ಶನಿವಾರ ನಡೆದ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿತು. ರೋಹಿತ್ ಶರ್ಮಾ ನೇತೃತ್ವದ ತಂಡ ಅದ್ಭುತ ಆಟದ ಪ್ರದರ್ಶನ ನೀಡಿ, ಎದುರಾಳಿಯನ್ನು 8ನೇ ಬಾರಿಗೆ ಸೋಲಿಸಿ ದಾಖಲೆ ಬರೆಯಿತು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಮಹತ್ವದ ಪಂದ್ಯಕ್ಕೆ ವಿವಿಧ ಕ್ಷೇತ್ರಗಳ ಗಣ್ಯರೂ ಸಾಕ್ಷಿಯಾಗಿದ್ದರು. ಫ್ಯಾಷನ್ ಐಕಾನ್ ಊರ್ವಶಿ ರೌಟೇಲಾ ಕೂಡ ಮ್ಯಾಚ್ ನೋಡಲು ಹಾಜರಿದ್ದರು. ಈ ವೇಳೆ ಅವರು ತಮ್ಮ ಚಿನ್ನದ ಐಫೋನ್ ಕಳೆದುಕೊಂಡಿದ್ದಾರೆ.
-
📱 Lost my 24 carat real gold i phone at Narendra Modi Stadium, Ahmedabad! 🏟️ If anyone comes across it, please help. Contact me ASAP! 🙏 #LostPhone #AhmedabadStadium #HelpNeeded #indvspak@modistadium @ahmedabadpolice
— URVASHI RAUTELA🇮🇳 (@UrvashiRautela) October 15, 2023 " class="align-text-top noRightClick twitterSection" data="
Tag someone who can help
">📱 Lost my 24 carat real gold i phone at Narendra Modi Stadium, Ahmedabad! 🏟️ If anyone comes across it, please help. Contact me ASAP! 🙏 #LostPhone #AhmedabadStadium #HelpNeeded #indvspak@modistadium @ahmedabadpolice
— URVASHI RAUTELA🇮🇳 (@UrvashiRautela) October 15, 2023
Tag someone who can help📱 Lost my 24 carat real gold i phone at Narendra Modi Stadium, Ahmedabad! 🏟️ If anyone comes across it, please help. Contact me ASAP! 🙏 #LostPhone #AhmedabadStadium #HelpNeeded #indvspak@modistadium @ahmedabadpolice
— URVASHI RAUTELA🇮🇳 (@UrvashiRautela) October 15, 2023
Tag someone who can help
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿರುವ ಅವರು, ಇಂಡಿಯಾ ವರ್ಸಸ್ ಪಾಕಿಸ್ತಾನ ಪಂದ್ಯದ ವೇಳೆ ರಿಯಲ್ ಗೋಲ್ಡ್ ಐಫೋನ್ ಕಳೆದುಕೊಂಡಿದ್ದು, ಸಿಕ್ಕಿದ್ದಲ್ಲಿ ಹಿಂತಿರುಗಿಸುವಂತೆ ವಿನಂತಿಸಿದ್ದಾರೆ. "ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್ ರಿಯಲ್ ಗೋಲ್ಡ್ ಐಫೋನ್ ಕಳೆದುಹೋಗಿದೆ. ಯಾರಿಗಾದರೂ ಸಿಕ್ಕಿದ್ದಲ್ಲಿ, ದಯವಿಟ್ಟು ಸಹಾಯ ಮಾಡಿ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನನ್ನನ್ನು ಸಂಪರ್ಕಿಸಿ. #LostPhone #AhmedabadStadium #HelpNeeded #indvspak." ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Cricket World Cup 2023: ಪಾಕಿಸ್ತಾನ ವಿರುದ್ಧ ರೋಹಿತ್ ಭರ್ಜರಿ ಪ್ರದರ್ಶನ.. ಹಿಟ್ಮ್ಯಾನ್ ಪುಡಿಗಟ್ಟಿದ ದಾಖಲೆಗಳಿವು..
ಊರ್ವಶಿ ರೌಟೇಲಾ ಶನಿವಾರ ಸ್ಟೇಡಿಯಂಗೆ ಹೋಗುವ ಮುನ್ನ ಪಂದ್ಯದ ಟಿಕೆಟ್ಗಳನ್ನು ತೋರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ನಂತರ ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ಅನ್ನು ಆನಂದಿಸುತ್ತಿರುವ ನೋಟದೊಂದಿಗೆ ಅಭಿಮಾನಿಗಳನ್ನು ರಂಜಿಸಿದರು. ಈ ಹೈವೋಲ್ಟೇಜ್ ಮ್ಯಾಚ್ ನೋಡಲು ಬರುವಾಗ ರೂಪವತಿ ಬ್ಲೂ ಕಲರ್ ಮಿನಿ ಬಾಡಿಕಾನ್ ಡ್ರೆಸ್ ಧರಿಸಿದ್ದರು.
ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾದ ಸೆಲೆಬ್ರಿಟಿಗಳು: ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಲಕ್ಷಾಂತರ ಜನರು ನೆರೆದಿದ್ದರು. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಹಾಗು ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಕೆ.ಎಲ್.ರಾಹುಲ್ ಪತ್ನಿ ಹಾಗು ಬಾಲಿವುಡ್ ನಟಿ ಅಥಿಯಾ ಶೆಟ್ಟಿ, ರೋಹಿತ್ ಶರ್ಮಾ ಅವರ ಹೆಂಡತಿ ರಿತಿಕಾ ಸಜ್ದೇ ಸೇರಿದಂತೆ ಹಲವು ಸಿನಿಮಾ ಸೆಲೆಬ್ರಿಟಿಗಳು ಆಗಮಿಸಿದ್ದರು.
ಗೃಹ ಸಚಿವ ಅಮಿತ್ ಶಾ ಸಹ ಭಾಗಿ ಆಗಿದ್ದರು. ಖ್ಯಾತ ಗಾಯಕ ಅರಿಜಿತ್ ಸಿಂಗ್ ತಂಡದ ಗಾಯನದೊಂದಿಗೆ ಪಂದ್ಯ ಆರಂಭಗೊಂಡಿತ್ತು. ಪಂದ್ಯದ ಮತ್ತು ಸೆಲೆಬ್ರಿಟಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಮಾಡಿದ ದಾಖಲೆಗಳಿವು..!