ETV Bharat / entertainment

ನಟ ದೇವರಾಜ್ ಹುಟ್ಟುಹಬ್ಬಕ್ಕೆ ಉಸಿರೇ ಉಸಿರೇ ಸಿನಿಮಾ ಟೀಮ್​​ನಿಂದ ಗಿಫ್ಟ್.. ಹೊಸ ಪೋಸ್ಟರ್ ರಿಲೀಸ್ - actor devraj

ಮಂಗಳವಾರ ಡೈನಾಮಿಕ್ ಹೀರೋ ದೇವರಾಜ್ ಹುಟ್ಟುಹಬ್ಬ ಆಚರಿಸಿದ್ದಾರೆ. ಉಸಿರೇ ಉಸಿರೇ ಚಿತ್ರ ತಂಡ ನಟ ದೇವರಾಜ್ ಹುಟ್ಟುಹಬ್ಬಕ್ಕೆ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್​ ಮೂಲಕ ದೇವರಾಜ್ ಬಿಳಿ ಗಡ್ಡದಲ್ಲಿ ನೋಡುಗರಿಗೆ ಅಚ್ಚರಿ ಮೂಡಿಸಿದ್ದಾರೆ.

Usire Usire movie new poster released yesterday
ನಟ ದೇವರಾಜ್ ಕುರಿತ ಪೋಸ್ಟರ್ ರಿಲೀಸ್ ಮಾಡಿದ ಉಸಿರೇ ಉಸಿರೇ ಚಿತ್ರತಂಡ
author img

By

Published : Sep 21, 2022, 7:01 PM IST

ಬಿಗ್ ಬಾಸ್ ಖ್ಯಾತಿಯ ರಾಜೀವ್ ನಾಯಕರಾಗಿ ನಟಿಸುತ್ತಿರುವ ಉಸಿರೇ ಉಸಿರೇ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಡೈನಾಮಿಕ್ ಹೀರೋ ದೇವರಾಜ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಅಪ್ಪ, ಊರಿನ‌ ಯಜಮಾನ, ಪೊಲೀಸ್ ಪಾತ್ರಗಳಲ್ಲಿ ಹೆಚ್ಚು ಗಮನ ಸೆಳೆದಿರುವ ನಟ ದೇವರಾಜ್ ಈ ಉಸಿರೇ ಉಸಿರೇ ಸಿನಿಮಾ ಮೂಲಕ ಹೊಸ ಅವತಾರ ತಾಳಿದ್ದಾರೆ. ನಿನ್ನೆಯಷ್ಟೇ ನಟ ದೇವರಾಜ್ ಹುಟ್ಟುಹಬ್ಬ ಅನ್ನು ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ಸೆಲೆಬ್ರೇಟ್ ಮಾಡಿದ್ದರು. ಉಸಿರೇ ಉಸಿರೇ ಚಿತ್ರ ತಂಡ ನಟ ದೇವರಾಜ್ ಹುಟ್ಟುಹಬ್ಬಕ್ಕೆ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್​ ಮೂಲಕ ದೇವರಾಜ್ ಬಿಳಿ ಗಡ್ಡದಲ್ಲಿ ನೋಡುಗರಿಗೆ ಅಚ್ಚರಿ ಮೂಡಿಸಿದ್ದಾರೆ.

Usire Usire movie new poster released yesterday
ಹೊಸ ಲುಕ್​ನಲ್ಲಿ ನಟ ದೇವರಾಜ್

ರಾಜೀವ್ ಜೋಡಿಯಾಗಿ ಶ್ರೀಜಿತ ಕಾಣಿಸಿಕೊಂಡಿದ್ದು, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಹೀಗೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

ಇದನ್ನೂ ಓದಿ: ಖಡಕ್‌ ಪೊಲೀಸ್​ ಪಾತ್ರದಲ್ಲಿ ಮಿಂಚಿದ ಡೈನಾಮಿಕ್ ಹೀರೋ ದೇವರಾಜ್ ಜನ್ಮದಿನ

ಸಿ.ಎಂ.ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಮನು ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ. ವಿವೇಕ್ ಚಕ್ರವರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು. ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಉಸಿರೇ ಉಸಿರೇ ಸಿನಿಮಾ‌ ಸದ್ಯದಲ್ಲೇ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ದೇವರಾಜ್; ಖಳನಟರಾಗಿ ಬಂದು ಪೊಲೀಸ್​ ಪಾತ್ರದಲ್ಲಿ ಮಿಂಚಿದ ಡೈನಾಮಿಕ್ ಸ್ಟಾರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.