ಮೇಘನಾ ಗುಲ್ಜಾರ್ ನಿರ್ದೇಶನದ ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ, ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಪಾತ್ರದಲ್ಲಿ ನಟಿಸುತ್ತಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇಂದು ಸ್ಯಾಮ್ ಮಾಣೆಕ್ ಷಾ ಅವರ ಪ್ರತಿಮೆ ಎದುರು ನಿಂತ ಫೋಟೋವನ್ನು ಹಂಚಿಕೊಂಡಿದ್ದಾರೆ ನಟ ವಿಕ್ಕಿ ಕೌಶಲ್.
ಇನ್ಸ್ಟಾಗ್ರಾಮ್ನಲ್ಲಿ ಸ್ಯಾಮ್ ಮಾಣೆಕ್ ಷಾ ಪ್ರತಿಮೆ ಎದುರು ನಿಂತಿರುವ ಫೋಟೋವನ್ನು ನಟ ವಿಕ್ಕಿ ಕೌಶಲ್ ಹಂಚಿಕೊಂಡು ಗೌರವ ಸಲ್ಲಿಸಿದ್ದಾರೆ. ವಿಕ್ಕಿ ಕೌಶಲ್ ಅವರು ನಟಿಸುತ್ತಿರುವ ಈ ಚಿತ್ರದಲ್ಲಿ ಮಾಣೆಕ್ ಷಾ ಅವರ ಪತ್ನಿ ಸಿಲೂ ಆಗಿ ಸಾನ್ಯಾ ಮಲ್ಹೋತ್ರಾ ಮತ್ತು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಆಗಿ ಫಾತಿಮಾ ಸನಾ ಶೇಖ್ ನಟಿಸಿದ್ದಾರೆ.
ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಿತ್ರದಲ್ಲಿ ನೀರಜ್ ಕಬಿ, ಎಡ್ವರ್ಡ್ ಸೊನ್ನೆನ್‌ಬ್ಲಿಕ್, ರಿಚರ್ಡ್ ಭಕ್ತಿ ಕ್ಲೈನ್, ಸಾಕಿಬ್ ಅಯೂಬ್ ಮತ್ತು ಕೃಷ್ಣ ಕಾಂತ್ ಸಿಂಗ್ ಬುಂದೇಲಾ ಸೇರಿದಂತೆ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರಿ ಫೈಲ್ಸ್ ವಿವಾದ: ಯಹೂದಿ ವಿರೋಧಿ ಸಂದೇಶದ ಸ್ಕ್ರೀನ್‌ಶಾಟ್ ಶೇರ್ ಮಾಡಿದ ಇಸ್ರೇಲ್ ರಾಯಭಾರಿ