ETV Bharat / entertainment

ಸ್ಯಾಮ್ ಬಹದ್ದೂರ್ ಸ್ಪೆಷಲ್​ ಶೋನಲ್ಲಿ ವಿಕ್ಯಾಟ್: ಮ್ಯಾಚಿಂಗ್​ ಡ್ರೆಸ್​ನಲ್ಲಿ ಕಂಗೊಳಿಸಿದ ಸ್ಟಾರ್ ಕಪಲ್

author img

By ETV Bharat Karnataka Team

Published : Nov 30, 2023, 5:08 PM IST

ಬುಧವಾರ ಸಂಜೆ ನಡೆದ ಸ್ಯಾಮ್ ಬಹದ್ದೂರ್ ಸ್ಪೆಷಲ್​ ಶೋನಲ್ಲಿ ಕೌಶಲ್​ ಕುಟುಂಬ ಭಾಗಿಯಾಗಿತ್ತು.

Vicky Kaushal Katrina Kaif at sam bahadur special screening
ಸ್ಯಾಮ್ ಬಹದ್ದೂರ್ ಸ್ಪೆಷಲ್​ ಶೋನಲ್ಲಿ ವಿಕ್ಯಾಟ್

ನಟ ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ಸಿನಿಮಾ ನಾಳೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ತಯಾರಕರು ನಿನ್ನೆ ಸಂಜೆ ಸ್ಪೆಷಲ್​ ಶೋ ಹಮ್ಮಿಕೊಂಡಿದ್ದರು. ನಾಯಕ ನಟ ವಿಕ್ಕಿ ಕೌಶಲ್​ ಪತ್ನಿ, ಬಾಲಿವುಡ್​ ಬಹುಬೇಡಿಕೆ ತಾರೆ ಕತ್ರಿನಾ ಕೈಫ್ ಕೂಡ ಈವೆಂಟ್​ಗೆ ಸಾಕ್ಷಿಯಾಗಿದ್ದರು. ಟೈಗರ್ 3 ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕತ್ರಿನಾ ಕೈಫ್​​, ಪತಿಯ ಸಿನಿಮಾ ಪ್ರೋತ್ಸಾಹಿಸಲು ಬಂದ ಕ್ಷಣ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಟೈಗರ್ 3 ಸ್ಟಾರ್ ಕತ್ರಿನಾ ಕೈಫ್ ವೆಲ್ವೆಟ್ ಬ್ಲ್ಯಾಕ್ ಸ್ಟ್ರಾಪ್‌ಲೆಸ್ ಡ್ರೆಸ್​​ನಲ್ಲಿ ಬಹಳ ಆಕರ್ಷಣೀಯವಾಗಿ ಕಾಣಿಸಿಕೊಂಡರು. ವಿಕ್ಕಿ ಕ್ಯಾಟ್ ಕೈ ಕೈ ಹಿಡಿದು ನಡೆದಿದ್ದು, ಫೋಟೋ - ವಿಡಿಯೋಗಳು ವೈರಲ್​ ಆಗಿವೆ. ವಿಕ್ಕಿ ಕೌಶಲ್​ ಸಹ ಪತ್ನಿಗೆ ಮ್ಯಾಚ್​​ ಆಗುವಂತೆ ಬ್ಲ್ಯಾಕ್​​ ಪ್ಯಾಂಟ್‌ಸೂಟ್‌ನಲ್ಲಿ ಕಾಣಿಸಿಕೊಂಡರು. ವಿಕ್ಕಿ ಕೌಶಲ್ ಅವರ ತಾಯಿ ವೀಣಾ ಕೌಶಲ್, ತಂದೆ ಶ್ಯಾಮ್ ಕೌಶಲ್ ಮತ್ತು ಸಹೋದರ ಸನ್ನಿ ಕೌಶಲ್ ಕೂಡ ಸ್ಯಾಮ್ ಬಹದ್ದೂರ್ ಸ್ಪೆಷಲ್​​ ಸ್ಕ್ರೀನಿಂಗ್‌ಗೆ ಆಗಮಿಸಿದ್ದರು. ಕೌಶಲ್​​ ಕುಟುಂಬ ಕಾರ್ಯಕ್ರಮದಲ್ಲಿ ಹಾಜರಿದ್ದು, ವಿಕ್ಯಾಟ್​ ಜೋಡಿ ಕಂಡ ನೆಟ್ಟಿಗರು ಮೇಡ್ ಫಾರ್ ಈಚ್ ಅದರ್ ಎಂದು ಗುಣಗಾನ ಮಾಡುತ್ತಿದ್ದಾರೆ.

ಸ್ಯಾಮ್ ಬಹದ್ದೂರ್ ಸಿನಿಮಾವನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ. ವಿಕ್ಕಿ ಕೌಶಲ್ ಜೊತೆ ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ, ವಿಕ್ಕಿ ಕೌಶಲ್​​ ಭಾರತದ ಮೊದಲ ಫೀಲ್ಡ್‌ ಮಾರ್ಷಲ್ ಸ್ಯಾಮ್​ ಮಾಣೆಕ್‌ ಶಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಮ್​ ಮಾಣೆಕ್‌ ಶಾ ಜೀವನಾಧರಿತ ಕಥೆಯೇ 'ಸ್ಯಾಮ್​ ಬಹದ್ದೂರ್' ಸಿನಿಮಾ.​

ಇದನ್ನೂ ಓದಿ: ಅನಿಮಲ್ vs ಸ್ಯಾಮ್ ಬಹದ್ದೂರ್: ರಣ್​ಬೀರ್ ರಶ್ಮಿಕಾ ಸಿನಿಮಾ 100 ಕೋಟಿ ಕಲೆಕ್ಷನ್​ ಸಾಧ್ಯತೆ!

ಸ್ಯಾಮ್​ ಮಾಣೆಕ್‌ ಶಾ ಅವರು ಭಾರತೀಯ ಸೇನೆಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಐದು ಯುದ್ಧಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ, ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ಮೊದಲ ಭಾರತೀಯ ಸೇನಾ ಅಧಿಕಾರಿ ಇವರು. 1971ರ ಇಂಡೋ-ಪಾಕ್ ಯುದ್ಧದಲ್ಲಿಯೂ ಭಾರತೀಯ ಸೇನೆಯ ನೇತೃತ್ವ ವಹಿಸಿದ್ದರು.

ಇದನ್ನೂ ಓದಿ: ನಾಳೆ ಸಲಾರ್​ ಟ್ರೇಲರ್ ರಿಲೀಸ್: ಪ್ರಶಾಂತ್ ನೀಲ್, ಪ್ರಭಾಸ್​ ಫೋಟೋಗೆ ಕ್ಯಾಪ್ಷನ್​ ಕೊಟ್ಟು ಫ್ರೀ ಟಿಕೆಟ್ ಪಡೆಯಿರಿ

ಸಿನಿಮಾ ನಾಳೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ರಣ್​​ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್‌ ಸಿನಿಮಾ ಕೂಡ ನಾಳೆಯೇ ತೆರೆಕಾಣಲಿದ್ದು, ಬಾಕ್ಸ್ ಆಫೀಸ್ ಪೈಪೋಟಿ ಏರ್ಪಡಲಿದೆ. ರಾಝಿ ನಂತರ ಮೇಘನಾ ಗುಲ್ಜಾರ್ ಮತ್ತು ವಿಕ್ಕಿ ಕೌಶಲ್​ ಕಾಂಬಿನೇಶನ್​ನ ಎರಡನೇ ಚಿತ್ರವಿದು. ಆನ್​ಲೈನ್​ ಅಡ್ವಾನ್ಸ್ ಟಿಕೆಟ್​​ ಬುಕಿಂಗ್​​ ಪ್ರಕ್ರಿಯೆಯಲ್ಲಿ ಸ್ಯಾಮ್ ಬಹದ್ದೂರ್ ಸರಿಸುಮಾರು 2 ಕೋಟಿ ರೂ. ವ್ಯವಹಾರ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.