ETV Bharat / entertainment

ರಶ್ಮಿಕಾ ವಿಜಯ್​ ಡೇಟಿಂಗ್​ ವದಂತಿ: ಊಹಾಪೋಹಗಳಿಗೆ ಪುಷ್ಠಿ ನೀಡಿತು ವೈರಲ್​ ವಿಡಿಯೋ! - ವಿಜಯ್ ದೇವರಕೊಂಡ

ರಶ್ಮಿಕಾ ವಿಜಯ್​ ಡೇಟಿಂಗ್​ ವದಂತಿ ಬೆನ್ನಲ್ಲೇ, ಜೋಡಿ ಪಾರ್ಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Rashmika Vijay dating
ರಶ್ಮಿಕಾ ವಿಜಯ್​ ಡೇಟಿಂಗ್
author img

By

Published : Jun 24, 2023, 4:46 PM IST

ಗೀತ ಗೋವಿಂದಂ, ಡಿಯರ್ ಕಾಮ್ರೇಡ್​ನಂತಹ ಹಿಟ್ ಚಿತ್ರಗಳಲ್ಲಿ ಸ್ಕ್ರೀನ್​ ಶೇರ್ ಮಾಡಿರುವ ರೂಮರ್​ ಲವ್​ ಬರ್ಡ್ಸ್​​​ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸುದ್ದಿ ಮತ್ತೆ ಮುನ್ನಲೆಗೆ ಬಂದಿದೆ. ಚಿತ್ರರಂಗದ ಮುದ್ದಾದ ಜೋಡಿಗಳಲ್ಲೊಂದಾಗಿ ಗುರುತಿಸಿಕೊಂಡಿರುವ ಇವರ ಪಾರ್ಟಿ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡುತ್ತಿದೆ.

ಆನ್‌ಸ್ಕ್ರೀನ್​ನಲ್ಲಿ ಸಿನಿಮಾಗಳು ಹಿಟ್​ ಆಗುತ್ತಿದ್ದಂತೆ, ಅಭಿಮಾನಿಗಳು ಈ ಇಬ್ಬರೂ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರಾ? ಎಂದು ಊಹಿಸಲು ಪ್ರಾರಂಭಿಸಿದರು. ಆದ್ರೆ ಈ ಜೋಡಿ ಮಾತ್ರ ಆಪ್ತ ಸ್ನೇಹಿತರು ಎಂದು ಹೇಳಿಕೊಂಡು ಬಂದಿದೆ. ಇದೀಗ ಇವರಿಬ್ಬರು ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಊಟ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಜಯ್ ಮತ್ತು ರಶ್ಮಿಕಾ ಅವರ ಡೇಟಿಂಗ್​​ ಬಗ್ಗೆ ವ್ಯಾಪಕ ಊಹಾಪೋಹಗಳ ನಡುವೆ ವೈರಲ್ ವಿಡಿಯೋ ಸದ್ದು ಮಾಡುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾನ್ಸ್​ ಫೇಜ್​ ಒಂದು ಶೇರ್ ಮಾಡಿರುವ ವಿಡಿಯೋದಲ್ಲಿ, ವಿಜಯ್ ಮತ್ತು ರಶ್ಮಿಕಾ ಸ್ನೇಹಿತರೊಂದಿಗೆ ಊಟ ಮಾಡುತ್ತಿದ್ದಾರೆ. ವಿಜಯ್ ಅವರ ಕಿರಿಯ ಸಹೋದರ ಆನಂದ್ ಕೂಡ ಈ ಗುಂಪಿನಲ್ಲಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ಹಲವು ಫ್ಯಾನ್​ ಪೇಜ್​ಗಳಲ್ಲಿ ಹಂಚಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ವಿಜಯ್ ಮತ್ತು ರಶ್ಮಿಕಾ ಬೇರ್ಪಟ್ಟ ಬಗ್ಗೆ ವದಂತಿಗಳು ಹರಡಿದ್ದರಿಂದ ಅವರಿಬ್ಬರನ್ನು ಮತ್ತೆ ಒಟ್ಟಿಗೆ ನೋಡಲು ಎಷ್ಟು ಸಂತೋಷವಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ಹಳೇ ವಿಡಿಯೋ ಇರಬಹುದು ಎಂದು ಅಂದಾಜಿಸುತ್ತಿದ್ದಾರೆ.

ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ರೂಮರ್​ ಲವ್​ ಬರ್ಡ್ಸ್ ಅನ್ನು ಮತ್ತೆ ಒಟ್ಟಿಗೆ ನೋಡಿದ ನಂತರ ಅಭಿಮಾನಿಗಳು ತಮ್ಮ ಉತ್ಸಾಹವನ್ನು ಕಾಮೆಂಟ್​ ಸೆಕ್ಷನ್​ನಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಯೊಬ್ಬರು, "ವಾವ್, ಇದೆಲ್ಲವನ್ನೂ ನೋಡುವುದರಿಂದ ಹೃದಯಕ್ಕೆ (ಹಾರ್ಟ್ ಐಸ್ ಎಮೋಜಿಗಳೊಂದಿಗೆ) ರಿಲೀಫ್ ಸಿಗುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ, "ಹೈ ಅವರು ನಮ್ಮ ವಿರೋಶ್ - ಪರ್ಫೆಕ್ಟ್​ ಕಪಲ್​" ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, "ಒಳ್ಳೆಯ ಸುದ್ದಿ, ಅವರು ಇನ್ನೂ ಒಟ್ಟಿಗೆ ಇದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ: 'ಬ್ಲಿಂಕ್' ರೀ ರೆಕಾರ್ಡಿಂಗ್ ಕಂಪ್ಲೀಟ್​​: ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ಆಗಸ್ಟ್​​ನಲ್ಲಿ ತೆರೆಗೆ

ಈ ಬಹುಬೇಡಿಕೆ ನಟರ ಸಿನಿಮಾ ವಿಚಾರ ಗಮನಿಸುವುದಾದರೆ, ನ್ಯಾಶನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ನಟ ರಣ್​​​ಬೀರ್ ಕಪೂರ್ ಜೊತೆಗೆ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಇದನ್ನು ಕಬೀರ್ ಸಿಂಗ್ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ನಿರ್ದೇಶನ ಮಾಡಿದ್ದಾರೆ. ಅನಿಮಲ್​ ಬಿಡುಗಡೆಗೆ ಸಜ್ಜಾಗಿದ್ದರೆ, ಮೂರ್ನಾಲ್ಕು ಸಿನಿಮಾಗಳು ಶೂಟಿಂಗ್​, ಪೋಸ್ಟ್ ಪ್ರೊಡಕ್ಷನ್​​ ಹಂತದಲ್ಲಿದೆ. ಮತ್ತೊಂದೆಡೆ ವಿಜಯ್ ದೇವರಕೊಂಡ, ಖುಶಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ಸಮಂತಾ ರುತ್ ಪ್ರಭು ಜೊತೆ ನಟಿಸಿದ್ದಾರೆ. ಇದಲ್ಲದೇ ಇನ್ನೂ ಎರಡು ಸಿನಿಮಾಗಳು ಅವರ ಕೈಯಲ್ಲಿದೆ. ಅದನ್ನು ತಾತ್ಕಾಲಿಕವಾಗಿ VD12, VD13 ಎಂದು ಹೆಸರಿಸಲಾದಿದೆ.

ಇದನ್ನೂ ಓದಿ: ಮದುವೆಯಾಗದಿದ್ದರೆ ಹೆಣ್ಣಿಗೆ ಅಸ್ತಿತ್ವ ಇಲ್ವೇ?: ಹೆಣ್ಣುಮಕ್ಕಳ ಮೂಕವೇದನೆಗೆ ದನಿಯಾದ 'ಅಮೃತಧಾರೆ'!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.