷ್ಣ, ಹಾಸ್ಯನಟ ಸುನೀಲ್​ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಆರ್.ನಿರ್ಮಲ್​ ಸಂಕಲನ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಚಿತ್ರಕ್ಕಿದೆ. ಅದ್ಧೂರಿ ವೆಚ್ಚದಲ್ಲಿ ತಯಾರಾಗುತ್ತಿರುವ ಜೈಲರ್ ಚಿತ್ರವನ್ನು ಚೆನ್ನೈ, ನೆಯ್ವೇಲಿ, ಹೈದರಾಬಾದ್, ಕೊಚ್ಚಿ ಸೇರಿದಂತೆ ದೇಶದ ಹಲವೆಡೆ ದೊಡ್ಡ ವೆಚ್ಚದಲ್ಲಿ ಚಿತ್ರೀಕರಿಸಲಾಗಿದೆ. ಆ್ಯಕ್ಷನ್ ಚಿತ್ರವಾಗಿರುವ ಜೈಲರ್ ಚಿತ್ರದಲ್ಲಿ ರಜನಿಕಾಂತ್ ಜೈಲರ್ ಆಗಿ 'ಮುತ್ತುವೇಲ್ ಪಾಂಡಿಯನ್' ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Deepika Padukone: ಫ್ಯಾಷನ್ ಐಕಾನ್​ ದೀಪಿಕಾ ಪಡುಕೋಣೆ ಏರ್​ಪೋರ್ಟ್​ ನೋಟಕ್ಕೆ ಫ್ಯಾನ್​ ಫಿದಾ

Last Updated : Jul 11, 2023, 8:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.