ಭಜರಂಗಿ 2 ಸಿನಿಮಾ ನಂತರ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅಭಿನಯದ ಹೈ ವೋಲ್ಟೇಜ್ ಚಿತ್ರ ವೇದ. ಪೋಸ್ಟರ್ಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ವೇದ ಚಿತ್ರ ಡಿಸೆಂಬರ್ 23ಕ್ಕೆ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದೆ. ಹರ್ಷ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಹೌದು, ನವೆಂಬರ್ 11ಕ್ಕೆ ವೇದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಈಗಾಗಲೇ ರಿವೀಲ್ ಆಗಿರೋ ವೇದ ಸಿನಿಮಾದ ಪೋಸ್ಟರ್ಗಳು ಶಿವ ರಾಜ್ಕುಮಾರ್ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿವೆ. ಕೈಯಲ್ಲಿ ಮಚ್ಚು ಹಿಡಿದು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಶಿವಣ್ಣ.
ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಹರ್ಷ ಜೋಡಿಯ 4ನೇ ಚಿತ್ರವಾಗಿದ್ದು, ಇದರಲ್ಲಿ ಶಿವ ರಾಜ್ಕುಮಾರ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವ ರಾಜ್ಕುಮಾರ್ ಜೊತೆಗೆ ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಹಾಗೂ ಅನುಪಮಾ, ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ನಟಿಸಿದ್ದಾರೆ. ಪೋಸ್ಟರ್ ಅನ್ನು ಕಿಚ್ಚಿನ ನಡುವೆ ರೂಪಿಸಲಾಗಿದ್ದು, ಅದಾಗ್ಯೂ ಚಿತ್ರಕಥೆ ಹೇಗೆ ಸಾಗಲಿದೆ ಎಂಬುದರ ಬಗ್ಗೆ ನಿರ್ದೇಶಕರು ಯಾವುದೇ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ಅಭಿಮಾನಿಗಳ ಆಟೋರಾಜ ಶಂಕ್ರಣ್ಣರ ಜನ್ಮದಿನ.. ಸಾಂಗ್ಲಿಯಾನ 2 ರೀ ರಿಲೀಸ್
ಇನ್ನು, ಚಿತ್ರವನ್ನು ಝೀ ಸ್ಟುಡಿಯೋಸ್ ಜೊತೆಗೂಡಿ ಗೀತಾ ಸ್ಟುಡಿಯೋಸ್ ಮೂಲಕ ಗೀತಾ ಶಿವ ರಾಜ್ಕುಮಾರ್ ನಿರ್ಮಿಸುತ್ತಿದ್ದಾರೆ. ಇದೇ ಕಥೆಯ ಮೂಲಕ ಗೀತಾ ಶಿವ ರಾಜ್ಕುಮಾರ್ ನಿರ್ಮಾಪಕಿಯಾಗಲಿದ್ದಾರೆ. ಡಿಸೆಂಬರ್ 23ಕ್ಕೆ ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಲಿದೆ ಈ ವೇದ ಸಿನಿಮಾ.
ಇದನ್ನೂ ಓದಿ: ಶಿವಣ್ಣನ 125ನೇ ಸಿನಿಮಾ 'ವೇದ' ಬಿಡುಗಡೆಗೆ ಮುಹೂರ್ತ ಫಿಕ್ಸ್