ETV Bharat / entertainment

'ಪುಷ್ಪ 2' ಚಿತ್ರದ ಡೈಲಾಗ್​ ಹೇಳಿದ ಅಲ್ಲು ಅರ್ಜುನ್​: 'ಬನ್ನಿ' ಸ್ವೀಟ್​ ಸರ್ಪ್ರೈಸ್​ಗೆ ಫ್ಯಾನ್ಸ್​ ಫುಲ್​ ಖುಷ್​ - ಈಟಿವಿ ಭಾರತ ಕನ್ನಡ

ಅಲ್ಲು ಅರ್ಜುನ್​ ತಮ್ಮ ಮುಂಬರುವ 'ಪುಷ್ಪ: ದಿ ರೂಲ್​​' ಚಿತ್ರದ ಐಕಾನಿಕ್​ ಡೈಲಾಗ್​ ಹೇಳುವ ಮೂಲಕ ಅಭಿಮಾನಿಗಳಿಗೆ ಸ್ವೀಟ್​ ಸರ್ಪ್ರೈಸ್​ ನೀಡಿದರು.

Allu Arjun leaks Pushpa 2 dialogue
ಅಲ್ಲು ಅರ್ಜುನ್​
author img

By

Published : Jul 21, 2023, 6:07 PM IST

ಹೈದರಾಬಾದ್​ನಲ್ಲಿ ಗುರುವಾರ 'ಬೇಬಿ' ಚಿತ್ರತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ಭಾಗವಹಿಸಿದ್ದರು. ಚಿತ್ರತಂಡಕ್ಕೆ ಹೊಗಳಿಕೆಯ ಸುರಿಮಳೆ ಹರಿಸಿದ ಅಲ್ಲು ತಮ್ಮ ಮುಂಬರುವ 'ಪುಷ್ಪ: ದಿ ರೂಲ್​​' ಚಿತ್ರದ ಐಕಾನಿಕ್​ ಡೈಲಾಗ್​ ಹೇಳುವ ಮೂಲಕ ಅಭಿಮಾನಿಗಳಿಗೆ ಸ್ವೀಟ್​ ಸರ್ಪ್ರೈಸ್​ ನೀಡಿದರು.

ಬಳಿಕ ಅನೇಕ ವಿಚಾರಗಳ ಕುರಿತು ವೇದಿಕೆಯಲ್ಲಿ ಮಾತನಾಡಿದರು. ಹಲವು ಸ್ವಾರಸ್ಯಕರ ಸಂಗತಿಗಳನ್ನು ಬಿಚ್ಚಿಟ್ಟರು. ತೆಲುಗು ಚಿತ್ರರಂಗ ಈಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ಟಾಲಿವುಡ್​ ಉತ್ತಮ ಮನರಂಜನೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಹೆಣ್ಣುಮಕ್ಕಳು ಇಂತಹ ಇಂಡಸ್ಟ್ರಿಗೆ ಬರಲು ಹೆದರಬೇಡಿ. ಧೈರ್ಯದಿಂದ ಮುಂದೆ ಬನ್ನಿ ಎಂದು ಹುರಿದುಂಬಿಸಿದರು.

ಅಲ್ಲು ಅರ್ಜುನ್​ ಹೇಳಿದ್ದು ಹೀಗೆ.. "ಪ್ರೀತಿಯ ನೋವನ್ನು ತೋರಿಸುವ ಚಿತ್ರಗಳು ಕಡಿಮೆ, ಅಂತಹ ಸಿನಿಮಾಗಳನ್ನು ಮಾಡುವುದು ತುಂಬಾ ಕಷ್ಟ. ಏಕೆಂದರೆ ಸಿನಿಮಾ ನೋಡಿ ಅಥವಾ ಇಂತಹ ಚಿತ್ರಕಥೆ ಪುಸ್ತಕಗಳನ್ನು ಓದಿ ಕಥೆ ಬರೆಯುವುದು ಸುಲಭವಲ್ಲ. ಬದುಕಲ್ಲಿ ನೀವು ಅನುಭವಿಸಿದ್ದರೆ, ಅಥವಾ ನೋಡಿದ್ದರೆ ಅಂತಹ ಚಿತ್ರಗಳನ್ನು ಬರೆಯಬಹುದು. ಇಂತಹ 'ಬೇಬಿ' ಯನ್ನು ಕರೆತಂದ ನಿರ್ದೇಶಕ ಸಾಯಿ ರಾಜೇಶ್ ಅವರಿಗೆ ಅಭಿನಂದನೆಗಳು"

"ಅಮೀರಪೇಟೆಯಲ್ಲಿ ಆಟೋ ಹುಡುಗರಿಗೆ ಹೇಗನಿಸುತ್ತದೆಯೋ.. ಸಿನಿಮಾ ನೋಡಿದ ಮೇಲೆ ನನಗೂ ಹಾಗೆಯೇ ಅನಿಸಿತು. ಆನಂದ್ ಇಲ್ಲದಿದ್ದರೆ ಈ ಚಿತ್ರ ಈ ರೀತಿ ಮೂಡಿಬರುತ್ತಿರಲಿಲ್ಲ. ವಿರಾಜ್ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ತೆಲುಗು ಹೀರೋಯಿನ್​ಗಳು ತೆಲುಗಿನಲ್ಲಿ ಅಷ್ಟಾಗಿ ಕಾಣಿಸುವುದಿಲ್ಲವೇ ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿತ್ತು. ಆದರೆ ಬೇಬಿ ಸಿನಿಮಾ ಅದನ್ನು ಸುಳ್ಳು ಮಾಡಿದೆ. ವೈಷ್ಣವಿ ಅವರು ಈ ಸಿನಿಮಾದಲ್ಲಿ ಎಲ್ಲರನ್ನೂ ಗಮನ ಸೆಳೆದಿದ್ದಾರೆ"

ಇದನ್ನೂ ಓದಿ: ಭಾರತದ ಗಲ್ಲಾಪೆಟ್ಟಿಯಲ್ಲಿ ಸದ್ದು ಮಾಡಲು ಸಿದ್ದವಾದ 'ಬಾರ್ಬಿ', 'ಒಪೆನ್‌ಹೈಮರ್': ಈ ಎರಡೂ ಚಿತ್ರಗಳು ಒಂದೇ ದಿನ ತೆರೆಗೆ...

"ಈ ಚಿತ್ರದ ಮೂಲಕ ನಿರ್ದೇಶಕ ಸಾಯಿ ರಾಜೇಶ್ ಸಿಗಲಿ ಎಂದು ಹಾರೈಸುತ್ತೇನೆ. ವಿಜಯ್ ಅವರ ಸಂಗೀತವು ಚಿತ್ರವನ್ನು ಅದ್ಭುತವಾಗಿ ಮಾಡಿದೆ. ಬಾಲ್ ರೆಡ್ಡಿ ಅವರ ಸಿನಿಮಾಟೋಗ್ರಫಿ ತುಂಬಾ ಸಹಜವಾಗಿದೆ. ಹೀರೋ ಆಗಬೇಕಾದರೆ ಕುಣಿದು ಕುಪ್ಪಳಿಸಲೇಬೇಕು ಎಂಬ ನಿಯಮವಿಲ್ಲ. ಪ್ರತಿಯೊಬ್ಬರಲ್ಲೂ ಮ್ಯಾಜಿಕ್ ಇರುತ್ತದೆ. ಅದನ್ನು ತೋರಿಸಲು ಪ್ರಯತ್ನಿಸಿ'' ಎಂದು ಅಲ್ಲು ಅರ್ಜುನ್​ ಹೇಳಿದರು.

ಅದರ ನಂತರ ಅವರು ತಮ್ಮ ಪುಷ್ಪ 2 ಸಿನಿಮಾದ ಬಗ್ಗೆ ಮಾತನಾಡಿದರು. ಅಭಿಮಾನಿಗಳಿಗಾಗಿ ಸಿನಿಮಾದ ಡೈಲಾಗ್​ ಅನ್ನು ಕೂಡ ಹೇಳಿದರು. 'ಒಂದೇ ನಿಯಮವಿದೆ ಮತ್ತು ಅದು ಪುಷ್ಪಾ ಅವರ ನಿಯಮ' ಎಂಬರ್ಥ ಬರುವ ಮಾಸ್​ ಡೈಲಾಗ್​ ಅನ್ನು ತೆಲುಗು ಭಾಷೆಯಲ್ಲೇ ಹೇಳಿದರು. ಸದ್ಯ ಇದು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ಆಗಿದೆ. ಪುಷ್ಪ- 2 ಸಿನಿಮಾ ಮೇಲಿನ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತರಕ್ಕೇರಿದೆ.

ಇದನ್ನೂ ಓದಿ: ರ‍್ಯಾಂಪ್​ ವಾಕ್​ ವೇಳೆ ಪತ್ನಿ ದೀಪಿಕಾ ಪಡುಕೋಣೆ ಕೆನ್ನೆಗೆ ಮುತ್ತಿಟ್ಟ ರಣ್​ವೀರ್​ ಸಿಂಗ್ - ವಿಡಿಯೋ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.