ಅಮೀರ್ ಖಾನ್ ನಟನೆಯ ಬಹುನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಸಿನಿಮಾ ದೇಶಾದ್ಯಂತ ರಿಲೀಸ್ ಆಗಿದೆ. ವ್ಯಾಪಕ ವಿರೋಧದ ಮಧ್ಯೆಯೂ ಚಿತ್ರಮಂದಿರಗಳಿಗೆ ಅಪ್ಪಳಿಸಿರುವ ಸಿನಿಮಾಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ. ಬಾಯ್ಕಾಟ್ ಅಭಿಯಾನದ ಮಧ್ಯೆ ಬಂದಿರುವ ಲಾಲ್ ಸಿಂಗ್ ಚಡ್ಡಾ ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣ್ತಿದ್ದು, ಅಮೀರ್ ಖಾನ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಸೆಹ್ವಾಗ್, ರೈನಾ ಖುಷ್: ಸಿನಿಮಾ ವೀಕ್ಷಿಸಿರುವ ಟೀಂ ಮಾಜಿ ಕ್ರಿಕೆಟ್ ಆಟಗಾರರಾದ ವಿರೇಂದ್ರ ಸೆಹ್ವಾಗ್ ಹಾಗೂ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಥಾಹಂದರವನ್ನು ಶ್ಲಾಘಿಸಿರುವ ಸೆಹ್ವಾಗ್, ಈ ಚಿತ್ರ ಭಾರತದ ಸಾಮಾನ್ಯ ಜನರ ಭಾವನೆಯನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುತ್ತದೆ. ಅಮೀರ್ ಖಾನ್ ನಟನೆ ಚಿತ್ರಕ್ಕೆ ಮೆರುಗು ನೀಡಿದೆ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸುರೇಶ್ ರೈನಾ ಪ್ರತಿಕ್ರಿಯಿಸಿ, ಚಿತ್ರತಂಡದ ಕಠಿಣ ಪರಿಶ್ರಮ, ಪ್ರಯತ್ನಗಳಿಗೆ ನಾನು ಅಚ್ಚರಿಗೊಂಡಿದ್ದೇನೆ. ಪ್ರೇಮಕಥೆ ಮತ್ತು ಸುಂದರ ಹಾಡುಗಳು ನನಗೆ ಇಷ್ಟವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ತಡವಾಗಿ ತೆರೆಗೆ ಅಪ್ಪಳಿಸಿದ ಲಾಲ್ ಸಿಂಗ್ ಚಡ್ಡಾ.. ನಿಟ್ಟುಸಿರು ಬಿಟ್ಟ ಅಮೀರ್ ಖಾನ್
ನೆಟಿಜನ್ಸ್ ಮೆಚ್ಚುಗೆ: ಹಣ ಕೊಟ್ಟು ಚಿತ್ರ ನೀಡಿದ್ದು ವೇಸ್ಟ್ ಆಗಲಿಲ್ಲ. ಐಎಂಬಿಡಿಯಲ್ಲಿ ಟಾಪ್ ರೇಟ್ ಸಿಕ್ಕಿದೆ. ಇದೊಂದು ಇಂಡಿಯಾದ ಕಾಮನ್ ಮ್ಯಾನ್ ಸಿನಿಮಾ ಎಂದು ಹೇಳಿದ್ದಾರೆ.
ಮೋನಾ ಸಿಂಗ್, ನಾಗ ಚೈತನ್ಯ, ಕರೀನಾ ಕಪೂರ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ. ಅಮೀರ್ ಖಾನ್ ಮೂರು ಪಾತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ. ಇದು 1994ರಲ್ಲಿ ತೆರೆಕಂಡ ಹಾಲಿವುಡ್ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿದೆ.