ETV Bharat / entertainment

ದಕ್ಷಿಣ ಚಿತ್ರರಂಗದತ್ತ ಬಾಲಿವುಡ್​ ಮಂದಿಯ ಒಲವು: ಅಟ್ಲೀ ಜೊತೆ ಕೈ ಜೋಡಿಸಿದ ವರುಣ್ ಧವನ್​! - ವರುಣ್ ಧವನ್ ಲೇಟೆಸ್ಟ್ ನ್ಯೂಸ್

ವರುಣ್ ಧವನ್ ಮತ್ತು ಅಟ್ಲೀ ಕಾಂಬಿನೇಶನ್​ನಲ್ಲಿ ಆ್ಯಕ್ಷನ್​​​ ಸಿನಿಮಾ ನಿರ್ಮಾಣ ಆಗಲಿದೆ. ಕಲೀಸ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎನ್ನುವ ಮಾಹಿತಿ ಇದೆ.

varun with atlee
ಅಟ್ಲೀ ನಿರ್ದೇಶನದಲ್ಲಿ ವರುಣ್​ ಧವನ್​ ಸಿನಿಮಾ
author img

By

Published : Jul 26, 2023, 2:26 PM IST

Updated : Jul 26, 2023, 8:03 PM IST

ಬಾಲಿವುಡ್ ನಟ ವರುಣ್ ಧವನ್ ಅವರ 'ಬವಾಲ್'​ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದೆ. ಜಾನ್ವಿ ಕಪೂರ್ ಜೊತೆಗೆ ಕಾಣಿಸಿಕೊಂಡಿರುವ 'ಬವಾಲ್' ಯಶಸ್ಸಿನಲ್ಲಿ ಬಾಲಿವುಡ್​ ನಟ ಮುಳುಗಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಚಿತ್ರವು ಅಜಯ್ ದೀಕ್ಷಿತ್ (ವರುಣ್ ಧವನ್) ಮತ್ತು ನಿಶಾ (ಜಾನ್ವಿ ಕಪೂರ್) ಅವರ ಪ್ರೇಮಕಥೆಯನ್ನು ಚಿತ್ರಿಸಿದೆ. ಚಿತ್ರದಲ್ಲಿನ ಕೆಲವು ಸೀಕ್ವೆನ್ಸ್‌ಗಾಗಿ ಟೀಕೆಗಳನ್ನು ಸ್ವೀಕರಿಸಿದರೂ, 'ಬವಾಲ್' ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರಿಂದ ಸಾಕಷ್ಟು ಪ್ರೀತಿ ಗಳಿಸಿದೆ.

ಅಟ್ಲೀ ಜೊತೆ ವರುಣ್​​ ಸಿನಿಮಾ: ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ವರುಣ್ ಧವನ್​​ ಸಂದರ್ಶನಕ್ಕೆ ಸಮಯ ಮೀಸಲಿಟ್ಟಿದ್ದಾರೆ. ಬವಾಲ್ ಸಹ ನಟಿ ಜಾನ್ವಿ ಕಪೂರ್ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರೊಂದಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಸಂಭಾಷಣೆ ಸಮಯದಲ್ಲಿ ನಟ ತಮ್ಮ ಮುಂದಿನ ಚಿತ್ರಗಳ ಕುರಿತು ಸುಳಿವು ಬಿಟ್ಟುಕೊಟ್ಟರು. ತಾತ್ಕಾಲಿಕವಾಗಿ 'VD 18' ಎಂದು ಹೆಸರಿಸಲಾಗುತ್ತಿರುವ ನಟನ ಮುಂದಿನ ಸಿನಿಮಾವನ್ನು ಜವಾನ್ ನಿರ್ದೇಶಕ ಅಟ್ಲೀ ಕುಮಾರ್​ ನಿರ್ಮಾಣ ಮಾಡಲಿದ್ದಾರೆ.

'VD 18'....: ಸಂದರ್ಶನದ ಸಂದರ್ಭದಲ್ಲಿ ಮುಂಬರುವ 'VD 18' ಪ್ರಾಜೆಕ್ಟ್ ಬಗ್ಗೆ ವರುಣ್​ ಧವನ್​ ಅವರಿಗೆ ಪ್ರಶ್ನೆ ಎದುರಾಯಿತು. "ನಾನು ಹೆಚ್ಚಿನ ವಿಷಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ಆದರೆ, ಇದು ಬಹಳ ರೋಮಾಂಚನಕಾರಿಯಾಗಿದೆ" ಎಂದು ತಿಳಿಸಿದರು. ಮಾತು ಮುಂದುವರಿಸಿ, "ಇದು ಮಾಸ್-ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಎಂದು ನಾನು ಹೇಳಬಲ್ಲೆ. ಜೊತೆಗೆ, ಸಿನಿಮಾ ಮನರಂಜನೆಯನ್ನೂ ಒಳಗೊಂಡಿದೆ. ನಾನು ಪಡೆದಿರುವ ಎಲ್ಲವನ್ನೂ ಸಿನಿಮಾ ಮೂಲಕ ನಾನು ನೀಡಲಿದ್ದೇನೆ" ಎಂದು ತಿಳಿಸಿದರು.

2023ರ ಮೇ ತಿಂಗಳಿನಲ್ಲೇ ಅಟ್ಲೀ ಜೊತೆ ವರುಣ್ ಸಿನಿಮಾ ಮಾಡುವ ವಿಚಾರ ಹೊರಬಿದ್ದಿತು. ಜುಲೈ 2ರಂದು ನಟ ಇನ್​ಸ್ಟಾಗ್ರಾಮ್​ನಲ್ಲಿ ಹೆಸರಿಡದ ಚಿತ್ರದ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುವ ಸ್ಟೋರಿ ಶೇರ್ ಮಾಡಿದ್ದರು. ಅದರಲ್ಲಿ ಆ್ಯಕ್ಷನ್​ ಎಂಟರ್​ಟೈನ್​ಮೆಂಟ್​ ಸಿನಿಮಾಗಾಗಿ ದಕ್ಷಿಣ ಚಿತ್ರರಂಗದ ಸ್ಟಾರ್ ಡೈರೆಕ್ಟರ್, ನಿರ್ಮಾಪಕ ಅಟ್ಲೀ ಮತ್ತು ನಿರ್ಮಾಪಕ ಮುರದ್ ಖೇತಾನಿ ಅವರೊಂದಿಗೆ ಕೈ ಜೋಡಿಸಿರುವುದಾಗಿ ಖಚಿತಪಡಿಸಿದ್ದರು.

ಇದನ್ನೂ ಓದಿ: ರಾಕಿ ರಾಣಿ ಲವ್​ ಸ್ಟೋರಿ: ಆಲಿಯಾಗೆ ಸಪೋರ್ಟ್ ಮಾಡಲು ಬಂದ ರಣ್​ಬೀರ್​-ರಣ್​ವೀರ್ ಜೊತೆ ದೀಪಿಕಾ ಇರಬೇಕಿತ್ತೆಂದ ಫ್ಯಾನ್ಸ್

ವರದಿಗಳ ಪ್ರಕಾರ, ಕಥೆಯು ಭಾವನಾತ್ಮಕ ವಿಷಯವನ್ನಾಧರಿಸಿದೆ. ಆದರೆ ಆ್ಯಕ್ಷನ್ ಸೀನ್​ಗಳು ಹೆಚ್ಚಿರಲಿದೆ. ಚಿತ್ರ ತಂಡವು ವರುಣ್‌ ಅವರನ್ನು ವಿಭಿನ್ನವಾಗಿ ತೋರಿಸಲು ಎದುರು ನೋಡುತ್ತಿದೆ. 2024ರ ಬೇಸಿಗೆ ಸಂದರ್ಭ ವಿಶ್ವದಾದ್ಯಂತ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಲಾಗಿದೆ. ನಾಲ್ಕರಿಂದ ಐದು ತಿಂಗಳ ಅವಧಿಯಲ್ಲಿ ಶೂಟಿಂಗ್​ ಪೂರ್ಣಗೊಳಿಸುವ ಗುರಿಯನ್ನೂ ಕೂಡ ಹೊಂದಲಾಗಿದೆ.

ಇದನ್ನೂ ಓದಿ: ವದಂತಿಗಳಿಗೆ ಬ್ರೇಕ್​.. ತಮನ್ನಾ ಭಾಟಿಯಾ ಕೈಯಲ್ಲಿರುವುದು ವಜ್ರದ ಉಂಗುರವಲ್ಲವಂತೆ..!​

'VD 18' ಅನ್ನು ಅಟ್ಲೀ ಮತ್ತು ಮುರದ್ ಖೇತಾನಿ ಅವರು ನಿರ್ಮಾಣ ಮಾಡಲಿದ್ದಾರೆ. ಕಲೀಸ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಸದ್ಯ ನಿರ್ದೇಶಕ ಅಟ್ಲೀ ಕುಮಾರ್ ಅವರು ಶಾರುಖ್ ಖಾನ್ ನಟನೆಯ ಜವಾನ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜವಾನ್ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಜವಾನ್​​ ಸೆಪ್ಟೆಂಬರ್ 7 ರಂದು ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ.

Last Updated : Jul 26, 2023, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.