ಮೇರಿಲ್ಯಾಂಡ್(ಅಮೆರಿಕ) : ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ಕಾಶ್ಮೀರಿ ಪೈಲ್ಸ್ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಇದೀಗ, ಮಾರಕ ಕೊರೊನಾ ಸೋಂಕಿಗೆ ಮದ್ದು ಅರೆದ ಭಾರತದ ವಿಜ್ಞಾನಿಗಳ ಸಾಧನೆಯನ್ನು ಅನಾವರಣ ಮಾಡುವ 'ದಿ ವ್ಯಾಕ್ಸಿನ್ ವಾರ್' ಚಲನಚಿತ್ರ ತಯಾರಿಸಿದ್ದಾರೆ. ಇದರ ಮೊದಲ ವಿಶೇಷ ಪ್ರದರ್ಶನ ಅಮೆರಿಕದಲ್ಲಿ ಸೋಮವಾರ ನಡೆಸಲಾಗಿದೆ.
-
Get ready for the next stroke⚡️⚡️#TheVaccineWar 💉
— String (@StringReveals) August 28, 2023 " class="align-text-top noRightClick twitterSection" data="
Releasing on 28th September📽️
Must watch for women🙏
Priceless efforts by the legends @vivekagnihotri and @AbhishekOfficl 🫡 pic.twitter.com/PhM8XE0hwi
">Get ready for the next stroke⚡️⚡️#TheVaccineWar 💉
— String (@StringReveals) August 28, 2023
Releasing on 28th September📽️
Must watch for women🙏
Priceless efforts by the legends @vivekagnihotri and @AbhishekOfficl 🫡 pic.twitter.com/PhM8XE0hwiGet ready for the next stroke⚡️⚡️#TheVaccineWar 💉
— String (@StringReveals) August 28, 2023
Releasing on 28th September📽️
Must watch for women🙏
Priceless efforts by the legends @vivekagnihotri and @AbhishekOfficl 🫡 pic.twitter.com/PhM8XE0hwi
ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಸಿನಿಮಾ ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು, ಅದಕ್ಕೂ ಮೊದಲು ಅಮೆರಿಕದಲ್ಲಿ 'ಇಂಡಿಯಾ ಫಾರ್ ಹ್ಯುಮಾನಿಟಿ ಟೂರ್' ಟ್ಯಾಗ್ಲೈನ್ ಅಡಿ ಚಿತ್ರದ ವಿಶೇಷ ಪ್ರದರ್ಶನ ನಡೆಸಲಾಗಿದೆ.
ವಿಜ್ಞಾನಿಗಳು, ವೈದ್ಯರಿಗೆ ಸಿನಿಮಾ ಅರ್ಪಣೆ: ಇದೇ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು, ತಮ್ಮ ಮುಂಬರುವ ಚಿತ್ರ 'ದಿ ವ್ಯಾಕ್ಸಿನ್ ವಾರ್' ಅನ್ನು ಕೊರೊನಾಗೆ ಯಶಸ್ವಿಯಾಗಿ ಲಸಿಕೆಯನ್ನು ಕಂಡುಹಿಡಿದ ಭಾರತೀಯ ವಿಜ್ಞಾನಿಗಳು ಮತ್ತು ವೈದ್ಯರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.
ಭಾರತದ ಈ ಮಹಾನ್ ವೈಜ್ಞಾನಿಕ ಸಾಧನೆಯನ್ನು ವಿಶ್ವ ವೇದಿಕೆಯಲ್ಲಿ ಪ್ರದರ್ಶಿಸಲು ನಾನು ಬಯಸುವೆ. ಕೊರೊನಾ ಲಸಿಕೆ ಕಂಡು ಹಿಡಿಯುವ ವೇಳೆ ಭಾರತ ಮತ್ತು ಅಮೆರಿಕ ದೇಶಗಳ ಸಹಯೋಗ, ಸಹಕಾರ ಮತ್ತು ಪರಸ್ಪರ ತಿಳಿವಳಿಕೆ ಇತ್ತು. ಕೋವಿಡ್ ಅತ್ಯಧಿಕವಾಗಿದ್ದ ವೇಳೆ ಅಮೆರಿಕದಲ್ಲಿ ಹೆಚ್ಚಿನ ಸಾವುನೋವುಗಳು ದಾಖಲಾದವು. ಜಗತ್ತೇ ಇತ್ತ ಕಡೆ ಗಮನಿಸುತ್ತಿತ್ತು. ಹೀಗಾಗಿ ಸಿನಿಮಾವನ್ನು ಇಲ್ಲಿಂದಲೇ ಆರಂಭಿಸುವುದು ಒಳ್ಳೆಯದು ಎಂದು ಭಾವಿಸಿದ್ದಾಗಿ ಹೇಳಿದರು.
-
#TheVaccineWar A True Story is truly a people’s film.
— Vivek Ranjan Agnihotri (@vivekagnihotri) August 28, 2023 " class="align-text-top noRightClick twitterSection" data="
Watch audience reactions from Chicago, USA. #IndiaForHumanity pic.twitter.com/tcEpp19NAe
">#TheVaccineWar A True Story is truly a people’s film.
— Vivek Ranjan Agnihotri (@vivekagnihotri) August 28, 2023
Watch audience reactions from Chicago, USA. #IndiaForHumanity pic.twitter.com/tcEpp19NAe#TheVaccineWar A True Story is truly a people’s film.
— Vivek Ranjan Agnihotri (@vivekagnihotri) August 28, 2023
Watch audience reactions from Chicago, USA. #IndiaForHumanity pic.twitter.com/tcEpp19NAe
ಸಿನಿಮಾವನ್ನು ಇಲ್ಲಿನ ಜನರಿಗೆ ತೋರಿಸಿ, ಅವರ ಪ್ರತಿಕ್ರಿಯೆಗಳನ್ನು ಪಡೆದುಕೊಂಡ ನಂತರ ಭಾರತದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದೇನೆ. ಚಿತ್ರ ಕೊರೊನಾ ಸೋಂಕಿನ ಹೊಡೆತ ಮತ್ತು ಅದಕ್ಕೆ ಭಾರತ ಸೇರಿದಂತೆ ಯಾವೆಲ್ಲ ದೇಶಗಳು ಮದ್ದು ಕಂಡುಹಿಡಿದಿದ್ದರ ಬಗ್ಗೆ ಪ್ರಸ್ತುಪಡಿಸಲಿದೆ. ಅದರಲ್ಲೂ ನಮ್ಮ ದೇಶ ಲಸಿಕೆಯನ್ನು ಇತರ ಸಾಕಷ್ಟು ದೇಶಗಳಿಗೆ ನೀಡಿದ ಬಗ್ಗೆಯೂ ತೋರಿಸಲಾಗಿದೆ ಎಂದು ಅವರು ತಿಳಿಸಿದರು.
ಶುದ್ಧ ವಿಜ್ಞಾನದ ಚಿತ್ರ: ಮಾರಕ ಕೊರೊನಾಕ್ಕೆ ಲಸಿಕೆ ತಯಾರಿಸಲು ನಮ್ಮ ವಿಜ್ಞಾನಿಗಳು ಹೇಗೆ ಲ್ಯಾಬ್‌ಗಳಲ್ಲೇ ಕಳೆದರು. ತ್ಯಾಗ ಬಲಿದಾನ ನಡೆಸಿದರು ಎಂಬುದೇ ಈ ಚಲನಚಿತ್ರವಾಗಿದೆ. ಯುವ ಪೀಳಿಗೆಯು ಈ 'ಶುದ್ಧ ವಿಜ್ಞಾನದ ವಿಜಯ'ದ ಸಿನಿಮಾವನ್ನು ನೋಡಬೇಕು ಎಂದು ನಾನು ಬಯಸುವೆ. ಕೋವಿಡ್ ನಿರ್ವಹಣೆ ಮತ್ತು ಫ್ರಂಟ್ ಲೈನ್ ವಾರಿಯರ್ಸ್, ಲಸಿಕೆಗಳ ಮೇಲೆ ಹೆಚ್ಚು ಗಮನಹರಿಸಿದ್ದೇವೆ ಎಂದು ಅವರು ಮಾಹಿತಿ ಹಂಚಿಕೊಂಡರು.
ಸಿನಿಮಾ ಟೀಸರ್ ಬಿಡುಗಡೆ: ಭಾರತದ 145 ಕೋಟಿ ಜನರಿಗೆ ಉಚಿತ ಲಸಿಕೆ ನೀಡುವುದರ ಜೊತೆಗೆ ವಿದೇಶಗಳಿಗೂ ಸರಬರಾಜು ಮಾಡಿದ ನಮ್ಮ ವಿಜ್ಞಾನಿಗಳ ಸಾಹಸವನ್ನು ದಿ ವ್ಯಾಕ್ಸಿನ್ ವಾರ್ನಲ್ಲಿ ತೋರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಚಿತ್ರದ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ನಾನಾ ಪಾಟೇಕರ್, ಅನುಪಮ್ ಖೇರ್ ಮತ್ತು ಪಲ್ಲವಿ ಜೋಶಿ ಸೇರಿದಂತೆ ಮುಂತಾದ ನಟರು ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ರಫೇಲ್ ಖರೀದಿ ವಿಚಾರ... ಭಾರತಕ್ಕೆ ಭೇಟಿ ನೀಡಿ ಚರ್ಚಿಸಿದ ಫ್ರೆಂಚ್ ನಿಯೋಗ : ಮೂಲಗಳು