ETV Bharat / entertainment

'ನನ್ನ ದೇವತೆಗಾಗಿ ಚಿನ್ನದ ದೇವತೆ ತರುತ್ತಿದ್ದೇನೆ': ಅತ್ಯುನ್ನತ ಪ್ರಶಸ್ತಿ ಗೆದ್ದ ವಿಜಯ್ ವರ್ಮಾ - ವಿಜಯ್ ವರ್ಮಾ ಅವಾರ್ಡ್

ಏಷ್ಯನ್​​ ಅಕಾಡೆಮಿ ಕ್ರಿಯೇಟಿವ್​​ ಅವಾರ್ಡ್ಸ್​​ 2023ರಲ್ಲಿ ​ನಟ ವಿಜಯ್ ವರ್ಮಾ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ.

vijay varma tamannaah bhatia
ವಿಜಯ್ ವರ್ಮಾ ತಮನ್ನಾ ಭಾಟಿಯಾ
author img

By ETV Bharat Karnataka Team

Published : Dec 9, 2023, 11:48 AM IST

Updated : Dec 9, 2023, 12:27 PM IST

ಬಾಲಿವುಡ್​​ ನಟ ವಿಜಯ್ ವರ್ಮಾ ಪ್ರತಿಷ್ಟಿತ ಪ್ರಶಸ್ತಿ ಗೆದ್ದ ಖುಷಿಯಲ್ಲಿದ್ದಾರೆ. ದಹಾದ್ ಚಿತ್ರದಲ್ಲಿನ ಅಭಿನಯಕ್ಕಾಗಿ ಏಷ್ಯನ್​​ ಅಕಾಡೆಮಿ ಕ್ರಿಯೇಟಿವ್​​ ಅವಾರ್ಡ್ಸ್​​ 2023ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡು ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

ಗುರುವಾರದಂದು ಏಷ್ಯನ್​​ ಅಕಾಡೆಮಿ ಕ್ರಿಯೇಟಿವ್​​ ಅವಾರ್ಡ್ಸ್​​ 2023 ಸಮಾರಂಭ ಸಿಂಗಾಪುರದಲ್ಲಿ ನಡೆಯಿತು. ಅನೇಕ ದೇಶಗಳ ಪ್ರತಿಭೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಾರತದಿಂದ ಭಾಗಿಯಾದ ವಿಜಯ್​ ವರ್ಮಾ ಮತ್ತು ರಾಜ್​ಶ್ರೀ ದೇಶ್​ಪಾಂಡೆ ಕೂಡ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ.

ಬಾಲಿವುಡ್​ ನಟ ವಿಜಯ್​ ವರ್ಮಾ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. ನಟನಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಅಭಿನಂದನೆ ತಿಳಿಸುತ್ತಿದ್ದಾರೆ. ನಟನ ಸಾಧನೆ, ನಟನಾ ಕೌಶಲ್ಯಕ್ಕೆ ಮೆಚ್ಚುಗೆಯ ಮಳೆ ಸುರಿದಿದೆ. ಗೆಳತಿ ತಮನ್ನಾ ಭಾಟಿಯಾ ಕೂಡ ನಟನ ಸಾಧನೆಗೆ ಪ್ರೀತಿಯ ಧಾರೆಯೆರೆದಿದ್ದಾರೆ.

ಬಹುಭಾಷಾ ತಾರೆ ತಮನ್ನಾ ಭಾಟಿಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲೊ ಸ್ಪೆಷಲ್​ ಪೊಸ್ಟ್ ಶೇರ್ ಮಾಡಿದ್ದಾರೆ. ಏಷ್ಯನ್​​ ಅಕಾಡೆಮಿ ಕ್ರಿಯೇಟಿವ್​​ ಅವಾರ್ಡ್ ಹಿಡಿದ ವಿಜಯ್​​ ವರ್ಮಾ ಅವರ ಫೋಟೋವನ್ನು ತಮ್ಮ ಇನ್​ಸ್ಟಾ ಸ್ಟೋರಿನಲ್ಲಿ ರೀ ಪೋಸ್ಟ್ ಮಾಡಿದ್ದಾರೆ. ವಿಜಯ್ ಅವರನ್ನು ಟ್ಯಾಗ್ ಮಾಡಿದ ನಟಿ, 'ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್‌ನಲ್ಲಿ ಅತ್ಯುನ್ನತ ಪ್ರಶಸ್ತಿ ಗೆಲ್ಲುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದೀರಾ' ಎಂದು ಬರೆದು ಕೊಂಡಿದ್ದಾರೆ.

vijay varma story
ವಿಜಯ್ ವರ್ಮಾ ಇನ್​ಸ್ಟಾ ಸ್ಟೋರಿ

ಇದೇ ಫೋಟೋವನ್ನು ಮತ್ತೊಮ್ಮೆ ಹಂಚಿಕೊಂಡು ದೊಡ್ಡ ಹಾರ್ಟ್ ಸಿಂಬಲ್​ ಹಾಕಿದ್ದಾರೆ. ತಮನ್ನಾ ಅವರ ಈ ಸ್ಟೋರಿಯನ್ನು ರೀಶೇರ್ ಮಾಡಿದ ವಿಜಯ್, 'ನನ್ನ ದೇವತೆಗಾಗಿ ನಾನು ಚಿನ್ನದ ದೇವತೆ ತರುತ್ತಿದ್ದೇನೆ' ಎಂದು ಬರೆದಿದ್ದಾರೆ.

ಇದನ್ನೂ ಓದಿ: 'ನಾವು ಅತ್ಯುತ್ತಮರು': ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್​​ನಲ್ಲಿ ಭಾರತದ ಪ್ರತಿಭೆಗಳ ಮಿಂಚು

ಸಿಂಗಾಪುರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತೀಯರು ಗಮನ ಸೆಳೆದಿದ್ದಾರೆ. ನಟನಾ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಟ್ರಯಲ್ ಬೈ ಫೈಯರ್‌ ಚಿತ್ರದ ನಟನೆಗಾಗಿ ರಾಜ್​​​​ಶ್ರೀ ದೇಶಪಾಂಡೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ದಹಾದ್‌ನಲ್ಲಿನ ಅಮೋಘ ಅಭಿನಯಕ್ಕೆ ವಿಜಯ್ ವರ್ಮಾ ಅತ್ಯುತ್ತಮ ಪ್ರಶಸ್ತಿ ಪಡೆದಿದ್ದಾರೆ. ಟ್ರಯಲ್ ಬೈ ಫೈಯರ್‌ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಾಣುತ್ತಿದೆ. ದಹಾದ್‌ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಈ ಇಬ್ಬರ ನಟನೆಗೆ ಪ್ರೇಕ್ಷಕರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: 'ಅನಿಮಲ್​' ಅಬ್ಬರ: 'ಗೀತಾಂಜಲಿ' ಪಾತ್ರ ವರ್ಣಿಸಿದ ರಶ್ಮಿಕಾ ಮಂದಣ್ಣ

ಪ್ರಶಸ್ತಿ ಗೆದ್ದ ಬಳಿಕ ಹರ್ಷ ಹಂಚಿಕೊಂಡಿದ್ದ ವಿಜಯ್​ ವರ್ಮಾ ಸರ್ವರಿಗೂ ಕೃತಘ್ಞತೆ ಸಲ್ಲಿಸಿದ್ದರು. "ಪ್ರಶಸ್ತಿ ಮುಡಿಗೇರಿಸಿಕೊಳ್ಳುವುದು ಒಂದು ಸುಂದರ ಕ್ಷಣ. ಈ ಬಾರಿ ಹಿಂದಿಗಿಂತಲೂ ಹೆಚ್ಚು ವಿಶೇಷ. ಏಕೆಂದರೆ ಇದು ದೇಶದ ಗೆಲುವು. ಏಷ್ಯಾ-ಪೆಸಿಫಿಕ್​ನಲ್ಲಿ ನಾವು ಅತ್ಯುತ್ತಮರು ಎಂಬುದನ್ನು ಭಾರತೀಯರಿಗೆ ಹೇಳಲು ಬಹಳ ಸಂತೋಷವಾಗುತ್ತಿದೆ" ಎಂದು ಬರೆದುಕೊಂಡಿದ್ದರು.

Last Updated : Dec 9, 2023, 12:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.