ETV Bharat / entertainment

2 ಲಕ್ಷ ಮೌಲ್ಯದ ಬ್ಯಾಗ್​ ಹಿಡಿದು ಬಂದ ಊರ್ವಶಿ ರೌಟೇಲಾ: ಚೆಲುವೆಯ ವಿಡಿಯೋ ವೈರಲ್​ - Urvashi Rautela photo

ಸಾಮಾಜಿಕ ಜಾಲತಾಣದಲ್ಲಿ ನಟಿ ಊರ್ವಶಿ ರೌಟೇಲಾ ಅವರ ವಿಡಿಯೋ ವೈರಲ್​ ಆಗಿದೆ.

Urvashi Rautela
ಊರ್ವಶಿ ರೌಟೇಲಾ
author img

By ETV Bharat Karnataka Team

Published : Sep 28, 2023, 8:19 PM IST

ಚಿತ್ರರಂಗದ ಅತ್ಯಂತ ಸುಂದರ ನಟಿ ಊರ್ವಶಿ ರೌಟೇಲಾ ಸದಾ ಸೌಂದರ್ಯದ ಮೂಲಕವೇ ಸುದ್ದಿಯಾಗುತ್ತಾರೆ. ಜೊತೆಗೆ ಸೀಕ್ರೆಟ್ ಪೋಸ್ಟ್​​ಗಳನ್ನೂ ಶೇರ್ ಮಾಡುವ ಮೂಲಕ ಸಖತ್ ಸದ್ದು ಮಾಡುತ್ತಾರೆ. ಅಲ್ಲದೇ ತಮ್ಮ ಸೌಂದರ್ಯ ಪ್ರದರ್ಶಿಸುವ ಸರಣಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ.

ಮತ್ತೊಮ್ಮೆ 'ಗ್ರೇಟ್ ಗ್ರ್ಯಾಂಡ್ ಮಸ್ತಿ' ನಟಿ ಊರ್ವಶಿ ರೌಟೇಲಾ ಸೋಷಿಯಲ್​ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ನಟಿಯ ಸದ್ಯದ ಸುದ್ದಿ ತಿಳಿದರೆ ನೀವು ಹುಬ್ಬೇರಿಸೋದು ಪಕ್ಕಾ. ಈ ಬಾರಿ ನೆಟ್ಟಿಗರ ಗಮನ ಸೆಳೆದಿರೋದು ನಟಿಯ ಸೀಕ್ರೆಟ್​ ಪೋಸ್ಟ್ ಅಲ್ಲ, ಸಿನಿಮಾ ವಿಷಯ ಅಲ್ಲ, ಹಾಗಂತ ಹೊಸ ಫೋಟೋಗಳೂ ಅಲ್ಲ. ಬದಲಾಗಿ ನಟಿ ಹಿಡಿದ ಹ್ಯಾಂಡ್‌ಬ್ಯಾಗ್. ಬ್ಯಾಗ್ ದೊಡ್ಡ ಸುದ್ದಿಯಾಗಿದೆ. ಹೌದು, ನಟಿ ಊರ್ವಶಿ ರೌಟೇಲಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಚೆಲುವೆ ಕೈಯಲ್ಲಿ ದುಬಾರಿ ಬ್ಯಾಗ್​ ಅನ್ನು ಹಿಡಿದಿದ್ದಾರೆ.

ಪಾಪರಾಜಿಗಳು ಸೆಲೆಬ್ರಿಟಿಗಳ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮೆಚ್ಚಿನ ನಟ, ನಟಿಯರ ಫೋಟೋ - ವಿಡಿಯೋ ನೋಡಲು ಅಭಿಮಾನಿಗಳು ಕಾತರರಾಗಿರುತ್ತಾರೆ. ಅದರಂತೆ ಪಾಪರಾಜಿಗಳು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನಟಿಯ ವಿಡಿಯೋ ಶೇರ್ ಮಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದು ಏರ್​ಪೋರ್ಟ್​ನಲ್ಲಿ ಸೆರೆಹಿಡಿದಿರುವ ವಿಡಿಯೋ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 'ದಿ ವ್ಯಾಕ್ಸಿನ್​​ ವಾರ್' ರಿಲೀಸ್​​: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾದಲ್ಲಿ ಸಪ್ತಮಿ ಗೌಡ

ವೈರಲ್ ವಿಡಿಯೋದಲ್ಲಿ, ನಟಿ ಊರ್ವಶಿ ರೌಟೇಲಾ ದುಬಾರಿ ಹ್ಯಾಂಡ್​ಬ್ಯಾಗ್​ ಹಿಡಿದಿದ್ದಾರೆ. ಮಾಹಿತಿ ಪ್ರಕಾರ, ಫ್ಲವರ್​ ಪ್ರಿಂಟೆಡ್​​ ಬ್ಯಾಗ್ ಬೆಲೆ ಸುಮಾರು ಎರಡು ಲಕ್ಷ ರೂಪಾಯಿ. ಊರ್ವಶಿ ರೌಟೇಲಾ ಡೆನಿಮ್ ಡ್ರೆಸ್​ ಧರಿಸಿದ್ದು, ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸ್ಟೈಲಿಶ್, ಐಷಾರಾಮಿ ಬಟ್ಟೆಗಳು, ಹ್ಯಾಂಡ್‌ಬ್ಯಾಗ್‌ಗಳು ಮತ್ತು ಕಾರುಗಳನ್ನು ಇಷ್ಟಪಡುವ ಊರ್ವಶಿ ರೌಟೇಲಾ ಅವರ ಇತ್ತೀಚಿನ ಬ್ಯಾಗ್ ಕಂಡು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣವಾಗಿದ್ದು, ಬ್ಯಾಗ್​ ಬೆಲೆ. ಕಂದು ಬಣ್ಣದ ಪ್ಲವರ್​ ಪ್ರಿಂಟೆಂಡ್ ಬ್ಯಾಗ್​ ಕೂಡ ಬಹಳ ಆಕರ್ಷಣೀಯವಾಗಿ ಕಾಣಿಸಿಕೊಂಡಿದೆ. ಸಂಪೂರ್ಣ ಡೆನಿಮ್​ ಡ್ರೆಸ್​​, ಸನ್​ಗ್ಲಾಸ್​, ಜೊತೆಗೊಂದು ದುಬಾರಿ ಬ್ಯಾಗ್​ನಲ್ಲಿ ಚೆಲುವೆ ರಾಯಲ್​ ಲುಕ್​ ಬೀರಿದ್ದಾರೆ.

ಇದನ್ನೂ ಓದಿ: ವಿಕ್ಕಿ ಕೌಶಲ್​​ ಸಹೋದರನ ಜನ್ಮದಿನ: ಮೈದುನ ಸನ್ನಿ ಕೌಶಲ್​ಗೆ ವಿಶೇಷವಾಗಿ ಶುಭ ಕೋರಿದ ಕತ್ರಿನಾ ಕೈಫ್​​

ಸಹಜವಾಗಿ ಸುಂದರ ಫೋಟೋ, ವಿಡಿಯೋ, ಸೋಷಿಯಲ್​ ಮೀಡಿಯಾದಲ್ಲಿ ಸೀಕ್ರೆಟ್​ ಪೋಟೋ ಮೂಲಕ ಸದ್ದು ಮಾಡುವ ಈ ಚೆಲುವೆ ಆಗಾಗ್ಗೆ ಐಷಾರಾಮಿ ಜೀವನ ವಿಚಾರವಾಗಿ ಸದ್ದು ಮಾಡುತ್ತಾರೆ. ಅದರಂತೆ ಇದೀಗ 2 ಲಕ್ಷದ ಬ್ಯಾಗ್​ ಹಿಡಿದು ಸುದ್ದಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.