ETV Bharat / entertainment

'ವಿಕ್ರಾಂತ್ ರೋಣ' ಟ್ರೈಲರ್ ಬಿಡುಗಡೆ ದಿನಾಂಕ ರಿವೀಲ್ - kichcha sudeep Vikranth Rona movie updates

ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕ ರಿವೀಲ್​ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಮಾಹಿತಿ ಹೊರಬಿದ್ದಿದೆ.

vikranth-rona-trailer-release-date-revealed
'ವಿಕ್ರಾಂತ್ ರೋಣ' ಟ್ರೈಲರ್ ಬಿಡುಗಡೆ ದಿನಾಂಕ ರಿವೀಲ್
author img

By

Published : Jun 17, 2022, 7:01 PM IST

ಕಿಚ್ಚ ಸುದೀಪ್ ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರವು ಸದ್ಯ 'ರಾ ರಾ ರಕ್ಕಮ್ಮ' ಹಾಡಿನ ಮೂಲಕ ಸಾಕಷ್ಟು ಕ್ರೇಜ್​ ಹುಟ್ಟಿಸಿದೆ. ಸದ್ಯ ಕಿಚ್ಚ ಸಿನಿಮಾ ಟ್ರೈಲರ್ ಬಿಡುಗಡೆ ಅಪ್​ಡೇಟ್ಸ್​ ನೀಡಿದ್ದಾರೆ. ಸಣ್ಣ ವಿಡಿಯೋ ಮೂಲಕ ವಿಕ್ರಾಂತ್ ರೋಣ ಟ್ರೈಲರ್ ದಿನಾಂಕ ಅನಾವರಣಗೊಳಿಸಲಾಗಿದೆ.

ಇದೇ ಜೂನ್ 23ರಂದು ವಿಕ್ರಾಂತ್ ರೋಣನ ಅವತಾರ ಟ್ರೈಲರ್ ಮೂಲಕ ಅನಾವರಣವಾಗಲಿದೆ. 'ರಂಗಿತರಂಗ' ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಈ‌ ಚಿತ್ರ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣನಾಗಿ ಕಾಣಿಸಿಕೊಳ್ಳಲಿದ್ದು, ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಸೇರಿ ಅನೇಕರು ಚಿತ್ರದಲ್ಲಿದ್ದಾರೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ರಾ ರಾ ರಕ್ಕಮ್ಮ ಹಾಡಿಗೆ ಸೊಂಟ ಬಳುಕಿಸಿರೋದು ಸಿನಿಮಾ ಹೈಲೆಟ್ಸ್​​ನಲ್ಲೊಂದಾಗಿದೆ.

ಟೈಟಲ್​ನಿಂದಲೂ ಸೌತ್ ಇಂಡಸ್ಟ್ರಿಯಲ್ಲಿ ಸೌಂಡ್ ಮಾಡುತ್ತಿರುವ 'ವಿಕ್ರಾಂತ್ ರೋಣ'ದಲ್ಲಿ ಸುದೀಪ್ ಲುಕ್ ಹೇಗಿರುತ್ತೆ, ನಿರೂಪ್ ಭಂಡಾರಿ ಹಾಗೂ ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಪಾತ್ರಗಳೇನು ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ನಿರ್ಮಾಪಕ ಜಾಕ್ ಮಂಜು ಈ ಚಿತ್ರವನ್ನ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ 13ಕ್ಕೂ ಹೆಚ್ಚು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಅಷ್ಟೇ ಅಲ್ಲದೆ 3ಡಿ ವರ್ಷನ್​ನಲ್ಲಿ ಕೂಡ ವಿಕ್ರಾಂತ್ ರೋಣ ಮೂಡಿಬರಲಿದ್ದು, ಜುಲೈ 28ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದೆ.

ಇದನ್ನೂ ಓದಿ: ತೆರೆ ಮೇಲೆ ಬರಲಿದೆ ಕಾಫಿ ಕಿಂಗ್ ಸಿದ್ದಾರ್ಥ ಹೆಗ್ಡೆ ಬಯೋಪಿಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.