
ಮುಂಬೈ (ಮಹಾರಾಷ್ಟ್ರ): ಮಿಲ್ಕಿ ಬ್ಯೂಟಿ ಖ್ಯಾತಿಯ ನಟಿ ತಮನ್ನಾ ಭಾಟಿಯಾ ಮತ್ತೊಮ್ಮೆ ವಿಶೇಷವಾಗಿಯೇ ಗಮನ ಸೆಳೆದಿದ್ದಾರೆ. ಇಂದು ಫೆಬ್ರವರಿ 14 ಪ್ರೇಮಿಗಳ ದಿನವಾಗಿದ್ದು, ಈ ನಟಿ ಮತ್ತೆ ಭಾರಿ ಚರ್ಚೆಯಲ್ಲಿದ್ದಾರೆ. ಏಕೆಂದರೆ, ನಟಿ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ನಲ್ಲಿದ್ದಾರೆ ಎನ್ನಲಾಗುತ್ತಿದೆ.
2023ರ ಹೊಸ ವರ್ಷದ ಪಾರ್ಟಿಯಲ್ಲಿ ವಿಜಯ್ ಹಾಗೂ ತಮನ್ನಾ ಅವರ ಚುಂಬನದ ವಿಡಿಯೋ ವೈರಲ್ ಆಗಿದ್ದಾಗಲೂ ಅವರ ಸಂಬಂಧದ ಕುರಿತು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆಗ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಇನ್ನೂ ಏನನ್ನೂ ಹೇಳಲಿಲ್ಲ. ಸದ್ಯ ನಟಿ ತಮನ್ನಾ ಜೊತೆಗಿನ ಸಂಬಂಧವನ್ನು ಪ್ರಚಾರ ಮಾಡುವ ಉತ್ಸಾಹದಲ್ಲಿದ್ದಾರೆ ವಿಜಯ್ ವರ್ಮಾ. ವಾಸ್ತವವಾಗಿ, ಈ ನಟ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಅವರಿಬ್ಬರ ನಡುವಿನ ಸಂಬಂಧ ಗಟ್ಟಿಯಾಗಿರುವ ವಿಷಯವನ್ನು ಎತ್ತಿ ತೋರಿಸುತ್ತಿವೆ.
ಬಹಿರಂಗವಾದ ವಿಜಯ್ - ತಮನ್ನಾ ಪ್ರೀತಿ: ಪ್ರೇಮಿಗಳ ದಿನದಂದು ಸೆಲೆಬ್ರಿಟಿ ಜೋಡಿ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದೆ. ಇಷ್ಟುದಿನ ಮೌನವಾಗಿ ಡೇಟಿಂಗ್ ಮಾಡುವ ಜೋಡಿಗಳು ಸದ್ಯ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಧೈರ್ಯವನ್ನು ತೋರಿಸುತ್ತಿವೆ. 'ಪ್ಯಾರ್ ಕಿಯಾ ಡರ್ನಾ ಕ್ಯಾ' ಎಂಬ ಭಾವನೆ ಹೊಂದಿರುವ ವಿಜಯ್ ವರ್ಮಾ, ಪ್ರೇಮಿಗಳ ದಿನ ಹಿನ್ನೆಲೆ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಒಂದು ಬದಿಯಲ್ಲಿ ವಿಜಯ್ ಕಾಲು ಮತ್ತು ಇನ್ನೊಂದು ಬದಿಯಲ್ಲಿ ತಮನ್ನಾ ಕಾಲು ಹಾಗೂ ಈ ಎರಡು ಕಾಲುಗಳ ನಡುವೆ ಕೆಂಪು ಹೃದಯದ ಎಮೋಜಿ. ಈಗ ಈ ಪೋಸ್ಟ್ ನೋಡಿದ್ರೆ ಯಾರಿಗಾದರೂ ಅರ್ಥವಾಗುತ್ತೆ ಪ್ರೀತಿ ಹೆಚ್ಚಾಗ್ತಿದೆ ಅಂತ.

ದಂಪತಿಗಳ ಪ್ರೀತಿಯ ಪುರಾವೆ ಸಿಕ್ಕಿತು: ತಮನ್ನಾ ಹೆಸರನ್ನು ವಿಜಯ್ ಬಹಿರಂಗಪಡಿಸದಿದ್ದರೂ, ಚಿತ್ರದಲ್ಲಿ ಕಂಡುಬರುವ ಶೂಗಳ ಸಾಕ್ಷಿಯೂ ಮುನ್ನೆಲೆಗೆ ಬಂದಿದೆ. ಮುಂದಿನ ಚಿತ್ರದಲ್ಲಿ ತಮನ್ನಾ ಅವರ ಶೂಗಳು, ಫೋಸ್ಟ್ನಲ್ಲಿರುವ ಈ ಶೂಗಳೊಂದಿಗೆ ಹೊಂದಿಕೆಯಾಗುವುದನ್ನು ನೀವು ಗಮನಿಸಬಹುದು. ಸಿನಿಪ್ರಿಯರೆ ನೀವು ಈಗ ಏನು ಯೋಚಿಸುತ್ತೀರಿ? ಈ ಜೋಡಿ ಈಗ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಬೇಕಲ್ಲವೇ?
ಈ ಹಿಂದೆಯೂ ವೈರಲ್ ಆಗಿತ್ತು ವಿಡಿಯೋ: ತಮನ್ನಾ ಹೊಸ ವರ್ಷ ಆಚರಣೆಗೆ ಗೋವಾಗೆ ತೆರಳಿದ್ದಾಗ ನಟ ವಿಜಯ್ ವರ್ಮಾ ಜೊತೆ ಕಾಲ ಕಳೆದಿದ್ದರು. ಅಲ್ಲದೇ ಇಬ್ಬರೂ ಕಿಸ್ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಅಂದಿನಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಖಚಿತವಾಗಿತ್ತು. ನಟಿ ತಮನ್ನಾ ಅವರು ಗೋವಾದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋ ಹಂಚಿಕೊಂಡಿದ್ದರು. ಆಗ ಹಂಚಿಕೊಂಡಿರುವ ಫೋಟೋಗಳಲ್ಲಿ ವಿಜಯ್ ವರ್ಮಾ ಕಾಣದಿರುವ ಬಗ್ಗೆ ನೆಟಿಜನ್ಗಳು ಹಲವು ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದರು.
ಅಭಿಮಾನಿಗಳನ್ನು ಇನ್ಸ್ಟಾಗ್ರಾಮ್ಗೆ ಕರೆದುಕೊಂಡು ಹೋಗಿದ್ದ ತಾರೆ ತಮನ್ನಾ, ತಮ್ಮ ಫ್ಯಾಷನ್ ಪ್ರಪಂಚವನ್ನೇ ತೆರೆದಿಟ್ಟಿದ್ದರು. ಬೀಚ್‌ನಲ್ಲಿ ಓಡಾಡುತ್ತಿರುವ ಫೋಟೋ, ಹೋಟೆಲ್ನಲ್ಲಿ ಉಳಿದುಕೊಂಡಿರುವ ಫೋಟೋ, ಸಂಗೀತ ಕೇಳುತ್ತಿರುವುದು, ಸಮುದ್ರದ ತೆರೆಗಳ ಜೊತೆ ಎಂಜಾಯ್ ಮಾಡುತ್ತಿರುವುದು, ಹಸಿ ಮೀನು ತಿನ್ನುವುದು ಸೇರಿದಂತೆ ಹಲವು ಫೋಟೋಗಳನ್ನು ಕಾಣಬಹುದಿತ್ತು. ತಾರೆಯ ಮಿನಿ ಪ್ರವಾಸ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡಿತ್ತು.
ಇದನ್ನೂ ಓದಿ: ಪ್ರೇಮಿಗಳ ದಿನ: ಮತ್ತೆ ಮದುವೆಯಾಗಲಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ