ETV Bharat / entertainment

ಅನಾರೋಗ್ಯದ ಮಧ್ಯೆ 'ಕನ್ನಡ' ಫಿಲ್ಮ್​ ಚೇಂಬರ್​ನಲ್ಲಿ ಧ್ವಜಾರೋಹಣ ನೆರವೇರಿಸಿದ ನಟಿ ಲೀಲಾವತಿ - etv bharat kannada

Leelavathi hoists kannada flag in film chamber: ಹಿರಿಯ ನಟಿ ಲೀಲಾವತಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ಧ್ವಜಾರೋಹಣ ಮಾಡಿದ್ದಾರೆ.

veteran Actress Leelavathi hoists kannada flag in film chamber
ನಟಿ ಲೀಲಾವತಿ
author img

By ETV Bharat Karnataka Team

Published : Nov 1, 2023, 3:30 PM IST

Updated : Nov 1, 2023, 5:34 PM IST

ಅನಾರೋಗ್ಯದ ಮಧ್ಯೆ 'ಕನ್ನಡ' ಫಿಲ್ಮ್​ ಚೇಂಬರ್​ನಲ್ಲಿ ಧ್ವಜಾರೋಹಣ ನೆರವೇರಿಸಿದ ನಟಿ ಲೀಲಾವತಿ

ಇಂದು ಕರ್ನಾಟಕದಲ್ಲಿ 'ರಾಜ್ಯೋತ್ಸವ'ದ ಸಂಭ್ರಮ ಮನೆ ಮಾಡಿದೆ. ಕನ್ನಡ ಚಿತ್ರರಂಗದ ಅಂಗ ಸಂಸ್ಥೆಯಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುವರ್ಣ ವರ್ಷವನ್ನು ಆಚರಿಸಲಾಯಿತು. ಫಿಲ್ಮ್​ ಚೇಂಬರ್​ ಅಧ್ಯಕ್ಷ ಎನ್​.ಎಂ ಸುರೇಶ್​, ಉಪಾಧ್ಯಕ್ಷೆ ಪ್ರಮೀಳಾ ಜೋಷಾಯ್, ನಿರ್ಮಾಪಕರ ಸಂಘದ ಉಮೇಶ್ ಬಣಕಾರ್, ಕಾರ್ಯದರ್ಶಿ ಭಾ.ಮಾ ಗೀರಿಶ್ ಸಮ್ಮುಖದಲ್ಲಿ ಹಿರಿಯ ನಟಿ ಅಭಿನೇತ್ರಿ ಲೀಲಾವತಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅವರಿಗೆ ಮಗ ವಿನೋದ್​ ರಾಜ್​​ ಸಾಥ್​ ನೀಡಿದರು.

ನೆಲಮಂಗಲದ ತೋಟದ ಮನೆಯಿಂದ ಅನಾರೋಗ್ಯದ ನಡುವೆಯೂ ಮಗ ವಿನೋದ್​ ರಾಜ್​ ಜೊತೆ ಲೀಲಾವತಿ ಅವರು ಫಿಲ್ಮ್​ ಚೇಂಬರ್​ಗೆ ಆಗಮಿಸಿದರು. ಮಗನ ಸಹಾಯದಿಂದ ವ್ಹೀಲ್​ ಚೇರ್​ನಲ್ಲಿ ಕುಳಿತು ಅವರು ಧ್ವಜಾರೋಹಣ ಮಾಡಿದ್ದು ಗಮನ ಸೆಳೆಯಿತು. ಲೀಲಾವತಿ ಅವರು ಕನ್ನಡ ಭಾಷೆಯಲ್ಲೇ ಸುಮಾರು 400ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬೇರೆ ಭಾಷೆ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ 50ರ ಸಂಭ್ರಮವಾದ್ರೂ, ಕನ್ನಡ ಭಾಷೆ ಮಾತ್ರ ಬೆಳವಣಿಗೆಯಾಗಿಲ್ಲ: ಮುಖ್ಯಮಂತ್ರಿ ಚಂದ್ರು

ಧ್ವಜಾರೋಹಣದ ಬಳಿಕ ಮಾತನಾಡಿದ ಲೀಲಾವತಿ ಮಗ ವಿನೋದ್​ ರಾಜ್​, "ಈ ಕಾರ್ಯಕ್ರಮಕ್ಕೆ ಅಮ್ಮ ಆಸೆಪಟ್ಟು ಬಂದಿದ್ದಾರೆ. ಅಮ್ಮ 500 ರೂಪಾಯಿಯಿಂದ 1,000 ರೂ. ಸಂಭಾವನೆ ಪಡೆದು ಕೆಲಸ ಮಾಡಿದ್ದಾರೆ. ಸಿನಿಮಾಗಳಿಗೆ ಪ್ರೊಡ್ಯೂಸರ್​ ನಮ್ಮ ತಾಯಿಗೆ ಅವಕಾಶ ಕೊಟ್ಟಿಲ್ಲ ಅಂದ್ರೆ ಅವರು ಬೇಸರ ಪಟ್ಟುಕೊಳ್ಳುತ್ತಿದ್ದರು. ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಈ ಮಟ್ಟಕ್ಕೆ ಬೆಳೆದಿದೆ ಅಂದ್ರೆ ಅದಕ್ಕೆ ನಿರ್ಮಾಪಕರೇ ಕಾರಣ. ಎಲ್ಲ ಹುದ್ದೆಯಲ್ಲೂ ನಿವೃತ್ತಿ ಹೊಂದಿದ್ದ ಮೇಲೆ ಪಿಂಚಣಿ ಕೊಡುತ್ತಾರೆ. ಆದರೆ ಕಲಾವಿದರಿಗೆ, ವಿತರಕರಿಗೆ, ನಿರ್ಮಾಪಕರಿಗೆ ಪೆನ್​ಶನ್​ ಅನ್ನೋದು ಇಲ್ಲ. ಹಾಗಾಗಿ ಸರ್ಕಾರವು ಚಿತ್ರೋದ್ಯಮದ ಕಲಾವಿದರಿಗೆ ಏನಾದರೂ ಸಹಾಯ ಮಾಡಬೇಕು ಎಂದು ಈ ಸಂದರ್ಭದಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ" ಎಂದರು.

"ಈ ಪ್ರಾಯದಲ್ಲೂ ನನ್ನ ತಾಯಿಗೆ ಇರುವ ಸ್ಪಿರಿಟಿ ಎಲ್ಲರಿಗೂ ಬರಲಿ. ಮೈಸೂರು ದಸರಾದಲ್ಲಿ ಶಿವಣ್ಣ ಅವರನ್ನು ಭೇಟಿ ಆಗಿರುವುದು ಒಂದು ಸಂತಸದ ಕ್ಷಣ. ಆಕಸ್ಮಿಕವಾಗಿ ಅವರು ಸಿಕ್ಕಿದ್ದು. ಕೆಲ ಸಮಯ ಅವರೊಂದಿಗೆ ಮಾತನಾಡಿದೆವು. ಅವರು ತುಂಬಾ ಲವಲವಿಕೆಯಿಂದ ಇರುತ್ತಾರೆ. ಅವರನ್ನು ನೋಡಿದಾಗ ವಯಸ್ಸೇ ಆಗಲ್ವೇನೋ ಅನಿಸುತ್ತೆ. ಅವರು ನನ್ನಲ್ಲಿ ತಾಯಿಯ ಆರೋಗ್ಯವನ್ನು ವಿಚಾರಿಸಿದರು. ಒಂದು ಕಾಲದಲ್ಲಿ ಹೆಸರು ಇತ್ತು. ನಮ್ಮಲ್ಲಿ ದುಡ್ಡು ಇರಲಿಲ್ಲ. ಎಷ್ಟೋ ಬಾರಿ ಊಟಕ್ಕೆ ಹಣವಿಲ್ಲದೇ ಹಾಗೆಯೇ ಹಸಿದುಕೊಂಡು ಮಲಗಿದ್ದುಂಟು" ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವ 2023: ಶಿವಣ್ಣ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರಿಂದ​ ನಾಡಿನ ಜನತೆಗೆ ಶುಭಾಶಯ

Last Updated : Nov 1, 2023, 5:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.