ETV Bharat / entertainment

'ಕೋಬ್ರಾ' ಕಾರ್ಯಕ್ರಮದಲ್ಲಿ ಚಿಯಾನ್​​ ವಿಕ್ರಮ್ ಭಾಗಿ.. ಆರೋಗ್ಯದ ಕುರಿತು ಹೇಳಿದ್ರೂ ಈ ಮಾತು!

ಟಾಲಿವುಡ್​​ ನಟ ಚಿಯಾನ್​ ವಿಕ್ರಮ್​ ನಿನ್ನೆ ಅಭಿಮಾನಿಗಳ ಮುಂದೆ ದಿಢೀರ್ ಪ್ರತ್ಯಕ್ಷವಾಗಿದ್ದು, ಆರೋಗ್ಯದ ಬಗ್ಗೆ ಉಂಟಾಗಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

actor vikram
actor vikram
author img

By

Published : Jul 12, 2022, 7:29 PM IST

ಚೆನ್ನೈ(ತಮಿಳುನಾಡು): ದಿಢೀರ್​ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದ ಖ್ಯಾತ ನಟ ಚಿಯಾನ್​ ವಿಕ್ರಮ್​ ಕಾರ್ಯಕ್ರಮವೊಂದರಲ್ಲಿ ಪ್ರತ್ಯಕ್ಷರಾದರು. ಈ ವೇಳೆ ಅವರ ಆರೋಗ್ಯದ ಬಗ್ಗೆ ಉಂಟಾಗಿದ್ದ ಅನೇಕ ಗೊಂದಲಗಳಿಗೆ ಖುದ್ದಾಗಿ ಉತ್ತರ ನೀಡಿದ್ದಾರೆ. ಜೊತೆಗೆ ಅಭಿಮಾನಿಗಳು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಧನ್ಯವಾದ ಹೇಳಿದ್ದು, ಮಾಧ್ಯಮದವರ ಕಾಲೆಳೆದಿದ್ದಾರೆ.

ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕಾರಣ ಕಳೆದ ಸೋಮವಾರ ನಟ ಚಿಯಾನ್​ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಅವರಿಗೆ ಹಾರ್ಟ್​ ಅಟ್ಯಾಕ್​ ಆಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಸಹ ಬಿತ್ತರಗೊಂಡಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದ ಅವರ ಮಗ ಧ್ರುವ್​, ಹಾರ್ಟ್​ ಅಟ್ಯಾಕ್​ ಅಗಿಲ್ಲ. ಸಣ್ಣ ನೋವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದರು. ಇದರ ಹೊರತಾಗಿ ಕೂಡ ಮಾಧ್ಯಮಗಳು ತರಹೇವಾರಿ ಸುದ್ದಿ ಪ್ರಕಟ ಮಾಡಿದ್ದವು. ಇದಕ್ಕೆ ಖುದ್ದಾಗಿ ವಿಕ್ರಮ್​ ಬ್ರೇಕ್​ ಹಾಕಿದ್ದಾರೆ.

ಕೋಬ್ರಾ ಚಿತ್ರದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಎಲ್ಲ ಸುದ್ದಿಗಳನ್ನು ನೀಡಿದೆ. ಅನೇಕರು ನನ್ನ ಫೋಟೋ ಮಾರ್ಫ್​ ಮಾಡಿ ನನ್ನ ಮುಖಕ್ಕೆ ಅನಾರೋಗ್ಯ ಇರುವ ವ್ಯಕ್ತಿಯ ಬಾಡಿ ಸೇರಿಸಿ ಸ್ಟೋರಿ ಮಾಡಿದ್ದರು. ಅವರು ತುಂಬಾ ಕ್ರಿಯೇಟಿವ್​​ ಆಗಿದ್ದರು.

ನಾನು ಜೀವನದಲ್ಲಿ ತುಂಬಾ ಅನುಭವಿಸಿದ್ದೇನೆ. ನನ್ನ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳು ಬೆಂಬಲ ನೀಡಿದ್ದಾರೆ. ನನಗೆ ಜೀವನದಲ್ಲಿ ಬೇರೇನೂ ಬೇಕಾಗಿಲ್ಲ ಎಂದು ಹೇಳಿದರು. ತಮ್ಮ ಎದೆಯ ಮೇಲೆ ಕೈಯಿಟ್ಟುಕೊಂಡು ನನಗೆ ಹೃದಯಾಘಾತವಾಗಿದೆ ಎಂದು ಅನೇಕರು ಹೇಳಿದರು. ಆದರೆ, ನನ್ನ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಲು ಖುದ್ದಾಗಿ ಬಂದಿದ್ದೇನೆ ಎಂದರು.

ಇದನ್ನೂ ಓದಿರಿ: ನನ್ನ ತಂದೆಗೆ ಹೃದಯಾಘಾತವಾಗಿಲ್ಲ.. ಸ್ಪಷ್ಟನೆ ನೀಡಿದ ಚಿಯಾನ್​ ವಿಕ್ರಮ್ ಪುತ್ರ ಧ್ರುವ್​

ನಟ ವಿಕ್ರಮ್​​ ಅವರ ಕೋಬ್ರಾ ಸಿನಿಮಾದಲ್ಲಿ ನಾಯಕಿಯಾಗಿ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ನಟನೆ ಮಾಡಿದ್ದಾರೆ. ಇದರಲ್ಲಿ ಕ್ರಿಕೆಟರ್​ ಇರ್ಫಾನ್ ಪಠಾಣ್ ಕೂಡ ಇದ್ದು, ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಕೋಬ್ರಾ ಚಿತ್ರದಲ್ಲಿ ಕೆಜಿಎಫ್ ಬೆಡಗಿ
ಕೋಬ್ರಾ ಚಿತ್ರದಲ್ಲಿ ಕೆಜಿಎಫ್ ಬೆಡಗಿ

56 ವರ್ಷದ ನಟ ವಿಕ್ರಮ್​​, ಮಣಿರತ್ನಂ ಅವರ ಚಿತ್ರ ಪೊನ್ನಿಯಿನ್​ ಸೆಲ್ವನ್​​ನಲ್ಲಿ ನಟನೆ ಮಾಡಿದ್ದು, ಸೆಪ್ಟೆಂಬರ್​ 30ರಂದು ರಿಲೀಸ್​ ಆಗಲಿದೆ. ಈ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಜಯಂ ರವಿ, ಶರತ್​ ಕುಮಾರ್​ ಮತ್ತು ತ್ರಿಷಾ ನಟನೆ ಮಾಡಿದ್ದಾರೆ. ಇವರು ನಟನೆ ಮಾಡಿರುವ ಕೋಬ್ರಾ ಆಗಸ್ಟ್​ 11ರಂದು ರಿಲೀಸ್​ ಆಗಲಿದ್ದು, ಇದರಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಶ್ರೀನಿಧಿ ಶೆಟ್ಟಿ, ಮಿರ್ನಾಲಿನಿ ರವಿ, ಕೆಎಸ್ ರವಿಕುಮಾರ್ ಮತ್ತು ಮಿಯಾ ಜಾರ್ಜ್ ಸೇರಿದಂತೆ ಇತರರು ಇದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.