ETV Bharat / entertainment

ಪ್ರವಾಸಕ್ಕೆ ತೆರಳಿದ ಬಾಲಿವುಡ್ ಪವರ್​ಫುಲ್ ಕಪಲ್​ 'ವಿಕ್ಯಾಟ್​' - Vicky Katrina latest news

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಖಾಸಗಿ ಪ್ರವಾಸಕ್ಕೆ ತೆರಳಿದ್ದಾರೆ.

Vicky Katrina
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್
author img

By

Published : Mar 22, 2023, 12:36 PM IST

ಬಾಲಿವುಡ್‌ನ ತಾರಾ ದಂಪತಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ಪ್ರವಾಸದ ಮೂಡ್‌ನಲ್ಲಿದ್ದಾರೆ. ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬ್ಯೂಟಿಫುಲ್​ ಕಪಲ್​ ಕಂಡುಬಂದಿದ್ದು, ನಗರದಿಂದ ಹೊರಟರು. ಆದ್ರೆ ಯಾವ ಸ್ಥಳಕ್ಕೆ ಇವರ ಪ್ರಯಾಣ ಎಂದು ತಿಳಿದುಬಂದಿಲ್ಲ.

ನಗರದ ಹೊರಗೆ ಪ್ರವಾಸಕ್ಕೆ ತೆರಳುವ ಮೊದಲು, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರನ್ನು ಮುಂಬೈ ವಿಮಾನ ನಿಲ್ದಾಣದ ಹೊರಗೆ ಬೀಡುಬಿಟ್ಟಿದ್ದ ಪಾಪರಾಜಿಗಳು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ. ತಾರಾ ದಂಪತಿ ಕ್ಯಾಶುವಲ್​ ಡ್ರೆಸ್​ನಲ್ಲಿ ಕಾಣಿಸಿಕೊಂಡರು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಪಾಪರಾಜಿಗಳನ್ನು ಕಂಡು ಮುಗುಳ್ನಕ್ಕರು, ಜೊತೆಗೆ ಅವರ ಕ್ಯಾಮರಾಗಳಿಗೆ ಪೋಸ್​ ಕೂಡ ಕೊಟ್ಟರು. ಬ್ಲ್ಯಾಕ್​ ಆ್ಯಂಡ್​ ಬ್ಲ್ಯಾಕ್​ ಏರ್​ಪೋರ್ಟ್​ ಲುಕ್​​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಅಗಿದ್ದು, ಫೋಟೋಗಳು ಮೆಚ್ಚುಗೆ ಸಂಪಾದಿಸಿದೆ. ಈ ಜೋಡಿ ಎಲ್ಲಿಗೆ ಹಾರಿರಬಹುದು ಎಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ಕೆಲಸದ ವಿಚಾರ ಗಮನಿಸುವುದಾದರೆ, ನಟಿ ಕತ್ರಿನಾ ಕೈಫ್​ ಕೊನೆಯದಾಗಿ ಹಾರರ್ ಕಾಮಿಡಿ ಫೋನ್ ಬೂತ್‌ನಲ್ಲಿ ಕಾಣಿಸಿಕೊಂಡರು. ಈ ಚಿತ್ರ ಕಳೆದ ವರ್ಷ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಗಿಟ್ಟಿಸಿತ್ತು. ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಈ ಚಿತ್ರದಲ್ಲಿ ಕತ್ರಿನಾ ಜೊತೆಗೆ ನಟಿಸಿದ್ದರು. ಟೈಗರ್​ 3 ಕತ್ರಿನಾ ಕೈಫ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ. ಮಾಜಿ ಐಎಸ್‌ಐ ಏಜೆಂಟ್ ಜೊಯಾ ಕಾಣಿಸಿಕೊಳ್ಳಲಿದ್ದಾರೆ.

'ಟೈಗರ್ 3' ಬಾಲಿವುಡ್​ ಸೂಪರ್​ ಸ್ಟಾರ್​ ನಟ ಸಲ್ಮಾನ್ ಖಾನ್, ಕತ್ರಿನಾ ನಟನೆಯ ಸ್ಪೈ ಥ್ರಿಲ್ಲರ್ ಫ್ರಾಂಚೈಸಿ ಮೂರನೇ ಭಾಗವಾಗಿದೆ. 2012ರಲ್ಲಿ ಕಬೀರ್ ಖಾನ್ ನಿರ್ದೇಶನದ 'ಏಕ್ ಥಾ ಟೈಗರ್' ಬಿಡುಗಡೆ ಆಗಿತ್ತು. ಅದರ ಮುಂದುವರಿದ ಭಾಗ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಟೈಗರ್ ಜಿಂದಾ ಹೈ 2017ರಲ್ಲಿ ಬಿಡುಗಡೆ ಆಗಿತ್ತು. ಇದೀಗ 'ಟೈಗರ್ 3' ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರವನ್ನು ಇದೇ ನವೆಂಬರ್​ನಲ್ಲಿ ರಿಲೀಸ್​ ಮಾಡಲು ತಯಾರಿ ನಡೆಯುತ್ತಿದ್ದು, ಶಾರುಖ್​ ಖಾನ್​ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಕತ್ರಿನಾ ಕೈಫ್​ ಅವರು ಫರ್ಹಾನ್ ಅಖ್ತರ್ ಅವರ ಜೀ ಲೇ ಝರಾ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಕೆಲಸ ಮಾಡಲಿದ್ದಾರೆ.

ಇದನ್ನೂ ಓದಿ: ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳು: ರಾಮ್ ಚರಣ್ ನಂಬರ್​ 1, ಎರಡನೇ ಸ್ಥಾನದಲ್ಲಿ ದೀಪಿಕಾ

ವಿಕ್ಕಿ ಕೌಶಲ್ ಇತ್ತೀಚೆಗೆ 'ಗೋವಿಂದ ನಾಮ್ ಮೇರಾ'ದಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಯಶಸ್ವಿಯಾಗಿದೆ. ಮೇಘನಾ ಗುಲ್ಜಾರ್ ಆ್ಯಕ್ಷನ್​ ಕಟ್​ ಹೇಳಿರುವ ಸ್ಯಾಮ್ ಬಹದ್ದೂರ್‌ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಇದು ಸ್ಯಾಮ್ ಮಾಣೆಕ್​ ಷಾ ಅವರ ಬಯೋಪಿಕ್. ಇದು ಡಿಸೆಂಬರ್​ 1ರಂದು ತೆರೆಕಾಣಲು ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: ಕಪ್ಪು ಬಿಳುಪಿನ ಚಿತ್ರದಲ್ಲಿ ಕಲರ್​ಫುಲ್ ನೋಟ ಬೀರಿದ 'ಶಾಕುಂತಲೆ' ಸಮಂತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.