ETV Bharat / entertainment

ಆಸ್ಕರ್​ ಲೈಬ್ರೆರಿ ಸೇರಲಿದೆ 'ದಿ ವ್ಯಾಕ್ಸಿನ್​ ವಾರ್' ಸಿನಿಮಾ​; ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಸಂತಸ - ಈಟಿವಿ ಭಾರತ ಕನ್ನಡ

ನಿರ್ದೇಶಕ ವಿವೇಕ್​​ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್​ ವಾರ್​' ಸಿನಿಮಾದ ಸ್ಕ್ರಿಪ್ಟ್​ ಶೀಘ್ರದಲ್ಲೇ ಆಸ್ಕರ್​ ಲೈಬ್ರೆರಿಯ ಸಂಗ್ರಹ ಸೇರಲಿದೆ.

Vivek Agnihotri expresses happiness as Oscars library accepts The Vaccine War script for Academy collections
ವಿವೇಕ್ ಅಗ್ನಿಹೋತ್ರಿ
author img

By ETV Bharat Karnataka Team

Published : Oct 12, 2023, 3:35 PM IST

'ದಿ ಕಾಶ್ಮೀರಿ ಫೈಲ್ಸ್'​ ಸಿನಿಮಾ ಖ್ಯಾತಿಯ ನಿರ್ದೇಶಕ ವಿವೇಕ್​ ರಂಜನ್​ ಅಗ್ನಿಹೋತ್ರಿ ಅವರ 'ದಿ ವ್ಯಾಕ್ಸಿನ್​ ವಾರ್​' ಸಿನಿಮಾ ಸೆಪ್ಟೆಂಬರ್​ 28ರಂದು ತೆರೆ ಕಂಡಿದೆ. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣದಿದ್ದರೂ, ಪ್ರೇಕ್ಷಕರಿಂದ ಪಾಸಿಟಿವ್​ ರೆಸ್ಪಾನ್ಸ್ ಸಿಕ್ಕಿದೆ. ಶೀಘ್ರದಲ್ಲೇ 'ದಿ ವ್ಯಾಕ್ಸಿನ್​ ವಾರ್​' ಸ್ಕ್ರಿಪ್ಟ್​ ಆಸ್ಕರ್​ ಲೈಬ್ರೆರಿಯ ಸಂಗ್ರಹದಲ್ಲಿ ಸೇರಲಿದೆ. ಅಕಾಡೆಮಿಯಿಂದ ಸ್ವೀಕರಿಸಿದ ಮೇಲ್​ನ ಸ್ಕ್ರೀನ್​ಶಾಟ್​ ಅನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಗ್ನಿಹೋತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.

"ನಿಜ ಕಥೆಯಾಧಾರಿತ 'ದಿ ವ್ಯಾಕ್ಸಿನ್​ ವಾರ್​' ಚಿತ್ರದ ಸ್ಕ್ರಿಪ್ಟ್​ ಅನ್ನು ಆಸ್ಕರ್​ ಲೈಬ್ರೆರಿಯು ತನ್ನ ಅಕಾಡೆಮಿಯ ಸಂಗ್ರಹದಲ್ಲಿ ಸೇರಿಸಲು ಆಹ್ವಾನಿಸಿದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ನೂರಾರು ವರ್ಷಗಳ ನಂತರವೂ ಜನರು ಭಾರತೀಯ ಸೂಪರ್​ ಹೀರೋಗಳ ಈ ಮಹಾನ್​ ಕಥೆಯನ್ನು ಓದುತ್ತಾರೆ ಎನ್ನುವುದೇ ಸಂತಸದ ವಿಚಾರ" ಎಂದು ವಿವೇಕ್​ ಅಗ್ನಿಹೋತ್ರಿ ಬರೆದುಕೊಂಡಿದ್ದಾರೆ.

ಪ್ರಧಾನಿಯಿಂದ ಪ್ರಶಂಸೆ: 'ದಿ ವ್ಯಾಕ್ಸಿನ್​ ವಾರ್​' ಚಿತ್ರದ ಮೂಲಕ ಭಾರತೀಯ ವಿಜ್ಞಾನಿಗಳ ಅಸಾಧಾರಣ ಸಾಧನೆ ಗುರುತಿಸಿದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಅಭಿನಂದಿಸಿದ್ದರು. "ದಿ ವ್ಯಾಕ್ಸಿನ್​ ವಾರ್​ ಎಂಬ ಚಿತ್ರ ಬಂದಿದೆ ಎಂದು ನಾನು ಕೇಳಿದ್ದೇನೆ. ನಮ್ಮ ದೇಶದ ವಿಜ್ಞಾನಿಗಳು ಕೋವಿಡ್​ ವಿರುದ್ಧ ಹೋರಾಡಲು ಹಗಲಿರುಳು ಶ್ರಮಿಸಿದರು. ಅವರು ಪ್ರಯೋಗಾಲಯದಲ್ಲಿ ಋಷಿಯಂತೆ ಧ್ಯಾನ ಮಾಡಿದರು. ಈ ಎಲ್ಲಾ ವಿಷಯಗಳನ್ನು ಆ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಸಿನಿಮಾವನ್ನು ನಿರ್ಮಿಸುವ ಮೂಲಕ ವಿಜ್ಞಾನಿಗಳು ಮತ್ತು ವಿಜ್ಞಾನಕ್ಕೆ ಪ್ರಾಮುಖ್ಯತೆ ನೀಡಿದ ಈ ಚಿತ್ರದ ನಿರ್ದೇಶಕರನ್ನು ಅಭಿನಂದಿಸುತ್ತೇನೆ" ಎಂದು ಹೇಳಿದ್ದರು.

ಇದನ್ನೂ ಓದಿ: 'ದಿ ವ್ಯಾಕ್ಸಿನ್​​ ವಾರ್' ರಿಲೀಸ್​​: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾದಲ್ಲಿ ಸಪ್ತಮಿ ಗೌಡ

ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಪ್ರಧಾನಿಗೆ ಅಗ್ನಿಹೋತ್ರಿ ಧನ್ಯವಾದ ತಿಳಿಸಿದ್ದರು. ಎಕ್ಸ್​ನಲ್ಲಿ ಪ್ರಧಾನಿ ಪ್ರಶಂಸೆಯ ವಿಡಿಯೋವನ್ನು ಹಂಚಿಕೊಂಡಿದ್ದ ಅವರು, "ಪ್ರಧಾನಿ ಮೋದಿಯವರಿಂದ ಇಂತಹ ಮಾತು ಕೇಳಲು ಸಂತೋಷವಾಗಿದೆ. ಅವರ ನಾಯಕತ್ವದಲ್ಲಿ ಲಸಿಕೆಯನ್ನು ತಯಾರಿಸುವಲ್ಲಿ ಭಾರತೀಯ ವಿಜ್ಞಾನಿಗಳು, ಪ್ರಮುಖವಾಗಿ ಮಹಿಳಾ ವಿಜ್ಞಾನಿಗಳ ಕೊಡುಗೆಯನ್ನು ನಾನು ಗುರುತಿಸಿದ್ದೇನೆ. ತಮ್ಮ ಶ್ರಮವನ್ನು ಪ್ರಧಾನಿ ಮೋದಿಯವರು ಕೊಂಡಾಡಿದ್ದಕ್ಕಾಗಿ ಮಹಿಳಾ ವಿಜ್ಞಾನಿಗಳು ನನಗೆ ಕರೆ ಮಾಡಿ ಭಾವುಕರಾದರು" ಎಂದು ಹೇಳಿದ್ದರು.

'ದಿ ವ್ಯಾಕ್ಸಿನ್​ ವಾರ್'​ ಸಿನಿಮಾ ಕಥೆಯು, ಕೋವಿಡ್​ 19 ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಸಿಕೆಯ ಅಭಿವೃದ್ಧಿಯಲ್ಲಿ ವಿಜ್ಞಾನಿಗಳು ಎದುರಿಸಿದ ಸವಾಲುಗಳ ಮೇಲೆ ಕೇಂದ್ರೀಕೃತವಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸಿದ ಎಲ್ಲರಿಗೂ ಗೌರವ ಸಲ್ಲಿಸುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ.

ಚಿತ್ರದಲ್ಲಿ ನಾನಾ ಪಾಟೇಕರ್, ಪಲ್ಲವಿ ಜೋಶಿ, ರೈಮಾ ಸೇನ್, ಅನುಪಮ್ ಖೇರ್, ಗಿರಿಜಾ ಓಕ್, ನಿವೇದಿತಾ ಭಟ್ಟಾಚಾರ್ಯ, ಸಪ್ತಮಿ ಗೌಡ, ಮೋಹನ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಗೌರವ ಸಲ್ಲಿಸುವ ಸಲುವಾಗಿ ಈ ಸಿನಿಮಾ ನಿರ್ಮಾಣಗೊಂಡಿದೆ.

ಇದನ್ನೂ ಓದಿ: ₹10 ಕೋಟಿ ಬಜೆಟ್​ನ 'ದಿ ವ್ಯಾಕ್ಸಿನ್​ ವಾರ್'​ ಮೊದಲ ದಿನ ಗಳಿಸಿದ್ದು ₹1 ಕೋಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.