ETV Bharat / entertainment

ತೆರೆ ಮೇಲೆ ಬರಲಿದೆ ಶ್ರೀ ವಾದಿರಾಜ ಸ್ವಾಮಿಗಳ ಜೀವನಾಧಾರಿತ ಕಥೆ - Vadiraja Swami

ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಜೀವನಾಧಾರಿತ ಬಯೋಪಿಕ್​ ನಿರ್ಮಾಣವಾಗಲಿದೆ.

Vadiraja Swami biopic
ಶ್ರೀ ವಾದಿರಾಜ ಸ್ವಾಮಿಗಳ ಜೀವನಾಧಾರಿತ ಕಥೆ
author img

By

Published : Feb 3, 2023, 7:11 PM IST

ಯಶಸ್ಸಿನ ಹಾದಿಯಲ್ಲಿರುವ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಥೆ ಮತ್ತು ಮೇಕಿಂಗ್​ ಇರುವ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಪ್ಯಾನ್​ ಇಂಡಿಯಾ ಸಿನಿಮಾಗಳು ಮಾತ್ರವಲ್ಲದೇ ನೈಜ ಘಟನೆಗಳು ಹಾಗು ಬಯೋಪಿಕ್ ಸ್ಟೋರಿಗಳ ಟ್ರೆಂಡ್ ಕೂಡ ಹೆಚ್ಚಾಗುತ್ತಿದೆ. ಅದರಂತೆ ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಜೀವನಾಧಾರಿತ ಸಿನಿಮಾ ಬರಲಿದೆ.

ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ ನಿರ್ದೇಶನ ಮಾಡಲಿರುವ ಹಯವದನ ಅವರೇ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ವಾದಿರಾಜ ಸ್ವಾಮಿಗಳ ಮಠದ ಶ್ರೀ ವಿಶ್ವವಲ್ಲಭ ತೀರ್ಥರ ಆಶೀರ್ವಾದೊಂದಿಗೆ ಸಿನಿಮಾ ಸೆಟ್ಟೇರಿದೆ. ವಾದಿರಾಜ ಗುರುಗಳ ಜಯಂತಿಯಂದೇ ಸ್ವಾಮೀಜಿಯ ಮಠ ಹೂವಿನಕೆರೆ ಕುಂದಾಪುರದಲ್ಲಿ ಸಿನಿಮಾ ಘೋಷಣೆ ಮಾಡಿದ್ದು, ವಿಶೇಷವಾಗಿತ್ತು.

ಈ ಬಗ್ಗೆ ನಿರ್ದೇಶಕ ಹಯವದನ ಮಾಹಿತಿ ಹಂಚಿಕೊಂಡಿದ್ದು, "ಸ್ಕ್ರಿಪ್ಟ್ ಹಾಗೂ ರಿಸರ್ಚ್ ವರ್ಕ್ ನಡೆಯುತ್ತಿದೆ. ಸಿನಿಮಾದ ತಾರಾಗಣ, ತಾಂತ್ರಿಕ ಬಳಗ ಇದ್ಯಾವುದೂ ಕೂಡ ಇನ್ನೂ ಫೈನಲ್ ಆಗಿಲ್ಲ. 15ನೇ ಶತಮಾನದಲ್ಲಿ ನಡೆದ ಕಥೆ ಇದು. ಶ್ರೀ ವಾದಿರಾಜ ಸ್ವಾಮಿಗಳು 120 ವರ್ಷಗಳು ಬದುಕಿದ್ದರು. ಆ ಕಾಲಘಟ್ಟವನ್ನು ಸೃಷ್ಟಿ ಮಾಡೋದೇ ಒಂದು ಚಾಲೆಂಜ್. ಸಿಜೆ ಗ್ರಾಫಿಕ್ಸ್ ಹೆಚ್ಚಾಗಿರುತ್ತದೆ. ಭಕ್ತಿ, ಸಮಾಜ ಸೇವೆ, ಮಾನವೀಯತೆ ಬಗ್ಗೆ ಸ್ವಾಮಿಗಳು ಹೇಳಿದ್ದಾರೆ. ಸಮಾಜ ಸುಧಾರಣೆ ಮಾಡಿದ್ದಾರೆ. 15ನೇ ಶತಮಾನದಲ್ಲಿ ಕೀರ್ತನೆಗಳನ್ನು ನೀಡಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಅಪಾರ. ಭಕ್ತಿ ಮತ್ತು ಗೌರವದಿಂದ ಅವರ ಕಥೆಯನ್ನು ತೆರೆ ಮೇಲೆ ತರುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

Vadiraja Swami biopic
ಹಯವದನ ನಿರ್ದೇಶನದಲ್ಲಿ ವಾದಿರಾಜ ಸ್ವಾಮಿಗಳ ಬಯೋಪಿಕ್

ವಿಶ್ವವಲ್ಲಭ ತೀರ್ಥರು ಮಾತನಾಡಿ, "ವಾದಿರಾಜ ಗುರುಗಳು 15,16ನೇ ಶತಮಾನದಲ್ಲಿ ಬಂದ ಮೇರು ವ್ಯಕ್ತಿ. ಈ ಜಗತ್ತಿಗೆ ಬಹುಮುಖ್ಯ ಸಂದೇಶ ನೀಡಿದವರು. ಅವರು 113 ವರ್ಷ ಸನ್ಯಾಸ ಜೀವನ ನಡೆಸಿದ್ದಾರೆ. ಅವರ 120 ವರ್ಷಗಳ ಜೀವನವನ್ನು ಒಂದು ಸಿನಿಮಾದಲ್ಲಿ ತೋರಿಸೋದು ಕಷ್ಟ ಸಾಧ್ಯ. ಈ ಹಿಂದೆ ಹಲವು ಜನರು ಗುರುಗಳ ಧಾರಾವಾಹಿ, ಸಿನಿಮಾ ಮಾಡೋದಾಗಿ ಬಂದಿದ್ದರು. ಆದರೆ ನಾವು ಒಪ್ಪಿಕೊಂಡಿರಲಿಲ್ಲ. ಒಬ್ಬ ಯೋಗ್ಯ ವ್ಯಕ್ತಿ ಬರಬೇಕು ಎಂದು ಕಾಯುತ್ತಿದ್ದೆವು. ಆಗ ಬಂದವರೇ ನಿರ್ದೇಶಕ ಹಯವದನ. ಅವರು ವಾದಿರಾಜ ಗುರುಗಳ ಭಕ್ತರು ಕೂಡ ಹೌದು. ಅವರಲ್ಲಿ ಅಪಾರ ಶ್ರದ್ಧೆ ಇದೆ. ಸಮಾಜಕ್ಕೆ ವಾದಿರಾಜರು ಯಾವ ರೀತಿ ಸಂದೇಶ ನೀಡಿದ್ದರು ಅನ್ನೋದನ್ನು ಸಿನಿಮಾದಲ್ಲಿ ತರಬೇಕು" ಎಂದು ಹೇಳಿದರು.

ಇದನ್ನೂ ಓದಿ: 'ಲಕ್ಷಾಂತರ ಸಣ್ಣ ಸಣ್ಣ ಕ್ಷಣಗಳ ಪ್ರೇಮಕಥೆ': ಮದ್ವೆ ಖುಷಿಯಲ್ಲಿ 'ವಿಜಯಾನಂದ' ನಟ, ನಿರ್ದೇಶಕಿ!

ವಿಕ್ರಮ್ ಹತ್ವಾರ್, ನಿರ್ದೇಶಕ ಹಯವದನ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಐದು ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಟೈಟಲ್, ತಾರಾಬಳಗ, ತಾಂತ್ರಿಕ ಬಳಗದ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ಸ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ಅಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಹಾಗೂ ಸ್ನೇಹಿತರು ಚಿತ್ರದ ನಿರ್ಮಾಣ ಸಾರಥ್ಯ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪೂಜಾ ಹೆಗ್ಡೆ ಸಹೋದರನ ಮದುವೆಗೆ ಮಂಗಳೂರಿಗೆ ಬಂದಿದ್ರು ಸಲ್ಮಾನ್​ ಖಾನ್​

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.