ETV Bharat / entertainment

ಮಕರ ಸಂಕ್ರಾಂತಿಯಂದೇ ವಸಿಷ್ಠ ಸಿಂಹ ನಟನೆಯ ಹೊಸ ಸಿನಿಮಾ‌ ಅನೌನ್ಸ್​​​​

author img

By ETV Bharat Karnataka Team

Published : Jan 15, 2024, 10:24 PM IST

ಬಹುನಿರೀಕ್ಷಿತ ಲವ್ ಲಿ ಸಿನಿಮಾದ ಬಿಡುಗಡೆಯಲ್ಲಿ ಬ್ಯುಸಿಯಾಗಿರುವ ವಸಿಷ್ಠ ಸಿಂಹ ಅವರ ಮತ್ತೊಂದು ಹೊಸ ಸಿನಿಮಾ‌ ಅನೌನ್ಸ್​​ ಆಗಿದೆ.

ವಸಿಷ್ಠ ಸಿಂಹ
ವಸಿಷ್ಠ ಸಿಂಹ

ಹೊಸ ವರ್ಷದ ಆರಂಭದಲ್ಲಿ ಬರುವ ಮೊದಲ ಹಬ್ಬ ಮಕರ ಸಂಕ್ರಾಂತಿ. ಈ ಹಬ್ಬದೊಂದು ಸ್ಯಾಂಡಲ್ ವುಡ್​ನಲ್ಲಿ ಹೊಸ ಚಿತ್ರಗಳು, ಹೊಸ‌ ಸಿನಿಮಾಗಳು ಅನೌನ್ಸ್​ ಆಗುತ್ತವೆ. ಅದೇ ರೀತಿ ತಮ್ಮ ಅಮೋಘ ಅಭಿನಯ ಹಾಗೂ ಕಂಚಿನ ಕಂಠದ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ವಸಿಷ್ಠ ಸಿಂಹ ಲವ್ ಲೀ ಚಿತ್ರ ಬಿಡುಗಡೆ ಖುಷಿಯಲ್ಲಿದ್ದಾರೆ‌. ಈ ಮಧ್ಯೆ ವಸಿಷ್ಠ ಸಿಂಹ ನಟನೆಯ ವಿಐಪಿ ಎಂಬ ಹೊಸ ಸಿನಿಮಾ‌ ಪ್ರಕಟ ಆಗಿದೆ. ಹಾಗೇ ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ ಈ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿದೆ.

ಕಲಾ ಸೃಷ್ಟಿ ಪ್ರೊಡಕ್ಷನ್ಸ್ ನಿರ್ಮಾಣದ, ಬ್ರಹ್ಮ ನಿರ್ದೇಶನದ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ. ಮತ್ತೊಂದು ವಿಶೇಷವೆಂದರೆ "ವಿಐಪಿ" ಅಭಿಮಾನಿಗಳು ವಸಿಷ್ಠ ಸಿಂಹ ಅವರಿಗೆ ರಾಯಲ್ ಸ್ಟಾರ್ ಎಂಬ ಬಿರುದು ನೀಡಿದ್ದಾರೆ. ವಸಿಷ್ಠ ಸಿಂಹ ಈ ಚಿತ್ರದಿಂದ ರಾಯಲ್ ಸ್ಟಾರ್ ವಸಿಷ್ಠ ಸಿಂಹ ಆಗಿ ಮಿಂಚಲಿದ್ದಾರೆ.

ಕ್ರೈಮ್ ಥ್ರಿಲ್ಲರ್ ಹಾಗೂ ರಿವೆಂಜ್ ಕಥಾಹಂದರ ಹೊಂದಿರುವ ಈ ಚಿತ್ರ ಹಾಲಿವುಡ್ ಸ್ಟೈಲ್ ನಲ್ಲಿ (ನಾನ್ ಲೀನಿಯರ್ ಸ್ಕ್ರೀನ್ ಪ್ಲೇ) ಮೇಕಿಂಗ್ ಇರಲಿದೆ. ಮೋಹನ್ ಕುಮಾರ್ "ವಿಐಪಿ" ಚಿತ್ರಕ್ಕೆ ಕಥೆ ಬರೆದಿದ್ದಾರೆ. ರಾಜೀವ್ ಗಣೇಶನ್ ಚಿತ್ರಕಥೆ ಬರೆದು ಛಾಯಾಗ್ರಾಹಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಕೆಜಿಎಫ್ ಖ್ಯಾತಿಯ ವಿಕ್ರಮ್ ಮೋರ್ ಸಾಹಸ ನಿರ್ದೇಶನ ಚಿತ್ರದಲ್ಲಿರಲಿದೆ.

ಕಲಾಸೃಷ್ಠಿ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಈ ಚಿತ್ರಕ್ಕೆ ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಗಿಣಿ ಅಭಿನಯದ "ಸಾರಿ" ಕರ್ಮ ರಿಟರ್ನ್ಸ್ ಚಿತ್ರದ ನಿರ್ದೇಶಕ ಬ್ರಹ್ಮ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬೆಂಗಳೂರಿನ ಸುತ್ತಮುತ್ತಾ ವಿಐಪಿ ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ಬಿರುಸಿನಿಂದ ಸಾಗಿದೆ. ಕೊಡಗು, ಸಕಲೇಶಪುರದಲ್ಲೂ ಚಿತ್ರೀಕರಣ ನಡೆಯಲಿದೆ.

ಬ್ಯುಸಿಯಾದ ವಸಿಷ್ಠ ಸಿಂಹ : ವಿಭಿನ್ನ ಪಾತ್ರಗಳು, ಉತ್ತಮ ಅಭಿನಯ ಮತ್ತು ಅತ್ಯುತ್ತಮ ಕಂಠಸಿರಿ ಮೂಲಕ ಕನ್ನಡ ಚಿತ್ರರಂಗ ಅಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಮಿಂಚುತ್ತಿರುವ ನಟ ವಸಿಷ್ಠ ಸಿಂಹ. ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಹರಿಪ್ರಿಯಾ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿರುವ ಸಿಂಹ ಬ್ಯಾಕ್ ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.‌ ಸದ್ಯ ಬಹುನಿರೀಕ್ಷಿತ ಲವ್ ಲಿ ಸಿನಿಮಾದ ಗುಂಗಿನಲ್ಲಿದ್ದಾರೆ.

ಇದನ್ನೂ ಓದಿ : ಡಾಲಿ ಜೊತೆ ಮತ್ತೆ ಕೈ ಜೋಡಿಸಿದ ನಾಗಭೂಷಣ್.. ಸಂಕ್ರಾಂತಿ ಹಬ್ಬಕ್ಕೆ ವಿದ್ಯಾಪತಿ ಫಸ್ಟ್ ಲುಕ್ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.