ETV Bharat / entertainment

ಆ ವಿಡಿಯೋ ಶೇರ್ ಮಾಡದಂತೆ ಕತ್ರಿನಾ ಮನವಿ.. ಪತ್ನಿ ಮಾತು ಮೀರಿ ದೃಶ್ಯ ಹಂಚಿಕೊಂಡ ವಿಕ್ಕಿ!

author img

By

Published : Dec 7, 2022, 7:28 PM IST

ನಟ ವಿಕ್ಕಿ ಕೌಶಲ್ ಗೋವಿಂದಾ ನಾಮ್ ಮೇರಾ ಚಿತ್ರದ ಕ್ಯಾ ಬಾತ್ ಹೈ ಹಾಡಿಗೆ ಡ್ಯಾನ್ಸ್ ಮಾಡಿರುವ ತಮ್ಮ ಫನ್ನಿ​ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Vicky Kaushal shared funny video
ಗೋವಿಂದಾ ನಾಮ್ ಮೇರಾ ಸಿನಿಮಾ ಪ್ರಚಾರ

ನಟ ವಿಕ್ಕಿ ಕೌಶಲ್ ಅವರ ಮುಂಬರುವ ಚಿತ್ರ ಗೋವಿಂದಾ ನಾಮ್ ಮೇರಾ ಇದೇ ಡಿಸೆಂಬರ್​ 16ರಂದು ಬಿಡುಗಡೆ ಆಗಲಿದೆ. ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ. ಈ ಹೊತ್ತಿನಲ್ಲಿ ವಿಕ್ಕಿ ಚಿತ್ರದ ಕ್ಯಾ ಬಾತ್ ಹೈ ಹಾಡಿಗೆ​​ ಲಿಪ್​ ಸಿಂಕ್​ ಮಾಡಿ ಡ್ಯಾನ್ಸ್ ಮಾಡಿರುವ ತಮ್ಮ ಫನ್ನಿ​ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ನಟ ವಿಕ್ಕಿ ಕೌಶಲ್ ವಿಡಿಯೋ ಹಂಚಿಕೊಂಡಿದ್ದಾರೆ. ಚೇರ್ ಮೇಲೆ ಕುಳಿತು ವಿಕ್ಕಿ ಕೌಶಲ್ ನಾಜೂಕಾಗಿ ಮೈ ಕುಣಿಸಿರೋದನ್ನು ವಿಡಿಯೋದಲ್ಲಿ ನೀವು ಕಾಣಬಹುದು. "ನನ್ನ ಹೆಂಡತಿ ಅಂತಹ ವಿಡಿಯೋಗಳನ್ನು (ಫನ್ನಿ, ಕ್ಯಾಂಡಿಡ್) ಹಾಕಬೇಡಿ ಎಂದು ನನ್ನಲ್ಲಿ ಬೇಡಿಕೊಳ್ಳುತ್ತಾಳೆ, ಆದರೆ, ನಾನು ಅದಕ್ಕೆ ಸಹಾಯ ಮಾಡಲಾರೆ, ಒಂದು ದಿನ ಅವರು "ಕ್ಯಾ ಬಾತ್ ಹೈ!!!" ಎಂದು ಹೇಳುತ್ತಾರೆಂದು ನಂಬಿದ್ದೇನೆ'' ಅಂತಾ ವಿಕ್ಕಿ ಕೌಶಲ್ ಬರೆದುಕೊಂಡಿದ್ದಾರೆ.

Vicky Kaushal shared funny video
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್

ಕ್ಯಾ ಬಾತ್ ಹೈ 2.0 ಗೋವಿಂದ ನಾಮ್ ಮೇರಾ ಚಿತ್ರದ ಮೂರನೇ ಹಾಡು. ಇದು ಹಾರ್ಡಿ ಸಂಧು ಅವರ ಅದೇ ಹೆಸರಿನ ಟ್ರ್ಯಾಕ್‌ನ ಹೊಸ ಆವೃತ್ತಿಯಾಗಿದೆ. ನೀವು ಹಾಡು, ನೃತ್ಯ ಮತ್ತು ಹಾಸ್ಯಗಳನ್ನು ಮಾಡಿದ ನಂತರವೇ ಓರ್ವ ನಟನಾಗಿ ಸಂಪೂರ್ಣವಾಗುತ್ತೀರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ನೈಸರ್ಗಿಕ ಸೌಂದರ್ಯ ಮುಖ್ಯ'ವೆಂದ ಜಾಕ್ವೆಲಿನ್ ಫರ್ನಾಂಡಿಸ್ ಟ್ರೋಲ್​​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.