ಜನವರಿ 12ರಂದು ಚಿತ್ರ ಮಂದಿರಗಳಲ್ಲಿ ತೆರೆ ಕಂಡ 'ವೀರಸಿಂಹ ರೆಡ್ಡಿ' ಚಿತ್ರ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. 2023ರ ಸಂಕ್ರಾಂತಿ ಸಂದರ್ಭ ರಿಲೀಸ್ ಆದ ಈ ಚಿತ್ರ ಸೂಪರ್ ಹಿಟ್ ಆಗುವ ಮೂಲಕ ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರಿಗೆ ಮತ್ತೊಂದು ಗೆಲುವನ್ನು ತಂದುಕೊಟ್ಟಿದೆ.
- " class="align-text-top noRightClick twitterSection" data="
">
ತೆಲುಗು ಚಲನಚಿತ್ರೋದ್ಯಮದಲ್ಲಿ ಈ 'ವೀರಸಿಂಹ ರೆಡ್ಡಿ' ಸಿನಿಮಾವನ್ನು 2023ರ ಯಶಸ್ವಿ ಚಿತ್ರವೆಂದು ಪರಿಗಣಿಸಲಾಗಿದೆ. ಇದು ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಟ್ ಚಲನಚಿತ್ರವು ಇದೇ ಫೆಬ್ರವರಿ 27ರಂದು ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಲಿದೆ. ಇಂದು ಸಂಜೆ 6 ಗಂಟೆಗೆ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ.
ವೀರಸಿಂಹ ರೆಡ್ಡಿ ಕಲೆಕ್ಷನ್: ವೀರಸಿಂಹ ರೆಡ್ಡಿ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡುವುದಾದರೆ, ನಟ ನಂದಮೂರಿ ಬಾಲಕೃಷ್ಣ ಅವರ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಆಗಿದೆ. 100 ಕೋಟಿ ರೂ. ಬಜೆಟ್‌ನಲ್ಲಿ ಈ ಚಿತ್ರ ತಯಾರಾಗಿದೆ. ಭಾರತದಲ್ಲಿ 113.97 ಕೋಟಿ ರೂ. ಮತ್ತು ವಿದೇಶದಲ್ಲಿ 15 ಕೋಟಿ ರೂ. ಸೇರಿ ಒಟ್ಟು 128.97 ಕೋಟಿ ರೂಪಾಯಿ ಗಳಿಸಿದೆ. ಬಾಲಯ್ಯ ಅವರ ಹಿಂದಿನ ಚಿತ್ರ 'ಅಖಂಡ'ದ ದಾಖಲೆಯನ್ನು ಈ ಚಿತ್ರ ಮುರಿದಿದೆ. ಅಖಂಡ ಸಿನಿಮಾ 117 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಶ್ರುತಿ ಹಾಸನ್ ಚಿತ್ರದ ನಾಯಕಿ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಗೋಪಿಚಂದ್ ನಿರ್ದೇಶನದ ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಜೈ ಬಾಲಯ್ಯ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದರು. ಇನ್ನೂ ವರಲಕ್ಷ್ಮೀ ಶರತ್ ಕುಮಾರ್, ಹನಿ ರೋಸ್, ಲಾಲ್, ರವಿಶಂಕರ್, 'ಕೆಜಿಎಫ್' ಅವಿನಾಶ್ ಸೇರಿದಂತೆ ಸಾಕಷ್ಟು ಮಂದಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
'ವೀರಸಿಂಹ ರೆಡ್ಡಿ' ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಕನ್ನಡದ ದುನಿಯಾ ವಿಜಯ್ ನಟಿಸಿದ್ದಾರೆ. ಪಾತ್ರ ಕೊಟ್ಟ ನಿರ್ದೇಶಕ ಗೋಪಿಚಂದ್ ಹಾಗೂ ನಟ ಬಾಲಕೃಷ್ಣ ಅವರಿಗೆ ಕೆಲ ದಿನಗಳ ಹಿಂದೆ ದುನಿಯಾ ವಿಜಯ್ ಧನ್ಯವಾದ ಅರ್ಪಿಸಿದ್ದರು. ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಖಡಕ್ ವಿಲನ್ ಪಾತ್ರ ಮಾಡಿರೋ ವಿಜಯ್ ಲುಕ್ ಕೂಡ ಬಹಳ ವಿಭಿನ್ನವಾಗಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: 'ಗುಡ್ ಮಾರ್ನಿಂಗ್ ಅಮೆರಿಕ ಶೋ'ನಲ್ಲಿ ಆರ್ಆರ್ಆರ್ ಸ್ಟಾರ್ ರಾಮ್ ಚರಣ್
ಇನ್ನೂ ಟಾಲಿವುಡ್ ತಂಡ ತೋರಿದ ಪ್ರೀತಿ ಅಪಾರ. ಅವರಿಗೆ ಕನ್ನಡ ಮಾಧ್ಯಮಗಳ ಮೂಲಕ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ವೀರ ಸಿಂಹ ರೆಡ್ಡಿ ಖಂಡಿತವಾಗಿಯೂ ಸೂಪರ್ ಹಿಟ್ ಆಗಲಿದೆ. ಗೋಪಿಚಂದ್ ಅಷ್ಟರ ಮಟ್ಟಿಗೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಾಲಯ್ಯ ಅವರು ಚಿತ್ರದ ಶಕ್ತಿ ಎಂದು ವಿಜಯ್ ತಿಳಿಸಿದ್ದರು.
ಇದನ್ನೂ ಓದಿ: 'ಪ್ರಭಾಸ್ - ಕೃತಿ ನಟನೆ ಪ್ರೇಕ್ಷಕರನ್ನು ತಲುಪಲಿದೆ': ಆದಿಪುರುಷ್ ಎಡಿಟರ್ ಆಶಿಶ್ ವಿಶ್ವಾಸ