ETV Bharat / entertainment

ಶ್ರೇಯಸ್ ಮಂಜು ಅಭಿನಯದ 'ವಿಷ್ಣು ಪ್ರಿಯ' ಸಿನಿಮಾ ಟೀಸರ್ ಬಿಡುಗಡೆ - Vishnu Priya latest news

ನಟ ಶ್ರೇಯಸ್ ಮಂಜು ಅಭಿನಯದ ಮೂರನೇ ಸಿನಿಮಾ 'ವಿಷ್ಣು ಪ್ರಿಯ'ದ ಟೀಸರ್ ಅನಾವರಣಗೊಂಡಿದೆ.

Vishnu Priya Teaser
ವಿಷ್ಣು ಪ್ರಿಯ ಟೀಸರ್
author img

By

Published : Apr 6, 2023, 6:04 PM IST

ಶ್ರೇಯಸ್ ಮಂಜು ಕನ್ನಡ ಚಿತ್ರರಂಗದ ಭರವಸೆಯ ನಟ. ಪಡ್ಡೆಹುಲಿ, ರಾಣಾ ಚಿತ್ರಗಳ ಮೂಲಕ ಅಭಿನಯ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ನಿನ್ನೆ ಇವರು ಅಭಿಮಾನಿಗಳೊಂದಿಗೆ 29ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ 'ವಿಷ್ಣು ಪ್ರಿಯ' ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟಿತು.

ಕಥೆ ಏನು?: 'ವಿಷ್ಣು ಪ್ರಿಯ' ಶ್ರೇಯಸ್ ಮಂಜು ಅಭಿನಯದ ಮೂರನೇ ಸಿನಿಮಾ. ಮೊದಲೆರಡು ಸಿನಿಮಾದಲ್ಲಿ ಸಾಹಸಕಲೆ ಪ್ರದರ್ಶಿಸಿದ್ದರು. ಹೊಸ ಚಿತ್ರದಲ್ಲಿ ಪ್ರೇಮಿ, ತ್ಯಾಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ವಿಷ್ಣು ಪ್ರಿಯ ಇವರ ಪಾಲಿಗಿದು ವಿಶೇಷವಾದ ಸಿನಿಮಾ. ಟೀಸರ್​ ರಿಲೀಸ್​, ಬರ್ತ್‌ಡೇ ಸೆಲೆಬ್ರೇಶನ್ ಸಮಯದಲ್ಲಿ ಶುಭ ಕೋರಲು ಬಂದ ಅಭಿಮಾನಿಗಳಿಗೆ ನಟ ಧನ್ಯವಾದ ಅರ್ಪಿಸಿದರು. ಅಭಿಮಾನಕ್ಕೆ ಸದಾ ಋಣಿ ಎಂದರು.

  • " class="align-text-top noRightClick twitterSection" data="">

'ವಿಷ್ಣು ಪ್ರಿಯ' ಚಿತ್ರಕ್ಕೆ ಶ್ರೇಯಸ್ ತಂದೆ ಕೆ.ಮಂಜು ಬಂಡವಾಳ ಹೂಡಿದ್ದಾರೆ. ಪುತ್ರನ ಮೊದಲೆರಡು ಚಿತ್ರಗಳಿಗೂ ಇವರ ಬೆಂಬಲವಿತ್ತು. ಮುಂದಿನ ಸಿನಿಮಾ ಕೇವಲ ಯುವಜನತೆಯಷ್ಟೇ ಅಲ್ಲ, ಪೋಷಕರ ಹೃದಯಕ್ಕೂ ಹತ್ತಿರವಾಗಲಿದೆ ಅನ್ನೋ ನಂಬಿಕೆ ಇವರದ್ದು.

ಮಲಯಾಳಂ ಚಿತ್ರ ನಿರ್ದೇಶಿಸಿರುವ ವಿ.ಕೆ.ಪ್ರಕಾಶ್ ಚಿತ್ರ ನಿರ್ದೇಶಿಸಿದ್ದಾರೆ. ಕಣ್ಸನ್ನೆ ಖ್ಯಾತಿಯ ಪ್ರಿಯಾ ವಾರಿಯರ್ ನಾಯಕಿಯಾಗಿದ್ದು ಪಾತ್ರಕ್ಕೆ ಜೀವ ತುಂಬಿದ್ದಾರೆ. ಗೋಪಿಸುಂದರ್ ಸಂಗೀತ ಸಂಯೋಜನೆ, ವಿನೋದ್ ಭಾರತಿ ಛಾಯಾಗ್ರಹಣ ಚಿತ್ರಕ್ಕಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರ ಮೇ/ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಒಂದು ವಾರದೊಳಗೆ 100 ಕೋಟಿ ಕ್ಲಬ್ ಸೇರಿದ 'ದಸರಾ': ಗೆಲುವಿನ ನಗೆ ಬೀರಿದ ಟಾಲಿವುಡ್​

SCAM 1770 ಪೋಸ್ಟರ್ ರಿಲೀಸ್: ನೀವು ನೋಡಲೇಬೇಕಾದ ಸಿನಿಮಾ ಎಂದ ನಿರ್ದೇಶಕ

2021ರ ಮಾರ್ಚ್​ ಕೊನೆಯಲ್ಲಿ ವಿಷ್ಣು ಪ್ರಿಯ ಅಧಿಕೃತ ಟ್ರೇಲರ್​ ಅನ್ನು ಪುನೀತ್ ರಾಜ್‍ಕುಮಾರ್ ಅನಾವಣಗೊಳಿಸಿದ್ದರು. ಟ್ರೇಲರ್​ ನೋಡಿದ್ದ ಅಪ್ಪು ಪ್ರಾಮಿಸಿಂಗ್ ಆಗಿದೆ ಎಂದು ಮೆಚ್ಚುಗೆ ಸೂಚಿಸಿದ್ದರಂತೆ. ಆದ್ರೆ ಸಿನಿಮಾ ಬಿಡುಗಡೆ ಹೊತ್ತಲ್ಲಿ ಅವರಿಲ್ಲ ಅನ್ನೋದು ಚಿತ್ರತಂಡ ಮತ್ತು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.