ಬೆಂಗಳೂರು: ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ನಟ ಮತ್ತು ರಾಜಕಾರಣಿ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಚುನಾವಣಾ ಆಯೋಗವು ಆಟೋ ರಿಕ್ಷಾವನ್ನು ಚಿಹ್ನೆಯಾಗಿ ಬಳಸುವಂತೆ ತಿಳಿಸಿದೆ. ಉಪೇಂದ್ರ ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ. "ನಾಯಕತ್ವ ಮತ್ತು ಜವಾಬ್ಧಾರಿ ವಹಿಸಿಕೊಳ್ಳಲು ಸಿದ್ಧರಿರುವ ಮತದಾರರ ಪಕ್ಷದ ಚಿಹ್ನೆ ಆಟೋ ರಿಕ್ಷಾ. ಇಲ್ಲಿ ಸ್ಪರ್ಧಿಸುತ್ತಿರುವವರಿಂದ ನೀವು ಕೆಲಸ ಮಾಡಿಸುತ್ತೀರಿ ಎಂಬ ತನ್ನಂಬಿಕೆ ನಿಮಗಿದ್ದರೆ ಮಾತ್ರ ಪ್ರಜಾಕೀಯಕ್ಕೆ ಮತ ನೀಡಿ" ಎಂದು ಬರೆದಿದ್ದಾರೆ.
-
ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್
— Upendra (@nimmaupendra) February 23, 2023 " class="align-text-top noRightClick twitterSection" data="
“ ಆಟೋ ರಿಕ್ಷಾ “ ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು 💐👍
Uttama Prajaakeeya party has got “Auto Riksha “ as common symbol for this Karnataka Assembly election 2023. Congratulations 💐 pic.twitter.com/RAQKU0TT8U
">ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್
— Upendra (@nimmaupendra) February 23, 2023
“ ಆಟೋ ರಿಕ್ಷಾ “ ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು 💐👍
Uttama Prajaakeeya party has got “Auto Riksha “ as common symbol for this Karnataka Assembly election 2023. Congratulations 💐 pic.twitter.com/RAQKU0TT8Uಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್
— Upendra (@nimmaupendra) February 23, 2023
“ ಆಟೋ ರಿಕ್ಷಾ “ ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು 💐👍
Uttama Prajaakeeya party has got “Auto Riksha “ as common symbol for this Karnataka Assembly election 2023. Congratulations 💐 pic.twitter.com/RAQKU0TT8U
ಇದನ್ನೂ ಓದಿ: 'ಪ್ಯಾರ್ ತೋ ಹೋನಾ ಹಿ ಥಾ, ಪ್ಯಾರ್ ತೋ ಹೈ': ಕಾಜೋಲ್ - ಅಜಯ್ 24ನೇ ವಿವಾಹ ವಾರ್ಷಿಕೋತ್ಸವ
ಈ ಸುದ್ದಿ ಗೊತ್ತಾಗುತ್ತಿದ್ದಂತೆ ಉಪೇಂದ್ರ ಅಭಿಮಾನಿಗಳು, ನೆಟಿಜನ್ಸ್, ರಾಜಕೀಯ ಯುವ ನಾಯಕರು ಸೇರಿದಂತೆ ಹಲವರು ಕಾಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ. ಕೆಲವರು ನಿರುತ್ಸಾಹ ತೋರಿಸಿ ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು ಹದಗೆಟ್ಟಿರುವ ರಾಜಕೀಯ ಪರಿಸ್ಥಿತಿಯ ಬದಲಾವಣೆಗೆ ಇಂತಹ ಪಕ್ಷ ಬರಬೇಕು ಎಂದು ಹೇಳಿದ್ದಾರೆ.
ನೆಟಿಜನ್ಸ್ ಒಬ್ಬರು, "Non recognized ಆಗಿರೋ ನಮ್ಮ UPP ಪಾರ್ಟಿ ಆದಷ್ಟು ಬೇಗ ಚುನಾವಣಾ ಆಯೋಗ ಗುರುತಿಸಿದ ಅಧಿಕೃತ ಪಾರ್ಟಿ ಆಗಲಿ ಅಂತ ದೇವರಲ್ಲಿ ಆಶಿಸೋಣ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ನಿಮ್ಮ ಆಗಮನದಿಂದ ರಾಜಕೀಯ ಸ್ಥಿತಿ ಬದಲಾಗಲಿ, ಎಲ್ಲರೂ ಸಹಕರಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ. ಮತ್ತೊಬ್ಬ ನೆಟಿಜನ್ಸ್, "ಆಟೋಗಿಂತ ಎತ್ತಿನ ಬಂಡಿ ಆಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು" ಎಂದು ಕಾಮೆಂಟ್ ಮಾಡಿದ್ದಾರೆ.
-
ನಾಯಕತ್ವ, ಜವಾಬ್ಧಾರಿ ವಹಿಸಿಕೊಳ್ಳಲು ರೆಡಿ ಇರುವ ಮತದಾರರ ಪಕ್ಷದ ಚಿಹ್ನೆ ಆಟೋರಿಕ್ಷಾ….
— Upendra (@nimmaupendra) February 24, 2023 " class="align-text-top noRightClick twitterSection" data="
ಇಲ್ಲಿ ಸ್ಪರ್ಧಿಸುತ್ತಿರುವವರಿಂದ ನೀವು ಕೆಲಸ ಮಾಡಿಸುತ್ತೀರಿ ಎಂಬ ತನ್ನಂಬಿಕೆ ನಿಮಗಿದ್ದರೆ ಮಾತ್ರ ಪ್ರಜಾಕೀಯಕ್ಕೆ ಮತ ನೀಡಿ… pic.twitter.com/KJz5ItuwlW
">ನಾಯಕತ್ವ, ಜವಾಬ್ಧಾರಿ ವಹಿಸಿಕೊಳ್ಳಲು ರೆಡಿ ಇರುವ ಮತದಾರರ ಪಕ್ಷದ ಚಿಹ್ನೆ ಆಟೋರಿಕ್ಷಾ….
— Upendra (@nimmaupendra) February 24, 2023
ಇಲ್ಲಿ ಸ್ಪರ್ಧಿಸುತ್ತಿರುವವರಿಂದ ನೀವು ಕೆಲಸ ಮಾಡಿಸುತ್ತೀರಿ ಎಂಬ ತನ್ನಂಬಿಕೆ ನಿಮಗಿದ್ದರೆ ಮಾತ್ರ ಪ್ರಜಾಕೀಯಕ್ಕೆ ಮತ ನೀಡಿ… pic.twitter.com/KJz5ItuwlWನಾಯಕತ್ವ, ಜವಾಬ್ಧಾರಿ ವಹಿಸಿಕೊಳ್ಳಲು ರೆಡಿ ಇರುವ ಮತದಾರರ ಪಕ್ಷದ ಚಿಹ್ನೆ ಆಟೋರಿಕ್ಷಾ….
— Upendra (@nimmaupendra) February 24, 2023
ಇಲ್ಲಿ ಸ್ಪರ್ಧಿಸುತ್ತಿರುವವರಿಂದ ನೀವು ಕೆಲಸ ಮಾಡಿಸುತ್ತೀರಿ ಎಂಬ ತನ್ನಂಬಿಕೆ ನಿಮಗಿದ್ದರೆ ಮಾತ್ರ ಪ್ರಜಾಕೀಯಕ್ಕೆ ಮತ ನೀಡಿ… pic.twitter.com/KJz5ItuwlW
ಹೊಸ ವಿಚಾರಧಾರೆಗಳನ್ನು ಇಟ್ಟುಕೊಂಡು ರಾಜಕೀಯಕ್ಕೆ ಧುಮುಕಿರುವ ಉಪೇಂದ್ರ ಅವರ ಮುಂದಾಳತ್ವದ ಉತ್ತಮ ಪ್ರಜಾಕೀಯ ಪಕ್ಷ ಇದಕ್ಕೂ ಮುನ್ನ ಹಲವು ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿತ್ತು. ಕೇವಲ ನೋಂದಣಿಯಾಗಿದ್ದ ಪಕ್ಷಕ್ಕೆ ಅಧಿಕೃತ ಚಿಹ್ನೆ ದೊರೆತಿರಲಿಲ್ಲ.
ಇದನ್ನೂ ಓದಿ: 'ಸುದೀಪ್, ಯಶ್ ಸರ್ ಜೊತೆ ನನ್ನ ಸ್ಪರ್ಧೆಯಿಲ್ಲ': ಮಾರ್ಟಿನ್ ಹೀರೋ ಧ್ರುವ ಸರ್ಜಾ