ಚೆನ್ನೈ: ತಮಿಳು ಚಿತ್ರನಟ ವಿಕ್ರಮ್ ಅವರಿಗೆ ಹೃದಯಾಘಾತವಾಗಿದೆ ಎಂಬ ಊಹಾಪೋಹಗಳಿಂದ ಅವರ ಅಭಿಮಾನಿಗಳಿಗೆ ತೀರಾ ಆತಂಕವಾಗಿತ್ತು. ಆದರೆ, ವಿಕ್ರಮ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿಲ್ಲ, ಅವರು ಆರಾಮವಾಗಿದ್ದಾರೆ ಎಂದು ಅವರ ಮ್ಯಾನೇಜರ್ ಸೂರ್ಯನಾರಾಯಣ ಘೋಷಿಸುತ್ತಿದ್ದಂತೆಯೇ ಸಮಾಧಾನದ ಅಲೆಯೊಂದು ಮೂಡಿತ್ತು.
ಈಗ ವಿಕ್ರಮ್ ಅಭಿಮಾನಿಗಳಿಗೆ ಖುಷಿಯ ಸುದ್ದಿಯೊಂದು ಬಂದಿದೆ. ಜುಲೈ 11 ರಂದು ಬಹಳ ದಿನಗಳಿಂದ ಕಾಯಲಾಗುತ್ತಿದ್ದ ಕೋಬ್ರಾ ಸಿನಿಮಾದ ಆಡಿಯೊ ಲಾಂಚ್ ಮಾಡಲಾಗುವುದು ಎಂದು ನಿರ್ದೇಶಕ ಅಜಯ್ ಜ್ಞಾನಮುತ್ತು ತಂಡ ಘೋಷಣೆ ಮಾಡಿ ಸಿಹಿ ಸುದ್ದಿ ನೀಡಿದೆ.
ವಿಕ್ರಮ್ ಅವರ ಆರೋಗ್ಯದ ಬಗ್ಗೆ ಸೂರ್ಯನಾರಾಯಣ ಅವರ ಸ್ಪಷ್ಟನೆಯ ನಂತರ ಆಡಿಯೊ ಲಾಂಚ್ ಬಗ್ಗೆ ಘೋಷಣೆ ಮಾಡಿದ್ದರ ಹಿಂದೆ ಇನ್ನೊಂದು ಉದ್ದೇಶವಿರುವಂತೆ ಕಾಣುತ್ತದೆ. ಆಡಿಯೊ ಲಾಂಚ್ ಬಗ್ಗೆ ತಿಳಿಸುವ ಮೂಲಕ ವಿಕ್ರಮ್ ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂಬ ಸಂದೇಶವನ್ನು ರವಾನಿಸುವ ಉದ್ದೇಶ ಇದರ ಹಿಂದಿರಬಹುದು.
-
The Grand Audio Launch Of #Cobra on July 11 at #PhoenixMarketcityChennai
— Ajay Gnanamuthu (@AjayGnanamuthu) July 8, 2022 " class="align-text-top noRightClick twitterSection" data="
with the PRESENCE OF #CHIYAANVIKRAM 🔥
See you all there 😊
An @arrahman Musical 🥁@7ScreenStudio @Udhaystalin @RedGiantMovies_ @IrfanPathan @SrinidhiShetty7 @SonyMusicSouth#CobraAudioLaunch pic.twitter.com/yVXJ0gw8va
">The Grand Audio Launch Of #Cobra on July 11 at #PhoenixMarketcityChennai
— Ajay Gnanamuthu (@AjayGnanamuthu) July 8, 2022
with the PRESENCE OF #CHIYAANVIKRAM 🔥
See you all there 😊
An @arrahman Musical 🥁@7ScreenStudio @Udhaystalin @RedGiantMovies_ @IrfanPathan @SrinidhiShetty7 @SonyMusicSouth#CobraAudioLaunch pic.twitter.com/yVXJ0gw8vaThe Grand Audio Launch Of #Cobra on July 11 at #PhoenixMarketcityChennai
— Ajay Gnanamuthu (@AjayGnanamuthu) July 8, 2022
with the PRESENCE OF #CHIYAANVIKRAM 🔥
See you all there 😊
An @arrahman Musical 🥁@7ScreenStudio @Udhaystalin @RedGiantMovies_ @IrfanPathan @SrinidhiShetty7 @SonyMusicSouth#CobraAudioLaunch pic.twitter.com/yVXJ0gw8va
"ಜುಲೈ 11 ರಂದು ಚೆನ್ನೈನ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಚಿಯಾನ್ ವಿಕ್ರಮ್ ಅವರ ಉಪಸ್ಥಿತಿಯಲ್ಲಿ 'ಕೋಬ್ರಾ' ಚಿತ್ರದ ಅದ್ಧೂರಿ ಆಡಿಯೋ ಬಿಡುಗಡೆ. ನಿಮ್ಮೆಲ್ಲರನ್ನೂ ಅಲ್ಲಿ ಭೇಟಿಯಾಗುವೆ." ಎಂದು ನಿರ್ದೇಶಕ ಅಜಯ್ ಜ್ಞಾನಮುತ್ತು ಟ್ವೀಟ್ ಮಾಡಿದ್ದಾರೆ.
ವಿಕ್ರಮ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಅವರನ್ನು ಕಾವೇರಿ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೆಲ ಮಾಧ್ಯಮಗಳು ಶುಕ್ರವಾರ ವರದಿ ಮಾಡಿದ್ದವು. ವಿಕ್ರಮ್ ಅವರಿಗೆ ಎದೆಯಲ್ಲಿ ಸಣ್ಣ ಪ್ರಮಾಣದ ಅಸ್ವಸ್ಥತೆ ಇತ್ತು ಹಾಗೂ ಅದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನಂತರ ವಿಕ್ರಮ್ ಅವರ ಮ್ಯಾನೇಜರ್ ಸ್ಪಷ್ಟಪಡಿಸಿದ್ದರು.