ಭಾರತದ ಬಹುಬೇಡಿಕೆಯ ನಟಿ ಆಲಿಯಾ ಭಟ್ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಗುಸ್ಸಿಯ ರಾಯಭಾರಿ ಆಗಿದ್ದಾರೆ. ಈ ವೇಳೆ, ಅವರು ಕೆಲವು ಖ್ಯಾತ ಹಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಂಡರು. ಇತ್ತೀಚೆಗೆ ಜಾಗತಿಕವಾಗಿ ಬ್ರ್ಯಾಂಡ್‌ನ ಮುಖವೆಂದು ಘೋಷಿಸಲ್ಪಟ್ಟಿರುವ ಆಲಿಯಾ, ಗುಸ್ಸಿ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸೆಲೆಬ್ರಿಟಿಗಳು ಹೊಸ ಅಭಿಯಾನದ ಭಾಗವಾಗಿ ಲಿಂಗ ಸಮಾನತೆಯನ್ನು ಉತ್ತೇಜಿಸಿದರು.
-
Excited to be chiming in for Gucci Chime’s 10th Anniversary Campaign!#GucciChimeForGenderEquality #ChimeIn@gucci pic.twitter.com/ssvKrnVJaX
— Alia Bhatt (@aliaa08) May 31, 2023 " class="align-text-top noRightClick twitterSection" data="
">Excited to be chiming in for Gucci Chime’s 10th Anniversary Campaign!#GucciChimeForGenderEquality #ChimeIn@gucci pic.twitter.com/ssvKrnVJaX
— Alia Bhatt (@aliaa08) May 31, 2023Excited to be chiming in for Gucci Chime’s 10th Anniversary Campaign!#GucciChimeForGenderEquality #ChimeIn@gucci pic.twitter.com/ssvKrnVJaX
— Alia Bhatt (@aliaa08) May 31, 2023
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿರುವ ಆಲಿಯಾ, "ಗುಸ್ಸಿ ಚೈಮ್ನ 10ನೇ ವಾರ್ಷಿಕೋತ್ಸವದ ಪ್ರಚಾರಕ್ಕಾಗಿ ಉತ್ಸುಕನಾಗಿದ್ದೇನೆ." ಎಂದು ಕ್ಯಾಪ್ಶನ್ ಬರೆದಿದ್ದಾರೆ. ಜೂಲಿಯಾ ಗಾರ್ನರ್ ತನ್ನನ್ನು ತಾನು ಪರಿಚಯಿಸಿಕೊಳ್ಳುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ನಂತರದಲ್ಲಿ ಹಾಲೆ ಬೈಲಿ, ಜಾನ್ ಲೆಜೆಂಡ್ ಮತ್ತು ಸಲ್ಮಾ ಹಯೆಕ್ ಪಿನಾಲ್ಟ್, "ನಾನು ಲಿಂಗ ಸಮಾನತೆಗಾಗಿ ಧ್ವನಿ ಎತ್ತುತ್ತೇನೆ" ಎಂದು ಹೇಳುತ್ತಾರೆ.
ಬಳಿಕ ಡೈಸಿ ಎಡ್ಗರ್ ಜೋನ್ಸ್, ಆಲಿಯಾ ಭಟ್, ಸೆರೆನಾ ವಿಲಿಯಮ್ಸ್, ಜೂಲಿಯಾ ರಾಬರ್ಟ್ಸ್ ಮತ್ತು ಇದ್ರಿಸ್ ಎಲ್ಬಾ ಅವರು 'ಶಿಕ್ಷಣ, ಶಕ್ತಿ ಮತ್ತು ಘನತೆ'ಗಾಗಿ ತಮ್ಮ ಬೆಂಬಲವನ್ನು ಘೋಷಿಸಿದರು. ಕೊನೆಯಲ್ಲಿ, ಇದ್ರಿಸ್ ಅವರು "ನಾವೆಲ್ಲರೂ ಒಂದೇ" ಎಂದು ಹೇಳುತ್ತಾರೆ. ಅಲ್ಲಿಗೆ 24 ಸೆಕೆಂಡ್ಗಳ ವಿಡಿಯೋ ಕೊನೆಗೊಳ್ಳುತ್ತದೆ.
ಇತ್ತೀಚೆಗೆ ಬಾಲಿವುಡ್ ನಟಿ - ನಿರ್ಮಾಪಕಿ ಆಗಿರುವ ಆಲಿಯಾ ಭಟ್ ಪ್ರತಿಷ್ಟಿತ ಬ್ರಾಂಡ್ ಗುಸ್ಸಿ ಕ್ರೂಸ್ ಶೋಗಾಗಿ ದಕ್ಷಿಣ ಕೊರಿಯಾದ ಸಿಯೋಲ್‌ಗೆ ಪ್ರಯಾಣಿಸಿದ್ದರು. ಗಂಗೂಬಾಯಿ ಕಥಿಯಾವಾಡಿ ನಟಿ ಪೋಲ್ಕ-ಡಾಟ್ ಕಟೌಟ್‌ಗಳೊಂದಿಗೆ ಮಿನಿ ಕಪ್ಪು ಉಡುಗೆಯನ್ನು ಧರಿಸಿದ್ದರು. ಜೊತೆಗೆ ಗುಸ್ಸಿ ಬ್ಯಾಂಬೋ 1947 ಬ್ಯಾಗ್ ಮತ್ತು ಕಪ್ಪು ಶೂ ಜೊತೆ ತಮ್ಮ ಲುಕ್ಗೆ ಸಂಪೂರ್ಣತೆ ತಂದುಕೊಂಡಿದ್ದರು.
ಇದನ್ನೂ ಓದಿ: IIFA Awards 2023: ಆಲಿಯಾ ಭಟ್, ಹೃತಿಕ್ ರೋಷನ್ ಅತ್ಯುತ್ತಮ!
ಕಳೆದ ತಿಂಗಳು ಐಷಾರಾಮಿ ಫ್ಯಾಷನ್ ಬ್ರಾಂಡ್ ಗುಸ್ಸಿಯ ಮೊದಲ ಭಾರತೀಯ ಜಾಗತಿಕ ರಾಯಭಾರಿಯಾಗಿ ಆಲಿಯಾ ಅವರನ್ನು ಘೋಷಿಸಲಾಯಿತು. ಈ ಸಂತಸದ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲು ಅವರು ಇನ್ಸ್ಟಾಗ್ರಾಮ್ ವೇದಿಕೆಯನ್ನು ಬಳಸಿಕೊಂಡಿದ್ದರು. ಚಿತ್ರಗಳನ್ನು ಹಂಚಿಕೊಂಡ ಅವರು, "ನಾನು ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಗುಸ್ಸಿಯನ್ನು ಪ್ರತಿನಿಧಿಸುವ ಗೌರವವನ್ನು ಹೊಂದಿದ್ದೇನೆ. ಗುಸ್ಸಿಯ ಪರಂಪರೆಯು ಯಾವಾಗಲೂ ನನಗೆ ಸ್ಫೂರ್ತಿ ಮತ್ತು ಆಸಕ್ತಿಯನ್ನುಂಟು ಮಾಡಿದೆ. ನಾವು ಒಟ್ಟಿಗೆ ರಚಿಸಲಿರುವ ಅನೇಕ ಮೈಲಿಗಲ್ಲುಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ @ಗುಸ್ಸಿ" ಎಂದು ಬರೆದುಕೊಂಡಿದ್ದರು.
ಆಲಿಯಾ ಭಟ್ ಮುಂದೆ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ರಣ್ವೀರ್ ಸಿಂಗ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಜುಲೈ 28ರಂದು ಥಿಯೇಟರ್‌ಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ. ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಜೋನಾಸ್ ಜೊತೆಗೆ ಫರ್ಹಾನ್ ಅಖ್ತರ್ ಅವರ ಜೀ ಲೇ ಜರಾದಲ್ಲಿ ಜಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಆಲಿಯಾ ಭಟ್ ಅಜ್ಜ ನರೇಂದ್ರನಾಥ್ ರಜ್ದಾನ್ ನಿಧನ: ಮೊಮ್ಮಗಳಿಂದ ಭಾವನಾತ್ಮಕ ಪೋಸ್ಟ್