ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಮಾಡಿದ ಅಪರಾಧಿಗಳು ಮುಕ್ತವಾಗಿ ಓಡಾಡುವಾಗ ಈ ಎಲ್ಲ ರಾಜಕಾರಣಿಗಳನ್ನು ಬಂಧಿಸಬೇಕೆಂದು ನಾನು ಬಯಸುತ್ತೇನೆ. ಇದೊಂದು ದೊಡ್ಡ ವಿಪರ್ಯಾಸ. ಅತ್ಯಾಚಾರಿಗಳಿಗಿಂತ ನಾನು ಸಮಾಜಕ್ಕೆ ದೊಡ್ಡ ಬೆದರಿಕೆಯೇ? ನಾನು ಯಾವುದೇ ಮೊಕದ್ದಮೆಗಳನ್ನು ಬಯಸುವುದಿಲ್ಲ ಎಂದು ಉರ್ಫಿ ಜಾವೇದ್ ಚಿತ್ರಾ ವಾಘ್ ಅವರು ನೀಡಿದ ದೂರಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
- — Uorfi (@uorfi_) January 1, 2023 " class="align-text-top noRightClick twitterSection" data="
— Uorfi (@uorfi_) January 1, 2023
">— Uorfi (@uorfi_) January 1, 2023
ಚಿತ್ರಾ ವಾಘ್ ಅವರಿಗೆ ಉರ್ಫಿ ಜಾವೇದ್ ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರ ಆಸ್ತಿಯನ್ನು ಬಹಿರಂಗಪಡಿಸಿದರೆ ನಾನು ಜೈಲಿಗೆ ಹೋಗಲು ಸಿದ್ಧಳಿದ್ದೇನೆ. ನಿಮ್ಮ ಪಕ್ಷದ ಅನೇಕ ಪುರುಷರ ಮೇಲೆ ಲೈಂಗಿಕ ಕಿರುಕುಳದ ಆರೋಪವಿದೆ. ಚಿತ್ರಾ ವಾಘ್ ನೀವು ಮಹಿಳೆಯರಿಗಾಗಿ ಏನನ್ನೂ ಮಾಡುವುದನ್ನು ನಾನು ನೋಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
'ದೇಹದ ಅಂಗಾಂಗಗಳನ್ನು ಪ್ರದರ್ಶಿಸಿ ಮುಂಬೈನ ಬೀದಿಗಳಲ್ಲಿ ತಿರುಗಾಡುತ್ತಿರುವ ಮಾಡೆಲ್ ಉರ್ಫಿ ಜಾವೇದ್ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು' ಎಂದು ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಒತ್ತಾಯಿಸಿದ್ದರು. ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಆಯುಕ್ತ ಸತ್ಯನಾರಾಯಣ ಚೌಧರಿ ಅವರನ್ನು ಭೇಟಿ ಮಾಡಿ ಉರ್ಫಿ ಜಾವೇದ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಸಲ್ಲಸಿದ್ದಾರೆ. ಮುಂಬೈ ಪೊಲೀಸರು ಈ ಅರ್ಜಿಯ ಬಗ್ಗೆ ಗಮನ ಹರಿಸಿರಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಯಾವುದೇ ಕಾನೂನು ಕ್ರಮ ಕೈಗೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.
ಚಿತ್ರಾ ವಾಘ್ ಒತ್ತಾಯ ಏನು? ನಟಿ ಉರ್ಫಿ ಜಾವೇದ್ ರಸ್ತೆಯಲ್ಲಿ ತಮ್ಮ ದೇಹ ಪ್ರದರ್ಶಿಸುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಸಂವಿಧಾನ ನೀಡಿರುವ ನಡವಳಿಕೆಯ ಹಕ್ಕು, ಆಲೋಚನಾ ಸ್ವಾತಂತ್ರ್ಯವು ಇಂತಹ ಮುಕ್ತ ಮತ್ತು ದುರಹಂಕಾರದ ಧೋರಣೆಯಲ್ಲಿ ಉಪಯೋಗವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮುಂಬೈನ ಸಾರ್ವಜನಿಕ ಸ್ಥಳಗಳಲ್ಲಿ ಓರ್ವ ಮಹಿಳೆ ತನ್ನ ದೇಹವನ್ನು ಕೀಳಾಗಿ, ಅಸಹ್ಯಕರವಾಗಿ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಯ ನಾಗರಿಕತೆಗೆ ಅವಮಾನವಾಗಿದೆ.
ಈ ನಟಿ ತನ್ನ ಖಾಸಗಿ ಜೀವನದಲ್ಲಿ ಮಾಡುವ ಕೆಲಸಕ್ಕೂ ಸಮಾಜಕ್ಕೂ ಸಂಬಂಧವಿಲ್ಲ. ಆದರೆ, ಕೇವಲ ಖ್ಯಾತಿ ಗಳಿಸಲು ಈ ನಟಿ ತನ್ನ ದೇಹವನ್ನು ಮಾರ್ಕೆಟಿಂಗ್ ಮಾಡಿರುವುದು ಬೇಸರ ತರಿಸಿದೆ. ತನ್ನ ದೇಹವನ್ನು ಪ್ರದರ್ಶಿಸಲು ಬಯಸಿದರೆ, ಅದನ್ನು ನಾಲ್ಕು ಗೋಡೆಗಳ ಹಿಂದೆ ಮಾಡಬೇಕು. ಆದರೆ ಈ ರೀತಿ ಭಾವನೆಗಳನ್ನು ಕೆರಳಿಸುವ ಕಾರ್ಯದಿಂದ ಸಮಾಜದಲ್ಲಿ ವಿಕೃತ ಮನೋಭಾವವನ್ನು ಹೆಚ್ಚಿಸುತ್ತಿದ್ದೇವೆ. ಈ ನಟಿಗೆ ಇದರ ಅರಿವೇ ಇಲ್ಲ. ಹಾಗಾಗಿ ನಟಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಒತ್ತಾಯಿಸಿದೆ.
ಉರ್ಫಿ ಜಾವೇದ್ ಪ್ರತಿದಾಳಿ: ಪೊಲೀಸ್ ದೂರಿನಿಂದ 'ನನ್ನ ಹೊಸ ವರ್ಷ ಆರಂಭವಾಗಿದೆ' ಎಂದು ಉರ್ಫಿ ಹೇಳಿದ್ದಾರೆ. ಈ ರಾಜಕಾರಣಿಗಳಿಗೆ ಕೆಲಸವಿಲ್ಲವೇ? ಈ ರಾಜಕಾರಣಿಗಳಿಗೆ ಮತ್ತು ವಕೀಲರಿಗೆ ಅರ್ಥವಾಗುವುದಿಲ್ಲವೇ? ನಮ್ಮ ಸಂವಿಧಾನದ ಪ್ರಕಾರ ನಾನು ಸಾರ್ವಜನಿಕವಾಗಿ ನನ್ನ ಗುಪ್ತಾಂಗವನ್ನು ತೋರಿಸುವವರೆಗೆ ನನ್ನನ್ನು ಬಂಧಿಸಲು ಸಾಧ್ಯವಿಲ್ಲ. ಚಿತ್ರಾ ವಾಘ್ ನನ್ನ ಮೂಲಕ ಮಾಧ್ಯಮದ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ನಿಮಗೆ ನಿಜವಾಗಿಯೂ ಮಹಿಳೆಯರ ಮೇಲೆ ಕಾಳಜಿ ಇದ್ದಲ್ಲಿ ನಾನು ನಿಮಗೆ ಉತ್ತಮ ಸಲಹೆಗಳನ್ನು ನೀಡುತ್ತೇನೆ. ಲೈಂಗಿಕ ಕಳ್ಳಸಾಗಣೆ ವಿರುದ್ಧ ಕೆಲಸ ಮಾಡಿ, ಅಕ್ರಮ ಡ್ಯಾನ್ಸ್ ಬಾರ್‌ಗಳನ್ನು ನಿಷೇಧಿಸಿ, ಅಕ್ರಮ ವೇಶ್ಯಾವಾಟಿಕೆ ವ್ಯವಹಾರವನ್ನು ನಿಷೇಧಿಸಿ, ಈ ಎಲ್ಲಾ ಸಮಸ್ಯೆಗಳು ಮುಂಬೈನಲ್ಲಿವೆ ಅದರತ್ತ ಗಮನಹರಿಸಿ ಎಂದಿದ್ದಾರೆ.
ಇದನ್ನೂ ಓದಿ: ಉರ್ಫಿ ವೇಷಭೂಷಣಕ್ಕೆ ಬಿಜೆಪಿ ಆಕ್ಷೇಪ.. ಕ್ರಮಕ್ಕೆ ಆಗ್ರಹಿಸಿ ಮುಖಂಡರಿಂದ ಒತ್ತಾಯ