ಮುಂಬೈ(ಮಹಾರಾಷ್ಟ್ರ): ಖ್ಯಾತ ಮರಾಠಿ ಹಿರಿಯ ನಟ ಪ್ರದೀಪ್ ಪಟವರ್ಧನ್ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ದಕ್ಷಿಣ ಮುಂಬೈನ ಗಿರ್ಗಾಂವ್ನಲ್ಲಿರುವ ತಮ್ಮ ನಿವಾಸದಲ್ಲಿ ನಟ ಕೊನೆಯುಸಿರೆಳೆದಿದ್ದಾರೆ. ಚೆಷ್ಮೆ ಬಹದ್ದಾರ್, ಏಕ್ ಶೋಧ್, ಮೀ ಶಿವಾಜಿರಾಜೆ ಭೋಸ್ಲೆ ಬೋಲ್ಟಾಯ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ.
-
मराठी रंगभूमीवरील मोरूची मावशी, बायको असून शेजारी, लग्नाची बेडी तसेच मराठी चित्रपटसृष्टीत आपल्या सहजसुंदर अभिनयाने रसिक प्रेक्षकांच्या हृदयावर अधिराज्य गाजवणारे सदाबहार अभिनेते प्रदीप पटवर्धन यांचे दुःखद निधन झाले. त्यांच्या जाण्याने मराठी कलासृष्टीने उमद्या कलावंताला गमावले आहे. pic.twitter.com/CVjESFYCkf
— Eknath Shinde - एकनाथ शिंदे (@mieknathshinde) August 9, 2022 " class="align-text-top noRightClick twitterSection" data="
">मराठी रंगभूमीवरील मोरूची मावशी, बायको असून शेजारी, लग्नाची बेडी तसेच मराठी चित्रपटसृष्टीत आपल्या सहजसुंदर अभिनयाने रसिक प्रेक्षकांच्या हृदयावर अधिराज्य गाजवणारे सदाबहार अभिनेते प्रदीप पटवर्धन यांचे दुःखद निधन झाले. त्यांच्या जाण्याने मराठी कलासृष्टीने उमद्या कलावंताला गमावले आहे. pic.twitter.com/CVjESFYCkf
— Eknath Shinde - एकनाथ शिंदे (@mieknathshinde) August 9, 2022मराठी रंगभूमीवरील मोरूची मावशी, बायको असून शेजारी, लग्नाची बेडी तसेच मराठी चित्रपटसृष्टीत आपल्या सहजसुंदर अभिनयाने रसिक प्रेक्षकांच्या हृदयावर अधिराज्य गाजवणारे सदाबहार अभिनेते प्रदीप पटवर्धन यांचे दुःखद निधन झाले. त्यांच्या जाण्याने मराठी कलासृष्टीने उमद्या कलावंताला गमावले आहे. pic.twitter.com/CVjESFYCkf
— Eknath Shinde - एकनाथ शिंदे (@mieknathshinde) August 9, 2022
ರಂಗಭೂಮಿ ಹಿನ್ನೆಲೆಯಿರುವ ಪ್ರದೀಪ್ ಪಟವರ್ಧನ್ ಪ್ರತಿಭಾವಂತ ಕಲಾವಿದರಾಗಿದ್ದರು. ಸಿನಿಮಾ ಮತ್ತು ಕಿರುತೆರೆ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಇವರು ಅನೇಕ ಬಾಲಿವುಡ್ ನಟರೊಂದಿಗೂ ಬಣ್ಣ ಹಚ್ಚಿದ್ದರು.
ಇದನ್ನೂ ಓದಿ: ಚಿತ್ರ ನಿರ್ಮಾಪಕ ಭರತ್ಗೆ ಧಮ್ಕಿ ಆರೋಪ.. ನಟ ದರ್ಶನ್ ವಿರುದ್ಧ ದೂರು
ಪ್ರದೀಪ್ ಪಟವರ್ಧನ್ ನಿಧನಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಂತಾಪ ಸೂಚಿಸಿ, ಮನೋಜ್ಞ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದ ಎವರ್ ಗ್ರೀನ್ ನಟ ಪ್ರದೀಪ್ ಪಟವರ್ಧನ್ ಅಗಲಿಕೆಯಿಂದ ಮರಾಠಿ ಚಿತ್ರರಂಗ ಓರ್ವ ಮಹಾನ್ ಕಲಾವಿದನನ್ನು ಕಳೆದುಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಟ್ವೀಟ್ ಮಾಡಿ, ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.