ETV Bharat / entertainment

'ವಿಕ್ರಾಂತ್ ರೋಣ' ಟೀಸರ್​ ರಿಲೀಸ್​: ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ - ವಿಕ್ರಾಂತ್ ರೋಣ ಬಿಡುಗಡೆ ದಿನಾಂಕ

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಅನ್ಯ ಭಾಷೆಯ ಚಿತ್ರಗಳಲ್ಲಿ ಮಿಂಚಿತ್ತಿರುವ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ವಿಕ್ರಾಂತ್​ ರೋಣ'ದ ಟೀಸರ್ ಯುಗಾದಿ ಹಬ್ಬವಾದ ಇಂದು ರಿಲೀಸ್​ ಆಗಿದೆ. ಚಿತ್ರ ಬಿಡುಗಡೆಯ ದಿನಾಂಕ ಕೂಡ ಅನೌನ್ಸ್​ ಮಾಡಲಾಗಿದೆ.

ಸಲ್ಮಾನ್ ಖಾನ್  ಟ್ವೀಟ್​
ಸಲ್ಮಾನ್ ಖಾನ್ ಟ್ವೀಟ್​
author img

By

Published : Apr 2, 2022, 11:15 AM IST

ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ವಿಕ್ರಾಂತ್​ ರೋಣ'. ಈ ಚಿತ್ರದಲ್ಲಿ ಕಿಚ್ಚ ಸ್ಟೈಲಿಷ್ ಲುಕ್ ಜೊತೆಗೆ ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ 'ವಿಕ್ರಾಂತ್ ರೋಣ'ದ ಅಫಿಶಿಯಲ್ ಟೀಸರ್ ಯುಗಾದಿ ಹಬ್ಬವಾದ ಇಂದು ಅನಾವರಣಗೊಂಡಿದ್ದು, ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ.

ಕೆಲ ದಿನಗಳ‌ ಹಿಂದೆ 'ದಿ ಡೆವಿಲ್ಸ್​ ಅರೈವಲ್'​ ಹೆಸರಿನಲ್ಲಿ ಚಿತ್ರತಂಡ ಟೀಸರ್ ಅನ್ನ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಅದರಂತೆ ಇಂದು 'ವಿಕ್ರಾಂತ್ ರೋಣ' ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಹಾಲಿವುಡ್ ಸಿನಿಮಾ ಶೈಲಿಯಲ್ಲಿ ಮೂಡಿ ಬಂದಿದೆ. ಈ ಟೀಸರ್​ಅನ್ನು ಹಿಂದಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದಾರೆ. ಅದೇ ರೀತಿ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ, ತಮಿಳಿನಲ್ಲಿ ಸಿಂಬು ಹಾಗು ಮಲಯಾಳಂ ನಲ್ಲಿ ಮೋಹನ್‌ ಲಾಲ್ ಟೀಸರ್ ಬಿಡುಗಡೆ ಮಾಡಿದ್ದಾರೆ.

  • " class="align-text-top noRightClick twitterSection" data="">

'ವಿಕ್ರಾಂತ್ ರೋಣ' ಚಿತ್ರದ ಟೀಸರ್ ನೋಡ್ತಾ ಇದ್ರೆ ಫ್ಯಾಂಟಸಿ ಜೊತೆಗೆ ನಿಗೂಢತೆಯನ್ನ ಭೇದಿಸುವ ಸಿನಿಮಾ ಇದಾಗಿದೆ. ನಾಲ್ಕೈದು ಜನ ಮಕ್ಕಳಿಂದ ಪಟ್ಟೆ ಪಟ್ಟೆ ಹುಲಿ, ಬಿಟ್ಟೆ ಬಿಟ್ಟೆ ಕುರಿ ಅಂತಾ ಡೈಲಾಗ್ ಶುರುವಾಗುತ್ತದೆ.

ವಿಶೇಷ ಅಂದ್ರೆ ಟೀಸರ್ ಬಿಡುಗಡೆ ಜೊತೆಗೆ ಸಿನಿಮಾ ರಿಲೀಸ್ ಡೇಟ್ ಕೂಡ ಬಹಿರಂಗ ವಾಗಿದೆ. ಅಂದಹಾಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ವಿಕ್ರಾಂತ್ ರೋಣ ಸಿನಿಮಾ ಜುಲೈ 28 ರಂದು ತೆರೆಗೆ ಬರುತ್ತಿದೆ. ಟೀಸರ್ ಕೊನೆಯಲ್ಲಿ ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗ ಮಾಡುವ ಅಭಿಮಾನಿಗಳ ಸಂತಸ ಡಬಲ್ ಮಾಡಿದ್ದಾರೆ. ಯುಗಾದಿ ಹಬ್ಬಕ್ಕೆ ಕಿಚ್ಚನ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಸಿಕ್ಕಿದ್ದು ಫುಲ್ ಖುಷ್ ಆಗಿದ್ದಾರೆ.

ಸಲ್ಮಾನ್ ಖಾನ್  ಟ್ವೀಟ್​
ಸಲ್ಮಾನ್ ಖಾನ್ ಟ್ವೀಟ್​

ರಂಗಿತರಂಗ ಖ್ಯಾತಿಯ ಅನೂಪ್​ ಭಂಡಾರಿ 'ವಿಕ್ರಾಂತ್ ರೋಣ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಿಚ್ಚ ಸುದೀಪ್​ ಅಲ್ಲದೆ, ನೀತಾ ಅಶೋಕ್​, ನಿರೂಪ್​ ಭಂಡಾರಿ, ಜಾಕ್ವೆಲಿನ್​ ಫರ್ನಾಂಡಿಸ್​ ಸೇರಿದಂತೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ. ಬೃಹತ್​ ಸೆಟ್​ಗಳನ್ನು ನಿರ್ಮಿಸಿ ವಿಕ್ರಾಂತ್​ ರೋಣ ಚಿತ್ರೀಕರಣ ಮಾಡಲಾಗಿದೆ. ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್​ ಪಾಂಡಿಯನ್​ ಬಂಡವಾಳ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.